Webdunia - Bharat's app for daily news and videos

Install App

ಸೂರ್ಯ-ಶನಿಯರ ಸಮಾಗಮ: ಜೀವನದಲ್ಲಿ ಸಂಘರ್ಷ

Webdunia
ಭಾರತಿ ಪಂಡಿತ್

ಸೂರ್ಯ ಮತ್ತು ಶನಿ ಅಪ್ಪ ಮತ್ತು ಮಗ ಆಗಿದ್ದರೂ ಪರಸ್ಪರ ಶತ್ರುತ್ವ ಹೊಂದಿದ್ದಾರೆ. ಜ್ಞಾನ ವಿಜ್ಞಾನದಲ್ಲಿರುವಂತೆಯೇ ಪಾಸಿಟಿವ್ ಹಾಗೂ ನೆಗೆಟಿವ್‌ಗಳ ಸಮಾಗಮದಿಂದ ಯಾವತ್ತೂ ನೆಗೆಟಿವ್ ಉತ್ತರವಾಗುವಂತೆಯೇ, ಸಾತ್ವಿಕ ಹಾಗೂ ತಾಮಸ ಗುಣಗಳ ಸಮಾಗಮದಲ್ಲಿ ತಾಮಸ ಗುಣವೇ ವೈಭವೀಕರಿಸುತ್ತದೆ. ಇಲ್ಲಿಯೂ ಅಷ್ಟೆ. ಕುಂಡಲಿಯಲ್ಲಿ ಶನಿ ಹಾಗೂ ಸೂರ್ಯನ ಸಮಾಗಮವಾದರೆ ಅಂಥವರ ಜೀವನ ಸಂಘರ್ಷಮಯವಾಗಿರುವುದರಲ್ಲಿ ಸಂಶಯವೇ ಇಲ್ಲ.

ವಿಶೇಷವೆಂದರೆ ಈ ಸಮಾಗಮವಾದ ಲಗ್ನ, ಪಂಚಮ, ನವಮ ಅಥವಾ ದಶಮ ಸ್ಥಾನದ್ಲಲಿದ್ದರೆ, ಅಥವಾ ಇನ್ಯಾವುದೋ ಗ್ರಹ ಈ ಇಬ್ಬರು ಸಮಾಗಮಿಗಳ ಕಾರಕನಾಗಿದ್ದರೆ ಜೀವನದಲ್ಲಿ ಎಲ್ಲವೂ ವಿಳಂಬವಾಗಬಹುದು. ಬಹಳ ಕಷ್ಟ, ಪರಿಶ್ರಮದ ನಂತರವಷ್ಟೇ ಫಲ ಕಾಣುವುದು, ತಂದೆ ಹಾಗೂ ಮಗನಲ್ಲಿ ಯಾವತ್ತೂ ಜಗಳವೇ ನಡೆಯುವುದು, ಅಥವಾ ಅಪ್ಪ-ಮಗ ದೂರ ದೂರವಾಗುವುದು ಇಂತಹ ಘಟನೆಗಳು ಜೀವನದಲ್ಲಿ ನಡೆಯಬಹುದು.

ಸತತ ಸಂಘರ್ಷದಿಂದ ವ್ಯಕ್ತಿ ನಿರಾಶನಾಗುವುದು, ವಿಪರೀತ ಮಾನಸಿಕ ಒತ್ತಡಕ್ಕೊಳಗಾಗುವುದು, ಖಿನ್ನತೆ ಆವರಿಸಿಕೊಳ್ಳುವುದು ಇಂಥದ್ದೆಲ್ಲ ಈ ವ್ಯಕ್ತಿಗಳಿಗೆ ಸಾಮಾನ್ಯ ಆದರೆ, ಶನಿ ಉಚ್ಛಕಾರಕಾಗಿದ್ದರೆ 36 ವರ್ಷದ ನಂತರ ಆ ವ್ಯಕ್ತಿ ಜೀವನದಲ್ಲಿ ಸಫಲತೆಯ ಭಾಗ್ಯವ್ನನು ಕಾಣುತ್ತಾನೆ.

ಶನಿ- ಸೂರ್ಯನ ಸಮಾಗಮವಾಗಿರುವ ಕುಂಡಲಿಯುಳ್ಳ ಮಂದಿ ಯಾವಾಗಲೂ ಜೀವನದಲ್ಲಿ ಪರಿಶ್ರಮ ಪಡಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಅಪ್ಪ ಮಾತಿಗೆ ಮನ್ನಣೆ ಕೊಟ್ಟು ಮಾತಿಗಿಳಿಯದೆ, ಜ್ಞಾನ ಸಂಪಾದನೆಯತ್ತ ಗಮನ ಹರಿಸಿ ಆಧ್ಯಾತ್ಮಿಕ ಮಾರ್ಗದಲ್ಲಿ ಮನೋಬಲವನ್ನು ಹೆಚ್ಚಿಸಲು ಗಮನ ನೀಡಿದರೆ ಸಫಲತೆ ಸಾಧ್ಯವಾಗಬಹುದು. ಅಥವಾ ಸೂರ್ಯ ಹಾಗೂ ಶನಿ ಶಾಂತಿ ಮಾಡಿಸಿ ಉಪಾಸನೆಯನ್ನು ಕೈಗೊಳ್ಳಬಹುದು.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments