Webdunia - Bharat's app for daily news and videos

Install App

ಮೀನ ರಾಶಿಯ ಅಮೀರ್ ಖಾನ್‌‌ಗೆ ಇನ್ನೂ ಉಜ್ವಲ ಭವಿಷ್ಯ

Webdunia
IFM
ಅಮೀರ್ ಖಾನ್ ಭಾರತದ ಬಹುದೊಡ್ಡ ಪ್ರತಿಭಾವಂತ ನಟರಲ್ಲಿ ಒಬ್ಬರು. ಹುಟ್ಟಿದ್ದು ಮಾರ್ಚ್ 14ರ 1965ರಲ್ಲಿ. ಕೇವಲ ನಟನಾ ಸಾಮರ್ಥ್ಯ ಮಾತ್ರವಲ್ಲ, ಅಮೀರ್ ಒಬ್ಬ ಉತ್ತಮ ನಿರ್ಮಾಪಕ, ನಿರ್ದೇಶಕ ಹಾಗೆಯೇ ಚಿತ್ರಕಥೆ ಬರಹಗಾರ ಹಾಗೂ ಗಾಯಕ ಕೂಡಾ. ಪರಿಪೂಱ್ಮತೆಯನ್ನೇ ಬಯಸುವ ಅಮೀರ್ ಬಾಲಿವುಡ್ಡಿನ ಮಿಸ್ಟರ್ ಪರ್‌ಫೆಕ್ಷನಿಸ್ಟ್ ಎಂದೇ ಹೆಸರು ಪಡೆದಿದ್ದಾನೆ. ಹಲವು ಬಾರಿ ಫಿಲಂಫೇರ್ ಪ್ರಶಸ್ತಿ ಗಿಟ್ಟಿಸಿದ ಅಮೀರ್ ಜೋ ಜೀತಾ ವಹೀ ಸಿಕಂದರ್, ಅಂದಾಜ್ ಅಪ್ನಾ ಅಪ್ನಾ, ಖಯಾಮತ್ ಸೇ ಖಯಾಮತ್ ತಕ್, ರಾಜಾ ಹಿಂದೂಸ್ತಾನಿ, ಸರ್ಫರೋಶ್, ಲಗಾನ್, ದಿಲ್ ಚಾಹ್ತಾ ಹೆ, ರಂ್ ದೇ ಬಸಂತಿ ಮತ್ತಿತರ ಚಿತ್ರಗಳ ಮೂಲಕ ಯಶಸ್ಸಿನ ಶಿಖರೇಕ್ಕೇರಿದರು. ಗುಲಾಮ್‌ನ ಹಾಡಿಗಾಗಿ ಬೆಸ್ಟ್ ಸಿಂಗರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಅಮೀರ್ ಖಾನ್ ಕಳೆದ ವರ್ಷ ತಾರೇ ಜಮೀನ್ ಪರ್ ಚಿತ್ರಕ್ಕಾಗಿ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನೂ ಗಿಟ್ಟಿಸಿದ್ದಾರೆ. ಸಿನಿಮಾ ರಂಗಕ್ಕೆ ಪ್ರವೇಶಿಸುವ ಮೊದಲು ಅಮೀರ್ ಖಾನ್ ರಾಜ್ಯಮಟ್ಟದ ಟೆನಿಸ್ ಚಾಂಪಿಯನ್ ಕೂಡಾ ಆಗಿದ್ದರು.

ಅಮೀರ್‌ದು ಮೀನ ರಾಶಿ. ಅವರ ಜನ್ಮಸಂಖ್ಯೆ 5. ಶುಭದಿನಗಳು ಬುಧವಾರ, ಶುಕ್ರವಾರ ಹಾಗೂ ಶನಿವಾರ. ಈ ಸಂಖ್ಯೆಯಲ್ಲಿ ಹುಟ್ಟಿದವರು ಸೂಕ್ಷ್ಮಬುದ್ಧಿಯವರೂ, ಚತುರರೂ, ಮಾನಸಿಕವಾಗಿ ದೃಢರೂ, ತುಂಬಾ ಕಷ್ಟಪಟ್ಟು ಕೆಲಸ ಮಾಡುವವರೂ ಆಗಿರುತ್ತಾರೆ. ಜತೆಗೆ ತಮ್ಮ ಜೀವನದಲ್ಲಿ ಯಶಸ್ಸನ್ನೂ ಗಳಿಸುತ್ತಾರೆ. ಕಳೆದ ವರ್ಷ ತಾರೇ ಜಮೀನ್ ಪರ್ ಚಿತ್ರ ಯಶಸ್ಸು ಗಳಿಸಿದರೂ ಖಾಸಗಿ ಜೀವನ ಅಷ್ಟಾಗಿ ಸಂತಸವಾಗಿರಲಿಲ್ಲ. ಆದರೆ ಈ ವರ್ಷ ಉತ್ತಮ ವರ್ಷವಾಗಿ ಅಮೀರ್ಗೆ ಇನ್ನೂ ಹೆಚ್ಚಿನ ಯಶಸ್ಸನ್ನು ತರಲಿದೆ. ತನ್ನ ಕೋಪವನ್ನು ಸ್ವಲ್ಪ ನಿಯಂತ್ರಿಸಿಕೊಂಡರೆ ಅಮೀರ್ ಜೀವನ ಇನ್ನೂ ಚೆನ್ನಾಗಿರುತ್ತದೆ.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಲಕ್ಷ್ಮೀ ಕವಚ ಸ್ತೋತ್ರಂ ಕನ್ನಡದಲ್ಲಿ

Ganesha Mantra: ವಿಘ್ನಗಳನ್ನು ನಿವಾರಿಸಲು ಗಣೇಶನ ಈ ಸ್ತೋತ್ರವನ್ನು ತಪ್ಪದೇ ಓದಿ

Devi Mantra: ಮಂಗಳವಾರದಂದು ತಪ್ಪದೇ ಲಲಿತಾ ದೇವಿಯ ಈ ಸ್ತೋತ್ರ ಓದಿ

Mrthyunjaya mantra: ರೋಗ ಭಯ, ಅಕಾಲ ಮೃತ್ಯುಭಯ ನಾಶಕ್ಕೆ ಮೃತ್ಯುಂಜಯ ಅಷ್ಟೋತ್ತರ

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Show comments