Select Your Language

Notifications

webdunia
webdunia
webdunia
webdunia

ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್‌ಅನ್ನು ಮಣಿಸಿದ ಕ್ರಿಕೆಟ್ ಶಿಶು ಐರ್ಲೆಂಡ್

ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್‌ಅನ್ನು ಮಣಿಸಿದ ಕ್ರಿಕೆಟ್ ಶಿಶು ಐರ್ಲೆಂಡ್
ಓವಲ್ , ಸೋಮವಾರ, 16 ಫೆಬ್ರವರಿ 2015 (11:54 IST)
2 ಬಾರಿ ವಿಶ್ವ ಕಪ್ ಚಾಂಪಿಯನ್ನರಾಗಿದ್ದ ದೈತ್ಯ ವೆಸ್ಟ್ ಇಂಡೀಸ್  ತಂಡವನ್ನು 2015ನೇ ವಿಶ್ವಕಪ್ ಪಂದ್ಯದಲ್ಲಿ ಮಣಿಸಿದ ಕ್ರಿಕೆಟ್ ಶಿಶು ಐರ್ಲೆಂಡ್ ಅಚ್ಚರಿ ಫಲಿತಾಂಶ ನೀಡಿದೆ.ವೆಸ್ಟ್ ಇಂಡೀಸ್‌ ನೀಡಿದ್ದ 305ರನ್ ಗುರಿಯ ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸುವ ಮೂಲಕ  ಗೆಲುವನ್ನು ತಮ್ಮದಾಗಿಸಿಕೊಂಡಿದೆ.
 
ವೆಸ್ಟ್ ಇಂಡೀಸ್ ಸ್ಕೋರನ್ನು 45.5 ಓವರುಗಳಲ್ಲೇ ಮುಟ್ಟಿ ಜಯವನ್ನು ತನ್ನದಾಗಿಸಿಕೊಂಡಿತು.ಐದು ಪಂದ್ಯಗಳಲ್ಲಿ ಎರಡನೆಯದಾಗಿ ಬ್ಯಾಟಿಂಗ್‌ಗೆ ಇಳಿದ ತಂಡ ಮೊದಲ ಬಾರಿಗೆ ಜಯಗಳಿಸಿದೆ. 2011 ವಿಶ್ವಕಪ್‌ನಲ್ಲಿ ಕೂಡ ಐರ್ಲೆಂಡ್ ಇಂಗ್ಲೆಂಡ್ ವಿರುದ್ಧ ಜಯಗಳಿಸಿತ್ತು.

ಸಾಕ್ಸ್‌ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 305 ರನ್ ಬೆನ್ನಟ್ಟಿದ ಐರ್ಲೆಂಡ್ ಪರ ಪಾಲ್ ಸ್ಟರ್‌ಲಿಂಗ್ 92, ಎಡ್ ಜಾಯ್ಸ್ 84 ಮತ್ತು ನಯಾಲ್ ಓಬ್ರೈನ್ ಅಜೇಯ 79 ರನ್ ನೆರವಾಯಿತು.ಪೂಲ್ ಬಿ ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್‌ ಆಡಿಸಲಾಯಿತು.

ಸಿಮ್ಮನ್ಸ್ ಅವರ 102 ಮತ್ತು ಸ್ಯಾಮಿ ಅವರ 89 ರನ್ ನೆರವಿನಿಂದ ವೆಸ್ಟ್ ಇಂಡೀಸ್ 304 ರನ್ ಭರ್ಜರಿ ಸ್ಕೋರ್ ಮಾಡಿತು. ಆದರೆ ಕ್ರಿಕೆಟ್ ಶಿಶು ಐರ್ಲೆಂಡ್ ಈ ಸ್ಕೋರನ್ನು ಬೆನ್ನಟ್ಟಿ ಯಶಸ್ವಿಯಾಗುತ್ತದೆಂದು ಅವರು ಊಹಿಸದೇ ಐರ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಿದ್ದೇ ಅವರಿಗೆ ಮುಳುವಾಯಿತು. 

Share this Story:

Follow Webdunia kannada