Webdunia - Bharat's app for daily news and videos

Install App

ಜಾಕ್ವಾಸ್ ಕಾಲಿಸ್ ಸರ್ವಕಾಲಿಕ ಶ್ರೇಷ್ಠ ಆಟಗಾರ?

Webdunia
- ನಾಗರಾಜ ಬೇಳ

WD


ಬಹುಶ: ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಾಹುಲ್ ದ್ರಾವಿಡ್ ರೀತಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಟೆಸ್ಟ್ ರನ್ನುಗಳನ್ನು ಕಲೆ ಹಾಕುವುದು ಹಾಗೂ ಜಹೀರ್ ಖಾನ್‌ ತರಹನೇ 250ಕ್ಕೂ ಹೆಚ್ಚು ವಿಕೆಟುಗಳನ್ನು ಕಬಳಿಸುವುದೆಂದರೆ ಸುಲಭದ ಮಾತಲ್ಲ.

ಆದರೆ ಈ ಎರಡೂ ಸಾಧನೆಯನ್ನು ಓರ್ವ ಆಟಗಾರನೇ ಮಾಡಿದರೆ ಅಂತವರನ್ನು ನೀವು ಏನೆಂದು ಹೆಸರಿಸುವಿರಿ? ಹೌದು, ದಕ್ಷಿಣ ಆಫ್ರಿಕಾದ ಜಾಕ್ವಾಸ್ ಕಾಲಿಸ್ ಸರ್ವಶ್ರೇಷ್ಠ ಆಲ್‌ರೌಂಡರ್ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,000ದಷ್ಟು ರನ್ಸ್, 500ಕ್ಕಿಂತಲೂ ಹೆಚ್ಚು ವಿಕೆಟ್ ಹಾಗೂ 300ಕ್ಕಿಂತಲೂ ಅಧಿಕ ಕ್ಯಾಚ್ ಪಡೆದ ಆಟಗಾರನಿಗೆ ಯಾವ ಸ್ಥಾನ ನೀಡಬೇಕು ಎಂಬುದು ಸಹಜವಾಗಿ ಮೂಡಿಬರುವ ಪ್ರಶ್ನೆ.

ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್, ಬ್ರ್ಯಾನ್ ಲಾರಾ, ರಾಹುಲ್ ದ್ರಾವಿಡ್ ಹಾಗೂ ರಿಕಿ ಪಾಂಟಿಂಗ್ ಅವರಂತಹ ದಿಗ್ಗಜರು ಕೇವಲ ಒಂದು ವಿಭಾಗಕ್ಕೆ (ಬ್ಯಾಟಿಂಗ್) ಮಾತ್ರ ಸೀಮಿತವಾದವರು. ಆದರೆ ಈ ಎಲ್ಲದರ ನಡುವೆ ಎಲ್ಲ ಮೂರು ವಿಭಾಗದಲ್ಲೂ ತಮ್ಮ ಚಾಣಕ್ಷತೆ ತೋರಿರುವ ದಕ್ಷಿಣ ಆಫ್ರಿಕಾ ಹಿರಿಯ ಆಟಗಾರ ಕಾಲಿಸ್ ಸರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.

ಅದು ಟೆಸ್ಟ್ ಆಗಿರಬಹುದು ಏಕದಿನ ಅಥವಾ ಟ್ವೆಂಟಿ-20. ಇವೆಲ್ಲದರಲ್ಲೂ 'ಫುಲ್ ಟೈಮ್ ಕ್ರಿಕೆಟಿಗ' ಎನಿಸಿಕೊಂಡಿರುವ ಕಾಲಿಸ್ ಕ್ರಿಕೆಟ್ ಜೀವನದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಶ್ಲಾಘನೀಯ.

ದ್ರಾವಿಡ್ ಅವರಂತೆಯೇ ಮೂರನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಕಾಲಿಸ್ 12 ಸಾವಿರ ಟೆಸ್ಟ್ ರನ್ನುಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 42 ಶತಕಗಳು ಸೇರಿವೆ. ಒಂದು ವೇಳೆ ಇನ್ನು ಎರಡು ವರ್ಷ ಕ್ರಿಕೆಟ್‌ನಲ್ಲಿ ಮುಂದುವರಿಯಲು ಸಾಧ್ಯವಾದ್ದಲ್ಲಿ ಸಚಿನ್ ಅವರ 50 ಟೆಸ್ಟ್ ಶತಕ ದಾಖಲೆಯನ್ನು ಸಹ ಬಹುಶಃ ಸರಿಗಟ್ಟಬಲ್ಲರು.

ಇವೆಲ್ಲಕ್ಕೂ ಮಿಗಿಲಾಗಿ ಕಾಲಿಸ್ 10,000 ಟೆಸ್ಟ್ ರನ್ಸ್ ಹಾಗೂ 250 ವಿಕೆಟುಗಳನ್ನು ಕಬಳಿಸಿದ ವಿಶ್ವದ ಏಕೈಕ ಕ್ರಿಕೆಟಿಗನಾಗಿದ್ದು, ಟೆಸ್ಟ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಶತಕ ಸಾಧನೆಯೂ ಅವರ ಹೆಸರಲ್ಲಿದೆ.

WD


ಕಾಲಿಸ್ ಕ್ರಿಕೆಟ್ ಬಗ್ಗೆ ಒಂದಿಷ್ಟು...

ಪೂರ್ಣ ಹೆಸರು: ಜಾಕ್ವಾಸ್ ಹೆನ್ರಿ ಕಾಲಿಸ್
ಜನನ: 16 ಅಕ್ಟೋಬರ್, 1975, ಪೈನ್‌ಲ್ಯಾಂಡ್, ಕೇಪ್‌ಟೌನ್
ಬೌಲಿಂಗ್ ಶೈಲಿ: ಬಲಗೈ ಮಧ್ಯಮ ಗತಿಯ ವೇಗದ ಬೌಲರ್
ಬ್ಯಾಟಿಂಗ್ ಶೈಲಿ: ಬಲಗೈ
ಪಾತ್ರ: ಆಲ್‌ರೌಂಡರ್

ಟೆಸ್ಟ್ ಪದಾರ್ಪಣೆ: ಇಂಗ್ಲೆಂಡ್ ವಿರುದ್ಧ 14 ಡಿಸೆಂಬರ್, 1995
ಏಕದಿನ ಪದಾರ್ಪಣೆ: ಇಂಗ್ಲೆಂಡ್ ವಿರುದ್ಧ 9 ಜನವರಿ, 1996
ಪ್ರಮುಖ ತಂಡಗಳು: ದಕ್ಷಿಣ ಆಫ್ರಿಕಾ, ಕೊಲ್ಕತಾ ನೈಟ್ ರೈಡರ್ಸ್, ಕೇಪ್ ಕೋಬ್ರಾಸ್

ಕೆರಿಯರ್:

ಟೆಸ್ಟ್: ಪಂದ್ಯ- 151, ರನ್ಸ್- 12,367, ಬ್ಯಾಟಿಂಗ್ ಸರಾಸರಿ- 57.02, ಶತಕ- 42, ಅರ್ಧಶತಕ- 55, ಗರಿಷ್ಠ- 224, ವಿಕೆಟ್- 274, 5 ವಿಕೆಟ್ (ಇನ್ನಿಂಗ್ಸ್‌ವೊಂದರಲ್ಲಿ)- 5, ಶ್ರೇಷ್ಠ ಬೌಲಿಂಗ್- 6/54, ಕ್ಯಾಚ್- 180

ಏಕದಿನ: ಪಂದ್ಯ- 319, ರನ್ಸ್- 11,481, ಬ್ಯಾಟಿಂಗ್ ಸರಾಸರಿ- 45.55, ಶತಕ- 17, ಅರ್ಧಶತಕ- 85, ಗರಿಷ್ಠ- 139, ವಿಕೆಟ್- 267, 5 ವಿಕೆಟ್ (ಪಂದ್ಯವೊಂದರಲ್ಲಿ)- 2, ಶ್ರೇಷ್ಠ ಬೌಲಿಂಗ್- 5/30, ಕ್ಯಾಚ್- 123

ಟ್ವೆಂಟಿ-20: ಪಂದ್ಯ- 16, ರನ್ಸ್- 512, ಬ್ಯಾಟಿಂಗ್ ಸರಾಸರಿ- 34.13, ಅರ್ಧಶತಕ- 4, ಗರಿಷ್ಠ- 73, ವಿಕೆಟ್- 5, ಶ್ರೇಷ್ಠ ಬೌಲಿಂಗ್- 2/20, ಕ್ಯಾಚ್- 6

ವೆಬ್ದುನಿಯಾವನ್ನು ಓದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments