Select Your Language

Notifications

webdunia
webdunia
webdunia
webdunia

ದಕ್ಷಿಣ ಭಾರತದಲ್ಲಿ ಕೇಂದ್ರೀಕೃತವಾದ ಕಾಫೀ

ದಕ್ಷಿಣ ಭಾರತದಲ್ಲಿ ಕೇಂದ್ರೀಕೃತವಾದ ಕಾಫೀ
ಸುಮಾರು 1820ರ ಅವಧಿಯಲ್ಲಿ ಬ್ರಿಟಿಷ್ ಬೆಳೆಗಾರರು ಬಾರತದಲ್ಲಿ ಕಾಫಿಯ ವಾಣಿಜ್ಯ ವ್ಯವಸಾಯವನ್ನು ಪ್ರಾರಂಭಿಸಿದರು. ನಂತರ 19ನೇ ಶತಮಾನದ ಕೊನೆಯಲ್ಲಿ ದಕ್ಷಿಣ ಪರ್ಯಾಯ ದ್ವೀಪಗಳ ಪಶ್ಚಿಮ ಭಾಗದಲ್ಲಿರುವ ಏರುಪೇರಾದ ಬೆಟ್ಟಗಳಲ್ಲಿ , ದೇಶದ ಕಾಫಿ ಉದ್ದಿಮೆಯ ಬೆನ್ನೆಲುಬಾಗಿರುವ ಅಸಾಮಾನ್ಯ ಶೈಲಿಯ ಮರಗಿಡಗಳು ಮತ್ತು ಪಶ್ಚಿಮಘಟ್ಟಗಳಲ್ಲಿ ಕಾಫಿ ಎಸ್ಟೇಟ್‌ಗಳು ಪ್ರಬಲಗೊಂಡವು.

ಅರಣ್ಯ ನಿಕ್ಷೇಪಗಳು ಮತ್ತು ಸಮೃದ್ಧವಾದ ಹಸಿರು ಬೆಟ್ಟಗಳು ವನ್ಯಮೃಗಗಳಿಂದ ಹಾಗೂ ಕಾಫಿ, ಟೀ ,ಸಾಂಬಾರಗಳಿಂದ ತುಂಬಿ ತುಳುಕುತ್ತಿವೆ. ಸಾಂಪ್ರದಾಯಿಕವಾಗಿ ಕಾಫಿ ಬೆಳೆಯುವ ಭಾರತದ ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ ಮತ್ತು ತಮಿಳುನಾಡುಗಳು ದೇಶದ ಕಾಫಿ ಬೆಳೆಯಲ್ಲಿನ ಶೇಕಡಾ 98ರಷ್ಟು ಕಾಫಿಯನ್ನು ಬೆಳೆಯುತ್ತಿದ್ದು, ಅದರಲ್ಲಿ ಶೇಕಡಾ 68ರಷ್ಟು ಕಾಫಿಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ, ಆಂಧ್ರ ಪ್ರದೇಶ ಹಾಗೂ ಒರಿಸ್ಸಾದ ಪೂರ್ವ ಘಟ್ಟಗಳಲ್ಲಿನ ಬುಡಗಟ್ಟು ಪ್ರದೇಶಗಳಿಗೆ ಹಾಗೂ ಈಶಾನ್ಯ ರಾಜ್ಯಗಳಿಗೆ ಕಾಫಿ ವ್ಯವಸಾಯವನ್ನು ವಿಸ್ತರಿಸಲಾಗಿದೆ.ಕಾರ್ಪೊರೇಟ್ ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ ಕಾಫಿಯನ್ನು ಬೆಳೆಸಿದರೆ, ಸಣ್ಣ ಪ್ರಮಾಣದ ಬೆಳೆಗಾರರು ಸಣ್ಣ ಪ್ರಮಾಣದಲ್ಲಿ ಈ ವ್ಯವಸಾಯವನ್ನು ಮಾಡುತ್ತಾರೆ.

Share this Story:

Follow Webdunia kannada