Webdunia - Bharat's app for daily news and videos

Install App

ನಿಮ್ಮ ಭವಿಷ್ಯದ ಜಾತಕದಲ್ಲಿ ಭಾಗ್ಯಸ್ಥಾನದ ಪಾತ್ರ

Webdunia
ಬುಧವಾರ, 18 ಸೆಪ್ಟಂಬರ್ 2013 (16:22 IST)
PR
ಪ್ರತಿಯೊಬ್ಬ ಜಾತಕದಲ್ಲಿ ಪ್ರತಿಯೊಂದು ರಾಶಿಗಳ ಸ್ಥಾನವೂ ಭವಿಷ್ಯದಲ್ಲಿ ಮಹತ್ತರವಾದ ಬದಲಾವಣೆಯನ್ನು ನೀಡುತ್ತದೆ. ಎಂಬುದು ಸರ್ವವಿಧಿತ.ಅದೇರೀತಿ ಭಾಗ್ಯಸ್ಥಾನ ಅಥವಾ ಭಾಗ್ಯಭಾವ ಎಂಬುದು ಜಾತಕದಲ್ಲಿ ಜನ್ಮಲಗ್ನದಿಂದಾರಂಭಿಸಿದ 9ನೇ ರಾಶಿಯಾಗಿದೆ. ಧರ್ಮಸ್ಥಾನ ಅಥವಾ ಪಿತೃಸ್ಥಾನವೆಂದು ಕರೆಯಿಸಿಕೊಳ್ಳುವ ಈ ಭಾವದಿಂದ ವ್ಯಕ್ತಿಯ ಜೀವನದ ಹಂತವನ್ನು ಅಂದರೆ ಭವಿಷ್ಯದ ಏರುಪೇರುಗಳನ್ನು ನಿರ್ಣಯಿಸಬಹುದಾಗಿದೆ.

ದ್ವಾದಶ ಭಾವಗಳಲ್ಲಿ ಭಾಗ್ಯಾಧಿಪತಿ ಲಗ್ನದಲ್ಲಿದ್ದಾಗ ಆ ಜಾತಕನೇ ಅತ್ಯಂತ ಭಾಗ್ಯವಂತನಾಗಿ ವಿದ್ಯಾವಂತನಾಗಿ ಬಾಳುವುದಲ್ಲದೇ ಆಚಾರವುಳ್ಳವನೂ ಅದೃಷ್ಟವಂತನೂ ಆಗಿ ಸುಖವಾದ ಜೀವನವನ್ನು ಸಾಗಿಸುತ್ತಾನೆ. ಲಗ್ನದಿಂದ ದ್ವಿತೀಯದಲ್ಲಿ ಭಾಗ್ಯಾಧಿಪತಿಯಿದ್ದರೆ ಜಾತಕನು ಉತ್ತಮ ವಾಗ್ಮಿಯೂ,ವಿದಯಾವಂತನೂ,ಧನಿಕನೂ,ಆಗುವುದಲ್ಲದೇ ಅತ್ಯಂತ ವೈಭವೋಪೇತ ಜೀವನವನ್ನು ನಡೆಸುತ್ತಾನೆ.

ತೃತೀಯದಲ್ಲಿ ಭಾಗ್ಯಾಧಿಪತಿಯಿದ್ದ ಪಕ್ಷದಲ್ಲಿ ಧೈರ್ಯವಂತನೂ,ಸಾಹಸಿ ಪ್ರವೃತ್ತಿಯವನಾಗಿದ್ದು,ಸಹೋದರರೊಂದಿಗೆ ಉತ್ತಮ ಸಹಬಾಳ್ವೆಯ ಜೀವನ ನಡೆಸುತ್ತಾನೆ.

ಭಾಗ್ಯಾಧಿಪತಿ ಚತುರ್ಥದಲ್ಲಿದ್ದಾಗ ವಿದ್ಯಾವಂತನಾಗುವುದಲ್ಲದೇ ರಾಜಯೋಗವನ್ನು ಹೊಂದುವುದಲ್ಲದೇ ಸಮಾಜದಲ್ಲಿ ಉತ್ತಮ ಗೌರವಕ್ಕೆ ಪಾತ್ರನಾಗುತ್ತಾನೆ ಮಾತ್ರವಲ್ಲ. ಮನೆ,ಆಸ್ತಿ,ವಾಹನ ಹೀಗೆ ಮಾನವವಶ್ಯಕ ಎಲ್ಲ ಸೌಕರ್ಯಗಳನ್ನು ಹೊಂದಿ ಪಂಚಮದಲ್ಲಿ ಭಾಗ್ಯಾಧಿಪತಿಯಿದ್ದಾಗ ಜಾತಕನು ಧರ್ಮಾಸಕ್ತನೂ,ಗುರುಹಿರಿಯರಲ್ಲಿ ಗೌರವವುಳ್ಳವನೂ ಉತ್ತಮ ವಾಗ್ಮಿಯೂ ಆಗುವುದಲ್ಲದೇ ಸತ್ಪುತ್ರರನ್ನು ಪಡೆದು ಉತ್ತಮ ಜೀವನ ನಡೆಸುತ್ತಾನೆ.

PR
ಇನ್ನು ಭಾಗ್ಯಾಧಿಪತಿ ಷಷ್ಠದಲ್ಲಿದ್ದರೆ ಸದಾ ಅನಾರೋಗ್ಯ ಪೀಡಿತನಾಗಿರುವುದಲ್ಲದೇ ಭಾಗ್ಯಹೀನನೂ ಆಗಿದ್ದು ಪಿತೃವಿಗೆ ಅರಿಷ್ಠಕಾರಕನಾಗುತ್ತಾನೆ ಅಲ್ಲದೇ ಜೀವನದಲ್ಲಿ ಸದಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾನೆ.

ಸಪ್ತಮದಲ್ಲಿ ಭಾಗ್ಯಾಧಿಪತಿಯಿದ್ದಾಗ ಅತ್ಯಂತ ಸುಂದರಳೂ ಶೀಲವತಿಯೂ ಆದ ಪತ್ನಿ ದೊರೆಯುತ್ತಾಳೆ. ಅಲ್ಲದೇ ಉನ್ನತ ವ್ಯಾಸಂಗ, ವಿದೇಶದಲ್ಲಿ ಉದ್ಯೋಗ ಲಾಭ ಹೀಗೆ ಉತ್ತಮವಾದ ಫಲಗಳನ್ನು ಪಡೆಯುತ್ತಾನೆ.

ಅಷ್ಟಮದಲ್ಲಿ ಭಾಗ್ಯಾಧಿಪತಿಯಿದ್ದ ಪಕ್ಷದಲ್ಲಿ ಚಿಕ್ಕಂದಿನಲ್ಲೆ ಪಿತೃಮರಣ,ಬಡತನ,ಭಾಗ್ಯಾಹೀನತೆಯಂತಹ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಆಕಸ್ಮಿಕ ಧನಲಾಭದಂತಹ ಏರುಪೇರುಗಳು ಘಟಿಸುತ್ತವೆ.

ಭಾಗ್ಯಾಧಿಪತಿ ತನ್ನ ಸ್ಥಾನದಲ್ಲೇ ಅಂದರೆ ನವಮಸ್ಥಾನದಲ್ಲಿದ್ದಾಗ ಜಾತಕನು ಅತ್ಯಂತ ಭಾಗ್ಯವಂತನಾಗಿದ್ದು, ವಿದ್ಯಾವಂತನೂ,ವೇದ ಶಾಸ್ತ್ರಗಳಲ್ಲಿ ಆಸಕ್ತಿ ಹೊಂದಿರುವವನೂ,ಸದಾ ಧರ್ಮ ನಿರತನೂ ಆಗಿದ್ದು ಜಾತಕನ ಜಾತಕದ ಪ್ರಭಾವದಿಂದ ತಂದೆಯ ಆಯಸ್ಸು ವೃದ್ಧಿಸುತ್ತದೆ. ಅಲ್ಲದೇ ಶ್ರೀಮಂತಿಕೆಯ ಜೀವನವನ್ನು ಅತ್ಯಂತ ಗೌರವಯುತವಾಗಿ,ಸಮಾಜದಲ್ಲಿ ಕೀರ್ತಿಯ ಉತ್ತುಂಗಕ್ಕೇರಿ ನಡೆಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಭಾಗ್ಯಾಧಿಪತಿ ದಶಮದಲ್ಲಿದ್ದರೆ ಜಾತಕನು ಅತ್ಯಂತ ಪ್ರಭಾವಶಾಲಿಯಾಗಿದ್ದು, ರಾಜಗೌರವವನ್ನು ಪಡೆಯುತ್ತಾನೆ. ಅಲ್ಲದೇ ಉತ್ತಮ ನಡತೆಯನ್ನು ಹೊಂದಿದ್ದು ಉದಾರಿಯಾಗಿರುವುದಲ್ಲದೇ ಸದಾಚಾರಿಯಾಗಿ ಉನ್ನತ ಪದವಿ ಗೌರವಗಳಿಗೆ ಅರ್ಹನಾಗುತ್ತಾನೆ

PR
ಇನ್ನೂ ಈ ಭಾಗ್ಯ ಸ್ಥಾನವು ಲಕ್ಷ್ಮಿ ಸ್ಥಾನವೂ ಆಗಿದ್ದು ಜಾತಕದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಜಾತಕನ ಕುಂಡಲಿಯಲ್ಲಿ ಭಾಗ್ಯಾಧಿಪತಿ ಸ್ವಕ್ಷೇತ್ರ ಉಚ್ಚಕ್ಷೇತ್ರ ಕೇಂದ್ರಕೋನದಲ್ಲಿ ಸ್ಥಿರವಾದ ಪಕ್ಷದಲ್ಲಿ ಜಾತಕನು ಅತ್ಯಂತ ಶ್ರೀಮಂತನೂ ಅದೃಷ್ಟವಂತನೂ ಪಿತೃ ವಿಶ್ವಾಸ, ಪ್ರೀತಿ ಗಳಿಸುವುದರೊಂದಿಗೆ ಪಿತ್ರಾರ್ಜಿತವಾದ ಆಸ್ತಿ ಪಡೆಯುತ್ತಾನೆ ಅಲ್ಲದೇ ಸಕಲ ವಿದ್ಯಾಪಾರಂಗತನಾಗಿ ಉನ್ನತ ಅಧಿಕಾರ.ಪ್ರತಿಷ್ಠೆ,ಗೌರವವನ್ನು ಗಳಿಸಿ ಸುಖ ಜೀವನ ನಡೆಸುತ್ತಾನೆ

ಭಾಗ್ಯಾಧಿಪತಿ ಲಾಭಸ್ಥಾನದಲ್ಲಿದ್ದರೆ ತನ್ನ ಪ್ರತಿಭೆಯಿಂದಲೇ ಅಪಾರವಾದ ಸಂಪತ್ತನ್ನು ಗಳಿಸುತ್ತಾನೆ. ತಂದೆ ಮತ್ತು ಸಹೋದರರಲ್ಲಿ ಉತ್ತಮ ಬಾಂಧವ್ಯ ಹೊಂದುವುದಲ್ಲದೇ ನಿರ್ವಹಿಸುವ ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಗಳಿಸುತ್ತಾನೆ.

ಅದೇರೀತಿ ಭಾಗ್ಯಾಧಿಪತಿ ವ್ಯಯಸ್ಥಾನದಲ್ಲಿದ್ದಾಗ ಜಾತಕನು ಭಾಗ್ಯಹೀನನೂ ಕಷ್ಟಜೀವಿಯೂ ಆಗುತ್ತಾನೆ. ಸದಾ ಬಡತನ ಜೀವವನ್ನೇ ನಡೆಸುವ ಈತ ಜೀವನದಲ್ಲಿ ಅಪಾರವಾದ ಕಷ್ಟನಷ್ಟಗಳಿಗೆ ಗುರಿಯಾಗುತ್ತಾನೆ.

ಹೀಗೆ ಭಾಗ್ಯಸ್ಥಾನವು ಪ್ರತಿಯೊಂದು ಸ್ಥಾನದಲ್ಲಿಯೂ ತನ್ನದೇ ಆದ ವಿಶಿಷ್ಟ ಫಲವನ್ನು ನೀಡುತ್ತದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments