Webdunia - Bharat's app for daily news and videos

Install App

ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ: ಜಯದ ನಿರೀಕ್ಷೆಯಲ್ಲಿ ಧೋನಿ ಬಳಗ

Webdunia
ಶನಿವಾರ, 11 ಜೂನ್ 2016 (11:57 IST)
ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಯುವ ತಂಡವು ಕಡಿಮೆ ಶ್ರೇಯಾಂಕದ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಸರಣಿಯ ಮೊದಲ ಏಕ ದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಶನಿವಾರ ಆಡಲಿದ್ದು, ಭಾರತ ಫೇವರಿಟ್ ಎನಿಸಿಕೊಂಡಿದೆ. ಆದರೆ ಜಯಕ್ಕಿಂತ ಹೆಚ್ಚಾಗಿ ಈ ಪ್ರವಾಸವು ಭಾರತದ ಭವಿಷ್ಯದ ಭರವಸೆಯ ಆಟಗಾರರನ್ನು ಗುರುತಿಸುತ್ತದೆಂದು ನಿರೀಕ್ಷಿಸಲಾಗಿದೆ. 
 
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಅಶ್ವನ್ ಮುಂತಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಎರಡನೇ ಆಯ್ಕೆಯ ತಂಡವನ್ನು ಮುನ್ನಡೆಸುವಲ್ಲಿ ಧೋನಿ ಸವಾಲು ಎದುರಿಸಿದ್ದಾರೆ. ಸುರೇಶ್ ರೈನಾ ಮತ್ತು ರಹಾನೆ ಜಿಂಬಾಬ್ವೆಯಲ್ಲಿ ಭಾರತದ ಪ್ರಾಯೋಗಿಕ ಸೀಮಿತ ಓವರುಗಳ ತಂಡಕ್ಕೆ ನಾಯಕತ್ವ ವಹಿಸಿದ್ದರು. ಆದರೆ ಜಿಂಬಾಬ್ವೆಯಲ್ಲಿ ಧೋನಿ ನಾಯಕರಾಗಿ ಇದೇ ಮೊದಲ ಬಾರಿಗೆ ಆಡುತ್ತಿರುವುದು.
 
ಇದೊಂದು ಭಿನ್ನ ಅನುಭವವಾಗಲಿದೆ. ದ್ವಿಪಕ್ಷೀಯ ಸರಣಿಯಲ್ಲಿ ಕೆಲವು ಆಟಗಾರರ ಜತೆ ಮೊದಲ ಬಾರಿ ಆಡುತ್ತಿದ್ದೇನೆ ಎಂದು ಜಿಂಬಾಬ್ವೆಗೆ ನಿರ್ಗಮಿಸುವ ಮುಂಚೆ ಧೋನಿ ಹೇಳಿದ್ದರು.  ಅವರ ಬಲಗಳೇನು ಎನ್ನುವುದನ್ನು ಶೀಘ್ರದಲ್ಲೇ ಅಂದಾಜು ಮಾಡಿ ತಂಡದ ರಚನೆ ಆಧರಿಸಿ, ಆಟಗಾರರನ್ನು ಹೇಗೆ ಬಳಸಿಕೊಳ್ಳಬಹುದೆಂದು ಯೋಚಿಸುತ್ತೇನೆ. ತಂಡದ ಸಂಯೋಜನೆ ಚೆನ್ನಾಗಿ ಕಾಣುತ್ತಿದೆ ಎಂದು ಧೋನಿ ಪ್ರತಿಕ್ರಿಯಿಸಿದ್ದರು.
 
 ಸರಣಿ ಜಯವನ್ನು ಪ್ರತಿಯೊಬ್ಬರೂ ನಿರೀಕ್ಷಿಸಿದ್ದು, ಇದೇ ಸಂದರ್ಭದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದರೆ ಧೋನಿಯ ಕ್ರಿಕೆಟ್ ಭವಿಷ್ಯದ ಮೇಲೆ  ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ.
 
ಮುಂದಿನ ತವರು ವೇಳಾಪಟ್ಟಿಯಲ್ಲಿ ಟೆಸ್ಟ್ ಪಂದ್ಯಗಳೇ ಹೆಚ್ಚಾಗಿದ್ದು, ಭಾರತ ಕೆಲವೇ ಏಕದಿನ ಮತ್ತು ಟಿ 20ಗಳನ್ನು ಈ ಸೀಸನ್‌ನಲ್ಲಿ ಆಡಲಿದೆ. ಧೋನಿ ಟೆಸ್ಟ್ ಮಾದರಿಯಿಂದ ನಿವೃತ್ತಿಯಾಗಿರುವುದರಿಂದ ಧೋನಿಯ ಆಟ ನೋಡಲು ಇದೊಂದು ಕೊನೆಯ ಅವಕಾಶವಾಗಿದೆ.
 
 ಜಿಂಬಾಬ್ವೆ ಪ್ರವಾಸದ ಬಳಿಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಟೆಸ್ಟ್ ಪ್ರವಾಸಕ್ಕೆ ಕೆರಿಬಿಯನ್‌ಗೆ ತೆರಳಲಿದೆ.
ಈಗಿರುವ ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಬಿಟ್ಟರೆ ಇತರೆ ಯುವ ಆಟಗಾರರ ಪೈಕಿ ಯಾರೊಬ್ಬರೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇರುವುದಿಲ್ಲ. ಮನೀಶ್ ಪಾಂಡೆಗೆ ಜಿಂಬಾಬ್ವೆ ಸುವರ್ಣ ಅವಕಾಶವಾಗಿದೆ. ಉತ್ತಮ ಪ್ರದರ್ಶನ ನೀಡಿದರೆ ಭವಿಷ್ಯದಲ್ಲಿ 11 ಮಂದಿಯ ತಂಡದಲ್ಲಿ ರೈನಾಗೆ ಬದಲಿಯಾಗಿ ಆಡಬಹುದು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments