Webdunia - Bharat's app for daily news and videos

Install App

ವೆಸ್ಟ್ ಇಂಡೀಸ್ ಮೇಲೆ ಭಾರತದ ಪ್ರಾಬಲ್ಯ, ವಿರಾಟ್ ದ್ವಿಶತಕ, ಅಶ್ವಿನ್ ಶತಕ

Webdunia
ಶನಿವಾರ, 23 ಜುಲೈ 2016 (09:53 IST)
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸಂಪೂರ್ಣ ನಿಯಂತ್ರಣದ ಹೊಂದಿದ್ದು, ವಿರಾಟ್ ಕೊಹ್ಲಿ ಅವರ ಚೊಚ್ಚಲ ದ್ವಿಶತಕ  ಮತ್ತು ಅಶ್ವಿನ್ ಅವರ ಶತಕದ ನೆರವಿನಿಂದ ಎರಡನೇ ದಿನದಂದು ಭಾರತ 8ಕ್ಕೆ 566 ಬೃಹತ್ ಸ್ಕೋರ್ ಮಾಡಿದೆ.  ಟೀ ಬಳಿಕ ಭಾರತ ಡಿಕ್ಲೇರ್ ಮಾಡಿಕೊಂಡಿದ್ದು, ಮೊಹಮ್ಮದ್ ಶಮಿ ರಾಜೇಂದ್ರ ಚಂದ್ರಿಕಾರನ್ನು ಔಟ್ ಮಾಡಿ ವೆಸ್ಟ್ ಇಂಡೀಸ್ 6 ಓವರುಗಳಿಗೆ 31 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದೆ.

ಆತಿಥೇಯರು ಮೂರನೇ ದಿನದಾಟಕ್ಕೆ ತೆರಳುವ ಮುಂಚೆ ಭಾರತಕ್ಕಿಂತ 535 ರನ್‌ಗಳಷ್ಟು ಹಿಂದಿದ್ದಾರೆ. ನಾಯಕ ಕೊಹ್ಲಿಗೆ ಎರಡನೇ ದಿನ ಸ್ಮರಣೀಯವಾಗಿತ್ತು. ಅವರು  283 ಎಸೆತಗಳಲ್ಲಿ 200 ರನ್ ಚೊಚ್ಚಲ ದ್ವಿಶತಕವನ್ನು ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಸಾಧನೆ ಮಾಡಿದರು. ಅಶ್ವಿನ್ ಕೂಡ 253 ಎಸೆತಗಳಿಗೆ 113 ರನ್ ಗಳಿಸಿ ಮೂರನೇ ಶತಕ ದಾಖಲಿಸಿದರು. ಮೊದಲದಿನದಾಟದಲ್ಲಿ 4 ವಿಕೆಟ್‌ಗೆ 302 ರನ್ ಕಳೆದುಕೊಂಡಿದ್ದ ಭಾರತಕ್ಕೆ ವೆಸ್ಟ್ಇಂಡೀಸ್ ಬೌಲರುಗಳು ಮುಕ್ತವಾಗಿ ಸ್ಕೋರ್ ಮಾಡಲು ಅವಕಾಶ ನೀಡಿದರು. ಕೆಳಗಿನ ಕ್ರಮಾಂಕದ ಅಮಿತ್ ಮಿಶ್ರಾ ಕೂಡ 68 ಎಸೆತಗಳಲ್ಲಿ 53 ರನ್ ಸಿಡಿಸಿದರು.  ಮಿಶ್ರಾ ಬ್ರಾತ್‌ವೈಟ್‌ಗೆ ಔಟಾದ ಬಳಿಕ, 162ನೇ ಓವರಿನಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಲಾಯಿತು.
 
 ಕೊಹ್ಲಿ ತಮ್ಮ ಚೊಚ್ಚಲ ದ್ವಿಶತಕವನ್ನು ಗಳಿಸಿ ವಿದೇಶದಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾದರು. ಅವರು ಮೊಹಮ್ಮದ್ ಅಜರುದ್ದೀನ್‌ರ ದೀರ್ಘಕಾಲದ ನ್ಯೂಜಿಲೆಂಡ್ ವಿರುದ್ಧ 192 ರನ್ ದಾಖಲೆಯನ್ನು ಮುರಿದರು.  ಭಾರತ ದಿನದಾಟವನ್ನು 4 ವಿಕೆಟ್‌ಗೆ 302 ರನ್‍ಗಳೊಂದಿಗೆ ಮುಂದುವರಿಸಿತು.

ಕೊಹ್ಲಿ ನಿರಾತಂಕವಾಗಿ ತಮ್ಮ ಬ್ಯಾಟಿಂಗ್ ಮುಂದುವರಿಸಿ 150 ರನ್ ಗಡಿಯನ್ನು 208 ಎಸೆತಗಳಲ್ಲಿ ಗಳಿಸಿದರು. 100 ರನ್ ಜೊತೆಯಾಟವು 96ನೇ ಓವರಿನಲ್ಲಿ ಬಂದಿತು. ಬಳಿಕ ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಹಿಂದಿನ ಅತ್ಯಧಿಕ ಟೆಸ್ಟ್ ಸ್ಕೋರಾದ 169 ರನ್ ದಾಟಿದರು.

ಸ್ಕೋರು ವಿವರ
 ಭಾರತ ಮೊದಲ ಇನ್ನಿಂಗ್ಸ್  8ಕ್ಕೆ 566 ರನ್, 161.5 ಓವರು
ಮುರಳಿ ವಿಜಯ್ 7 ರನ್, ಶಿಖರ್ ಧವನ್ 84 ರನ್, ಚೇತೇಶ್ವರ್ ಪೂಜಾರಾ  16 ರನ್, ವಿರಾಟ್ ಕೊಹ್ಲಿ 200 ರನ್,  ಅಜಿಂಕ್ಯ ರಹಾನೆ 22 ರನ್, ಅಶ್ವಿನ್ 113, ವೃದ್ಧಿಮಾನ್ ಸಹಾ 40, ಅಮಿತ್ ಮಿಶ್ರಾ 53 ರನ್, ಮೊಹಮ್ಮದ್ ಶಮಿ 17 ರನ್
 ವಿಕೆಟ್ ಪತನ 14-1 (ಮುರಳಿ ವಿಜಯ್, 6.2), 74-2 (ಚೇತೇಶ್ವರ ಪೂಜಾರ, 27.4), 179-3 (ಶಿಖರ್ ಧವನ್, 54.5), 236-4 (ಅಜಿಂಕ್ಯ ರಹಾನೆ, 67.2), 404-5 (ವಿರಾಟ್ ಕೊಹ್ಲಿ, 119.2), 475-6 (ವೃದ್ಧಿಮಾನ್ ಸಹಾ, 143.6), 526-7 (ರವಿಚಂದ್ರನ್ ಅಶ್ವಿನ್, 157.3), 566-8 (ಅಮಿತ್ ಮಿಶ್ರಾ 161.5)
ಬೌಲಿಂಗ್ ವಿವರ: 
ಶಾನನ್ ಗ್ಯಾಬ್ರಿಯಲ್ 2 ವಿಕೆಟ್,  ದೇವೇಂದ್ರ ಬಿಶೂ 3 ವಿಕೆಟ್, ಬ್ರಾತ್‌ವೈಟ್ 3 ವಿಕೆಟ್
 ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 31ಕ್ಕೆ 1 ವಿಕೆಟ್  
ಬ್ರಾತ್‌ವೈಟ್ ಅಜೇಯ 11, ರಾಜೇಂದ್ರ ಚಂದ್ರಿಕಾ 16 ರನ್, ದೇವೇಂದ್ರ ಬಿಶೂ ಅಜೇಯ 0
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments