ನಿಮ್ಮದು ತುಲಾರಾಶಿಯೇ? ಹಾಗಾದರೆ ಈ ಲೇಖನ ಓದಿ
, ಶನಿವಾರ, 22 ಫೆಬ್ರವರಿ 2014 (11:19 IST)
ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಪುರುಷ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ಆ ವಿವರಗಳು ಇಲ್ಲಿವೆ.
ಪುರುಷ- ತುಲಾ ರಾಶಿಯ ಪುರುಷ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲವನಾಗಿದ್ದರೂ, ನಿಮ್ಮ ತೀರಾ ಬಾಲಿಶ, ಪಕ್ಕಾ ಹೆಣ್ಣುಮಕ್ಕಳ ಕನಸನ್ನು ನನಸು ಮಾಡಲಾರ. ತುಲಾ ರಾಶಿಯ ಪುರುಷ ಎಲ್ಲವನ್ನು ಸರಿದೂಗಿಸಿಕೊಂಡು ಸಮಾನಾಂತರ ಕಾಯ್ದುಕೊಳ್ಳಬೇಕೆನ್ನುವ ವ್ಯಕ್ತಿತ್ವ ಹೊಂದಿರುವಾತ. ಆತ ಈ ಧೋರಣೆಯನ್ನು ಪ್ರೀತಿಯ ಬಗ್ಗೆಯೂ ಹೊಂದಿರುತ್ತಾನೆ. ನೀವು ಆತನ ಜೀವನದಿಂದ ಹೊರ ಹೋಗಲು ಪ್ರಯತ್ನಿಸಿದರೂ, ಆತನ ವ್ಯಕ್ತಿತ್ವವೇ ಮತ್ತೆ ನಿಮ್ಮನ್ನು ಆಕರ್ಷಿಸುತ್ತದೆ. ಹಾಗಾಗಿ ಮತ್ತೆ ಆತನಿಗೇ ನೀವು ಜೋತು ಬೀಳುತ್ತೀರಿ.
ಒಮ್ಮೆ ಈತ ನಕ್ಕನೆಂದರೆ ಆತನ ಹಳ್ಳದಲ್ಲಿ ಹುಡುಗಿಯರು ಬಿದ್ದರೆಂದೇ ಅರ್ಥ. ಅದು ನಿಮ್ಮ ತಪ್ಪೂ ಅಲ್ಲ ಬಿಡಿ. ತುಲಾ ರಾಶಿಯ ಪುರುಷ ತನ್ನ ಮೊಗದಲ್ಲಿ ನಗು ಚೆಲ್ಲಿದನೆಂದರೆ, ಆತನನ್ನು ದ್ವೇಷಿಸುತ್ತಿದ್ದ ವ್ಯಕ್ತಿಯೂ ಆತನೆಡೆಗೆ ಆಕರ್ಷಿತನಾಗುತ್ತಾನೆಂದರೆ ಆತನ ಆಕರ್ಷಕ ವ್ಯಕ್ತಿತ್ವವೇ ಕಾರಣ. ತುಲಾ ರಾಶಿಯ ಪುರುಷ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೊಂಚ ಹೆಚ್ಚು ಯೋಚಿಸುತ್ತಾನೆ. ಯಾರಾದರೂ ಆತನ ನಿರ್ಧಾರದ ಬಗ್ಗೆ ಅಪಸ್ವರ ಎತ್ತಿದರೆ ತಕ್ಷಣ ತನ್ನ ನಿರ್ಧಾರ ಬದಲಾಯಿಸುತ್ತಾನೆ.
ನಿಮಗೆ ನಿಜವಾಗಿಯೂ ತುಲಾ ರಾಶಿಯ ಪುರುಷನ ಜೊತೆಗೆ ಜಗಳ ಮಾಡಿ ಗೆಲ್ಲಬೇಕೆದಿದ್ದರೆ, ಆತ ಹೇಳುವುದಕ್ಕೆಲ್ಲಾ, ಕಿವಿ ಮುಚ್ಚಿ ಆತನಿಗೆ ಬೆನ್ನು ತಿರುಗಿಸಿ ಬಿಡಿ. ಆಗ ಆತನೇ ಒಂದು ನಗು ನಕ್ಕು ನಿಮ್ಮ ಬಳಿ ಬಂದು ಸಮಾಧಾನದ ಮಾತುಗಳನ್ನಾಡಲು ಆರಂಭಿಸುತ್ತಾನೆ. ಆಗ ನೀವು ಗೆಲ್ಲುತ್ತೀರಿ.