Select Your Language

Notifications

webdunia
webdunia
webdunia
webdunia

ಬಜೆಟ್‌: ಕಾರ್ಪೊರೇಟ್ ವಲಯಕ್ಕೆ ಬಹುತೇಕ ನಿರಾಸೆ

ಬಜೆಟ್‌: ಕಾರ್ಪೊರೇಟ್ ವಲಯಕ್ಕೆ ಬಹುತೇಕ ನಿರಾಸೆ
ನವದೆಹಲಿ , ಸೋಮವಾರ, 6 ಜುಲೈ 2009 (18:32 IST)
ಕಾರ್ಪೊರೇಟ್ ವಲಯವನ್ನು ತೃಪ್ತಿಪಡಿಸಲು, ಅವರ ನಿರೀಕ್ಷೆಗಳನ್ನು ಮುಟ್ಟಲು ಈ ಬಾರಿಯ ಕೇಂದ್ರ ಬಜೆಟ್ ವಿಫಲವಾಗಿರುವುದು ಹಲವರ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ. ಎಫ್‌ಬಿಟಿ ರದ್ದು ಪಡಿಸಿರುವುದನ್ನು ಉದಾರ ಮನಸ್ಸಿನಿಂದ ಸ್ವಾಗತಿಸಿರುವ ಉದ್ಯಮವು ಇತರ ಹಲವು ವಿಚಾರಗಳಲ್ಲಿ ಅನುಭವಿಸಿರುವ ನಿರಾಸೆಯನ್ನು ಹೊರ ಹಾಕಿದೆ.

ಪಿಸಿ ಕಪೂರ್, ಭಾರತಿ ಹಡಗು ನಿರ್ಮಾಣ ಸಂಸ್ಥೆ: ಈ ಬಜೆಟ್ ನನಗೆ ತೀರಾ ನಿರಾಸೆ ತಂದಿದೆ. ಹಡಗು ಮತ್ತು ಹಡಗು ತಯಾರಿಕಾ ಉದ್ಯಮವು ಸಾಕಷ್ಟು ಆದಾಯ ಮತ್ತು ಉದ್ಯೋಗಳನ್ನು ದೇಶದಲ್ಲಿ ಸೃಷ್ಟಿಸುತ್ತಿದೆ. ಆದರೆ ಕೇಂದ್ರ ಬಜೆಟ್‌ನಲ್ಲಿ ಈ ವಲಯವನ್ನು ಪ್ರಸ್ತಾಪವನ್ನೇ ಮಾಡಿಲ್ಲ.

ಪವನ್ ಗೋಯೆಂಕಾ, ಎಂ&ಎಂ ಅಟೋಮೋಟಿವ್ ವ್ಯವಹಾರ ಸಂಸ್ಥೆಯ ಅಧ್ಯಕ್ಷ: ಭಿನ್ನ ವಾಹನಗಳ ತೆರಿಗೆಯಲ್ಲಿ ಯಾವುದೇ ಬದಲಾವಣೆ ತರದಿರುವುದು ನನಗೆ ತೀವ್ರ ನಿರಾಸೆಯಾಗಿದೆ. ಅಲ್ಲದೆ ತೆರಿಗೆ ಮೇಲಿನ 15,000 ರೂಪಾಯಿ ಸರ್ಚಾರ್ಜ್ ವಾಪಸು ಪಡೆಯದಿರುವುದು ಕೂಡ ನಮಗೆ ಹಿನ್ನಡೆಯಾಗಿ ಪರಿಣಮಿಸಿದೆ.

ನಿತಿನ್ ಪರಾಂಜ್ಪೆ, ಎಚ್‌ಯುಎಲ್ ಕಾರ್ಯನಿರ್ವಾಹಣಾಧಿಕಾರಿ: ಮಹತ್ವದ ಅಥವಾ ಗ್ರಾಮಾಂತರ ಮಾರುಕಟ್ಟೆಯ ನಿರೀಕ್ಷೆಯಂತೆ ಅತ್ಯುತ್ತಮ ಮತ್ತು ಸರಿಯಾದ ಬಜೆಟ್ ಮೂಡಿ ಬಂದಿದೆ. ಇದರಿಂದಾಗಿ ಬಳಕೆ ಮತ್ತು ಪ್ರಗತಿಗೆ ಉತ್ತೇಜನ ನೀಡಿದಂತಾಗಿದೆ.

ಡಾಬರ್: ಅಧಿಕ ಸೌಲಭ್ಯ ತೆರಿಗೆಯನ್ನು (ಎಫ್‌ಬಿಟಿ) ರದ್ದುಪಡಿಸಿರುವುದು ಉದ್ಯಮದ ಮಟ್ಟಿಗೆ ಸರಿಯಾದ ಹೆಜ್ಜೆ. ಗ್ರಾಮೀಣಾಭಿವೃದ್ಧಿ ಕುರಿತು ತೆಗೆದುಕೊಂಡಿರುವ ನಿರ್ಧಾರಗಳು ಕೂಡ ನಮಗೆ ಧನಾತ್ಮಕವಾಗಿ ಪರಿಣಮಿಸಲಿವೆ. ಸರಕು ಮತ್ತು ಸೇವಾ ತೆರಿಗೆಯನ್ನು 2010ರ ಏಪ್ರಿಲ್ ಒಳಗೆ ಕಾರ್ಯಗತಗೊಳಿಸುವುದು ಕೂಡ ಉತ್ತಮವಾದುದು. ಆದರೆ ಈ ಬಗ್ಗೆ ಸ್ಪಷ್ಟತೆಯಿಲ್ಲ.

ಅಜಿತ್ ಗುಲಾಬ್ಜಂದ್, ಹಿಂದೂಸ್ತಾನ್ ಕನ್ಸ್‌ಟ್ರಕ್ಷನ್ ಅಧ್ಯಕ್ಷ: ಇದೊಂದು ಸ್ಥಿರ ಬಜೆಟ್. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ವ್ಯಯ ಮಾಡುವ ನಿರ್ಧಾರ ಉತ್ತಮವಾದದ್ದು. ಐಐಎಫ್‌ಸಿಎಲ್‌ನ್ನು ಮುಂದೆ ತರುವ ನಿರ್ಧಾರವೂ ಪ್ರಮುಖವಾದುದು.

ಶಿವೇಂದರ್ ಸಿಂಗ್, ಫೋರ್ತೀಸ್: ನನಗೆ ನಿರಾಸೆಯಾಗಿದೆ. ಬಜೆಟ್ ಬಗ್ಗೆ ನಾನು ತುಂಬಾ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ. ಎಲ್ಲವೂ ಹುಸಿಯಾಗಿದೆ.

ಎಸ್. ಮಹಾಲಿಂಗಂ, ಟಿಸಿಎಸ್ ಸಿಎಫ್‌ಓ: 6.8ರ ಆರ್ಥಿಕ ಕೊರತೆಯಿರುವಾಗ ನಾವು ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಳ್ಳಲಾಗದು.

Share this Story:

Follow Webdunia kannada