Webdunia - Bharat's app for daily news and videos

Install App

ಐದನೇ ವಿಶ್ವಕಪ್ ಪ್ರಶಸ್ತಿಗೆ ಆಸ್ಟ್ರೇಲಿಯಾ ಯೋಗ್ಯ: ಐಸಿಸಿ

Webdunia
ಸೋಮವಾರ, 30 ಮಾರ್ಚ್ 2015 (14:29 IST)
11ನೇ ವಿಶ್ವಕಪ್ ಪಂದ್ಯಾವಳಿಯನ್ನು ಅತ್ಯಂತ ಜನಪ್ರಿಯ ಎಂದು ಐಸಿಸಿ ಶ್ಲಾಘಿಸಿದ್ದು,  ಭಾನುವಾರದ ಫೈನಲ್ ಪಂದ್ಯವನ್ನು ನ್ಯೂಜಿಲೆಂಡ್ ಗೆಲ್ಲಬೇಕೆಂದು ಅನೇಕ ಮಂದಿ ತಟಸ್ಥ ಅಭಿಮಾನಿಗಳು ಬಯಸಿದ್ದರೂ, ಆಸ್ಟ್ರೇಲಿಯಾ ಐದನೇ  ಬಾರಿಗೆ ಪ್ರಶಸ್ತಿ ಗಳಿಸುವುದಕ್ಕೆ ಯೋಗ್ಯರಾಗಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದೆ.

ದೊಡ್ಡ ಹಿಟ್ಟರ್‌ಗಳು, ಅಸಾಮಾನ್ಯ ಬ್ಯಾಟ್ಸ್‌ಮನ್‌ಗಳಾದ ನ್ಯೂಜಿಲೆಂಡ್ ಬ್ರೆಂಡ್ ಮೆಕಲಮ್, ದಕ್ಷಿಣ ಆಫ್ರಿಕಾದ ಡಿ ವಿಲಿಯರ್ಸ್ ಮತ್ತು ಆಸೀಸ್‌ನ ಮ್ಯಾಕ್ಸ್‌ವೆಲ್ ಪಂದ್ಯಾವಳಿಗೆ ಮೆರುಗು ತಂದರು ಮತ್ತು 50 ಓವರುಗಳ ಪಂದ್ಯ ಹೇಗೆ ಪರಿವರ್ತನೆಯಾಗಿದೆ ಎಂದು ತೋರಿಸಿದರು. 

ಮೈಕೇಲ್ ಕ್ಲಾರ್ಕ್ ತಂಡವು ಆಳವಾದ ಬ್ಯಾಟಿಂಗ್, ಪ್ರಬಲವಾದ ಫೀಲ್ಡಿಂಗ್ ಮತ್ತು ಅದಕ್ಕಿಂತ ಹೆಚ್ಚಾಗಿ ವಿಕೆಟ್ ಪಡೆಯುವ ಬೌಲರ್‍‌ಗಳ ಮಿಶ್ರಣದಿಂದ ಕೂಡಿದ್ದು, ಪಂದ್ಯಾವಳಿಯ ತಕ್ಕ ವಿಜೇತರಾಗಿದ್ದಾರೆ ಎಂದು ಐಸಿಸಿ ಹೇಳಿದೆ. ಕೆಲವು ಸುಧಾರಿತ ಹೊಡೆತಗಳ ಮೂಲಕ ಎಲ್ಲಾ ಕಡೆ ಬೌಂಡರಿಗಳನ್ನು ಚಚ್ಚಿದರು ಮತ್ತು ಸಿಕ್ಸರ್‌ಗಳನ್ನು ಬೌಂಡರಿಗಳ ರೀತಿಯಲ್ಲಿ ಬಾರಿಸಿದರು.

ಈ ಬಾರಿಯ ವಿಶ್ವಕಪ್ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ, ಅಭಿಮಾನಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎಲ್ಲಾ ಕಡೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಬಂದರು. ಎಲ್ಲ 49 ಪಂದ್ಯಗಳಿಂದ ಒಟ್ಟು 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿ ಪಂದ್ಯಗಳನ್ನು ವೀಕ್ಷಿಸಿದ್ದು, ಟಿವಿಯಲ್ಲಿ ದಾಖಲೆ ಸಂಖ್ಯೆಯಲ್ಲಿ ವೀಕ್ಷಿಸಿದರು. ಫೈನಲ್ಸ್‌ನಲ್ಲಿ ಕೊನೆಯ ಸಿಕ್ಸರ್ ಹೊಡೆದಾಗ, ಅಂತಿಮ ಬ್ಯಾಟಿಂಗ್ ಪವರ್ ಪ್ಲೇ ಮುಕ್ತಾಯವಾಗಿದ್ದು, ಮೆಲ್ಬರ್ನ್ ಮೈದಾನದ ಬಹುತೇಕ ಅಭಿಮಾನಿಗಳು ತವರು ತಂಡದ ಜಯವನ್ನು ಹರ್ಷಿಸಿದರು.  

ಏಕ ದಿನ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ತಂಡದ ರನ್‌ಗಳ ನಿಯಂತ್ರಣವು ಮುಗಿದಿದ್ದು, ರನ್‌ಗಳು ಸ್ಕೋರ್ ಮಾಡದಂತೆ ತಡೆಯುವ ಅತ್ಯುತ್ತಮ ವಿಧಾನ ವಿಕೆಟ್ ತೆಗೆಯುವುದಾಗಿದೆ. ಸ್ಟಾರ್ಕ್ 22 ವಿಕೆಟ್‌ಗಳನ್ನು ಪಂದ್ಯಾವಳಿಯಲ್ಲಿ ಕಬಳಿಸಿ ಟ್ರೆಂಟ್ ಬೌಲ್ಟ್ ಅವರನ್ನು ಮೀರಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments