Webdunia - Bharat's app for daily news and videos

Install App

ರಾಖಿಗೆ ಮದ್ವೆಯಾಗಲ್ಲ: ಭವಿಷ್ಯ!

Webdunia
IFM
ವಿಶ್ವದ ಖ್ಯಾತ ಜ್ಯೋತಿಷಿ ಹಾಗೂ ಸಂಖ್ಯಾಶಾಸ್ತ್ರ, ವಾಸ್ತು ಪ್ರವೀಣೆ ಸಂಧ್ಯಾ ಮೆಹ್ತಾ, ರಾಖಿ ಸಾವಂತ್‌ಳ ಸ್ವಯಂವರ ಒಂದು ನಕಲಿ ಕಾರ್ಯಕ್ರಮ. ಸ್ವಯಂವರದಲ್ಲಿ ಅಸಲಿಯಾಗಿ ರಾಖಿ ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಧ್ಯಾ, ರಾಖಿ ಖಂಡಿತವಾಗಿಯೂ ಏನಾದರೊಂದು ಕಾರಣ ಹೇಳಿ ಕೊನೆಯಲ್ಲಿ ಮದುವೆಯನ್ನು ತಪ್ಪಿಸುವ ಸಾಧ್ಯತೆಗಳಿವೆ. ಆಕೆ ಮದುವೆಯಾಗುವ ಸಾಹಸವನ್ನು ಮಾಡುವುದೇ ಇಲ್ಲ ಎಂದರು.

ರಾಖಿಗೆ ಈಗ ಮದುವೆಯಾಗುವ ಸಾಧ್ಯತೆಗಳು ಬಹಳ ಕಡಿಮೆ. ಜತೆಗೆ ಆ ಕಾರ್ಯಕ್ರಮ ಕೂಡಾ ಒಂದೆರಡು ತಿಂಗಳಿಗಿಂತ ಖಂಡಿತ ಮುಂದುವರಿಯಲಾರದು. ರಾಖಿ ಸ್ವಭಾವತಃ ಸುದ್ದಿ ಮಾಡುವುದನ್ನೇ ಇಷ್ಟಪಡುವಾಕೆಯಾದ್ದರಿಂದ ಖಂಡಿತವಾಗಿಯೂ ಸ್ವಯಂವರ ವೇದಿಕೆಯನ್ನು ಸುದ್ದಿಗಾಗಿ ಬಳಸಿದ್ದಾಳೆ. ಅಂತಿಮವಾಗಿ ಆಕೆ ಯಾರನ್ನೂ ಮದುವೆಯಾಗದೇ ಹೊರನಡೆಯುತ್ತಾಳೆ. ಏಕಾಂಗಿಯಾಗಿಯೇ ಉಳಿಯುತ್ತಾಳೆ ಎಂದಿದ್ದಾರೆ.

ಸಂಧ್ಯಾ ಮೆಹ್ತಾ ಪ್ರಕಾರ, ಅಂತಿಮವಾಗಿ ಫೈನಲ್ ಸ್ವಯಂವರದಲ್ಲಿ ರಾಖಿ ಗಟ್ಟಿಯಾಗಿ ಕಿರುಚಿ ತನಗೆ ಬೇಕಾದ ವರ ಸಿಕ್ಕಲೇ ಇಲ್ಲವೆಂದು ಅಳುತ್ತಾಳೆ. ಅಥವಾ ತಲೆಕೂದಲು ಕೆದರಿ ಹಾಕಿ ಬೊಬ್ಬಿಡುತ್ತಾಳೆ. ಎಲ್ಲವೂ ಆಕೆ ಪ್ರಚಾರದ ಹಂಗಿನಿಂದ ಟಿವಿಗಾಗಿಯೇ ಮಾಡುವವಳಿದ್ದಾಳೆ. ರಾಖಿ ಕಾ ಸ್ವಯಂವರದಲ್ಲಿ ಸೂಪರ್ ಕ್ಲೈಮ್ಯಾಕ್ಸ್ ಇದೆ. ಯಾರೂ ಊಹೆ ಮಾಡದ ವಿಚಿತ್ರ ತಿರುವನ್ನು ಕಾರ್ಯಕ್ರಮ ಪಡೆದುಕೊಳ್ಳಲಿದೆ. ಇದರಿಂದ ವೀಕ್ಷಕರು ನಿಬ್ಬೆರಗಾಗಲಿದ್ದಾರೆ. ಆದರೆ ಆ ವಿಚಿತ್ರ ತಿರುವಿನಲ್ಲಿ ಖಂಡಿತವಾಗಿಯೂ ರಾಖಿ ಯಾರ ಕೈಯನ್ನೂ ಹಿಡಿಯುವುದಿಲ್ಲ. ಮದುವೆಯಾಗದೆ ಇರುವುದು ಮಾತ್ರ ಖಂಡಿತ ಎಂದು ಭವಿಷ್ಯ ಹೇಳಿದ್ದಾರೆ.

ಸಂಧ್ಯಾ ಮೆಹ್ತಾ ಹಲವು ಖ್ಯಾತನಾಮರಿಗೆ ಭವಿಷ್ಯ ಹೇಳಿದ್ದು ನಿಜವಾಗಿದೆ. ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ಉದ್ಯಮಿಗಳು, ವಿಜ್ಞಾನಿಗಳೂ ಸಂಧ್ಯಾರಲ್ಲಿ ತಮ್ಮ ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯದ ಮೂಲಕ ತಮ್ಮ ಭವಿಷ್ಯ ಹೇಳಿಸಿಕೊಳ್ಳುತ್ತಾರೆ.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Show comments