Select Your Language

Notifications

webdunia
webdunia
webdunia
webdunia

ಉದ್ಯಮ ವಲಯ ನಿರಾಸೆ; ಆಮ್ ಆದ್ಮಿಗೆ ಖುಷಿ

ಉದ್ಯಮ ವಲಯ ನಿರಾಸೆ; ಆಮ್ ಆದ್ಮಿಗೆ ಖುಷಿ
ನವದೆಹಲಿ , ಸೋಮವಾರ, 6 ಜುಲೈ 2009 (18:46 IST)
ಆದಾಯ ತೆರಿಗೆ ಮಿತಿ ಹೆಚ್ಚಳ, ಗ್ರಾಮೀಣ ಜನತೆಗೆ ಬಂಪರ್ ಯೋಜನೆಗಳು, ಕೃಷಿಕರಿಗೆ ಭರಪೂರ ಸಿಹಿಸುದ್ದಿ, ಶೈಕ್ಷಣಿಕ ವಲಯ, ಯುವಜನಾಂಗದ ಮುಖದಲ್ಲಿ ಮಂದಹಾಸ, ಬೆಂಗಳೂರಿನಲ್ಲಿ ಕೇಂದ್ರೀಕೃತ ತೆರಿಗೆ ನಿರ್ವಹಣಾ ಕೇಂದ್ರ, ಪ್ರತಿ ವರ್ಷ 1.2 ಕೋಟಿ ಉದ್ಯೋಗ ನಿರ್ಮಾಣ, ಅಭಿವೃದ್ಧಿ ದರ ಶೇ.9ದಲ್ಲಿ ಸ್ಥಿರವಾಗಿಸುವ ಗುರಿ, ವಿದೇಶೀ ಬಂಡವಾಳ ಸಂಗ್ರಹಣೆ ಹೆಚ್ಚಳ, ನಗರ ಪ್ರದೇಶದ ಬಡವರಿಗೆ ವಿಶೇಷ ಯೋಜನೆ ಸೇರಿದಂತೆ ಬಹುತೇಕ ಜನಪರ ಕಾರ್ಯಕ್ರಮಗಳನ್ನು ಪ್ರಕಟಿಸುವ ಮೂಲಕ 2009-10ರ ಸಾಲಿನ ಮುಂಗಡ ಪತ್ರವನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ್ದಾರೆ.

ಆದರೆ ಈ ಬಜೆಟ್ ಉದ್ಯಮ ವಲಯಕ್ಕೆ ನಿರಾಸೆ ಮೂಡಿಸಿದ್ದು, ಬಜೆಟ್ ಮಂಡಿಸಿದ ಕೆಲವೇ ಕ್ಷಣಗಳಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 720 ಅಂಶ ಕಳೆದುಕೊಂಡಿತು. ಇದು ಯುಪಿಎಯನ್ನು ಮರಳಿ ಅಧಿಕಾರಕ್ಕೇರಿಸಿದ ಆಮ್ ಆದ್ಮಿಗೆ ಸರಕಾರ ಪ್ರಕಟಿಸಿದ "ಥ್ಯಾಂಕ್ಯೂ" ಬಜೆಟ್ ಎಂಬ ಬಗ್ಗೆ ಬಹುತೇಕರಿಂದ ಪ್ರತಿಕ್ರಿಯೆಗಳು ಕೇಳಿಬಂದಿವೆ,

ಬಜೆಟ್ ಮುಖ್ಯಾಂಶಗಳು...

- ಪ್ರತಿ ವರ್ಷ 1 ಕೋಟಿ 20 ಲಕ್ಷ ಉದ್ಯೋಗದ ಗುರಿ.

- ಶೇಕಡಾ 9ರಷ್ಟು ಅಭಿವೃದ್ಧಿ ಸಾಧಿಸುವ ಗುರಿ

- ಕೃಷಿಯಲ್ಲೂ ಶೇಕಡಾ 4ರಷ್ಟು ಸುಧಾರಣೆ ಗುರಿ

- ರಸ್ತೆ ಅಭಿವೃದ್ಧಿ ಅನುದಾರ ಶೇಕಡಾ 26ರಷ್ಟು ಹೆಚ್ಚಳ

- ರಾಷ್ಟ್ರೀಯ ಹೆದ್ದಾರಿಗೆ ಶೇಕಡಾ 23ರಷ್ಟು ಅನುದಾನ ಹೆಚ್ಚಳ.

- ಶೇ.7 ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ

- ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು.

- ನೀರಾವರಿಗೆ ಸಾವಿರ ಕೋಟಿ ಹೆಚ್ಚುವರಿ ಅನುದಾನ

- ನಗರ ಪ್ರದೇಶದ ಬಡವರಿಗೆ ಗೃಹ ನಿರ್ಮಾಣಕ್ಕಾಗಿ 3973 ಕೋಟಿ ರೂಪಾಯಿ.

- ಕೃಷಿಗೆ 3.25 ಲಕ್ಷ ಕೋಟಿ ರೂಪಾಯಿ ಅನುದಾನ.

- ಮುಂಬೈ ಪ್ರವಾಸ ನಿಧಿ ನಿರ್ವಹಣಾ ವೆಚ್ಚ ಹೆಚ್ಚಳ.

- ರೈತರ ಸಾಲ ಮನ್ನಾ ಅವಧಿ ಆರು ತಿಂಗಳಿಗೆ ವಿಸ್ತರಣೆ.

- ಯುವ ಜನಾಂಗದ ನಿರೀಕ್ಷೆಗೆ ಹೆಚ್ಚಿನ ಕಾಳಜಿ

- ಗೃಹ ನಿರ್ಮಾಣ ವಲಯಕ್ಕೆ ನಿಧಿ ಹೆಚ್ಚಳ.

- ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ ಸ್ಥಾಪನೆ.

- ಸಾರ್ವಜನಿಕ ಬ್ಯಾಂಕುಗಳಿಗೆ ಹೆಚ್ಚಿನ ಅನುದಾನ.

- ರಸಗೊಬ್ಬರ ಸಬ್ಸಿಡಿ ರೈತರಿಗೆ ನೇರವಾಗಿ ಸಿಗುವ ವ್ಯವಸ್ಥೆ

- ತೈಲ ಬೆಲೆ ನಿರ್ವಹಣೆಗೆ ತಜ್ಞರ ಸಮಿತಿ ರಚನೆ.

- ತೈಲ ಉತ್ಪನ್ನಗಳ ಮೇಲೆ ನಿಗಾವಹಿಸಲು ಸಮಿತಿ.

- ಸರ್ಕಾರಿ ವೆಚ್ಚದ ಮೇಲೆ ಕಡಿವಾಣ.

- 3 ರೂಪಾಯಿ ದರದಲ್ಲಿ ಬಡತನ ರೇಖೆಗಿಂತ ಕೆಳಗಿನವರಿಗೆ ಮಾಸಿಕ 25 ಕೆ.ಜಿ. ಅಕ್ಕಿ ಮತ್ತು ಗೋಧಿ.

- ಇಂದಿರಾ ಅವಾಸ್ ಯೋಜನೆಯಲ್ಲಿ ಶೇಕಡಾ 63ರಷ್ಟು (8,800 ಕೋಟಿ ರೂಪಾಯಿ) ಹೆಚ್ಚಳ.

- ರಾಜೀವ್ ಗಾಂಧಿ ವಸತಿ ಯೋಜನೆ ಅನುದಾನ ಹೆಚ್ಚಳ.

- ಸಾರ್ವಜನಿಕ ವಲಯದ ಕಂಪನಿಗಳ ಷೇರುಗಳಲ್ಲಿ ಏರಿಕೆ.

- ಸರ್ಕಾರದೊಂದಿಗೆ ಬ್ಯಾಂಕುಗಳ ವಿಮಾ ಯೋಜನೆ ಮುಂದುವರಿಕೆ.

- ಮಹಿಳಾ ಸಾಕ್ಷರತೆಗೆ ರಾಷ್ಟ್ರೀಯ ಮಿಷನ್ ಸ್ಥಾಪನೆ.

- ಖಾಸಗಿ ಸಹಭಾಗಿತ್ವದಲ್ಲಿ ಆನ್‌ಲೈನ್ ಉದ್ಯೋಗ ವಿನಿಮಯ ಕಚೇರಿ.

- ಮೂರು ವರ್ಷದಲ್ಲಿ ಮಹಿಳಾ ಸಾಕ್ಷರತೆ ದ್ವಿಗುಣ ಗುರಿ.

- ಒಂದು ಲಕ್ಷದವರೆಗಿನ ಗೃಹಸಾಲ ಬಡ್ಡಿ ದರಕ್ಕೆ ಸಬ್ಸಿಡಿ.

- ಶೈಕ್ಷಣಿಕ ಸಾಲದ ಬಡ್ಡಿಗೆ ಸಂಪೂರ್ಣ ಸಬ್ಸಿಡಿ.

- ಐದು ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆ ಲಾಭ.

- ಖಾದ್ಯ ವಸ್ತುಗಳ ಸಬ್ಸಿಡಿ ನೀತಿಯಲ್ಲಿ ಬದಲಾವಣೆ.

- ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 39,100 ಕೋಟಿ.

- ಬಿಪಿಎಲ್ ಕುಟುಂಬಗಳಿಗೆ 350 ಕೋಟಿ ರೂಪಾಯಿ.

- ಗ್ರಾಮೀಣ ಬ್ಯಾಂಕುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ

- ಆದಾಯ ತೆರಿಗೆ ಪಾವತಿ ನಿಯಮ ಸರಳೀಕರಣ.

- ಆದಾಯ ತೆರಿಗೆ ಸಲ್ಲಿಕೆಗೆ ಸರಳೀಕೃತ 'ಸರಳ್ -2' ಯೋಜನೆ.

- ಗ್ರಾಮೀಣ ವಿದ್ಯುದೀಕರಣಕ್ಕೆ ಏಳು ಸಾವಿರ ಕೋಟಿ ರೂಪಾಯಿ.

- ಗ್ರಾಮ ಸಡಕ್ ಯೋಜನೆಯಲ್ಲಿ ಶೇಕಡಾ 59ರಷ್ಟು ಹೆಚ್ಚಳ.

- 100 ಕೋಟಿ ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ.

- ಉದ್ಯೋಗ ವಿನಿಮಯ ಕೇಂದ್ರಗಳ ಆಧುನೀಕರಣ.

- 18 ತಿಂಗಳೊಳಗೆ ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ.

- ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಗೆ 120 ಕೋಟಿ.

- ಮಾಜಿ ಯೋಧರಿಗೆ '1 ರ‌್ಯಾಂಕ್ - 1 ಪೆನ್ಯನ್' ಯೋಜನೆ

- ರಾಷ್ಟ್ರೀಯ ಗ್ಯಾಸ್ ಗ್ರಿಡ್ ಯೋಜನೆ ಜಾರಿ.

- ಅರೆ ಸೇನಾಪಡೆಗಳಿಗೆ ಒಂದು ಲಕ್ಷ ವಸತಿ ನಿರ್ಮಾಣ.

- ಕಾಮನ್‌‌ವೆಲ್ತ್ ಗೇಮ್ಸ್‌ಗೆ 3470 ಕೋಟಿ ರೂಪಾಯಿ ಬಿಡುಗಡೆ.

- ಅಲ್ಪಸಂಖ್ಯಾತ ಸಚಿವಾಲಯಕ್ಕೆ 1740 ಕೋಟಿ ಅನುದಾನ.

- ಪ್ರದಾನಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿ.

- ಮಾಜಿ ಯೋಧರ ಪಿಂಚಣಿಯಲ್ಲಿ ಹೆಚ್ಚಳ.

- ಶೀಘ್ರವೇ ಆಹಾರ ಭದ್ರತಾ ಕಾಯ್ದೆ ಮಂಡನೆ.

- ಪೊಲೀಸ್ ಇಲಾಖೆ ಆಧುನೀಕರಣಕ್ಕೆ 480 ಕೋಟಿ.

- ಶ್ರೀಲಂಕಾ ತಮಿಳರ ನೆರವಿಗೆ 500 ಕೋಟಿ ರೂಪಾಯಿ.

- ನೂತನ ಎನ್‌ಐಟಿ, ಐಐಟಿಗಳ ಸ್ಥಾಪನೆಗೆ 2313 ಕೋಟಿ.

- ಅಸಂಘಟಿತ ವಲಯಗಳಿಗೆ ಸಾಮಾಜಿಕ ಭದ್ರತೆ.

- ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 31,100 ಕೋಟಿ.

- ಗ್ರಾಮೀಣ ವಸತಿ ಯೋಜನೆಗೆ ಎರಡು ಸಾವಿರ ಕೋಟಿ.

- ರಕ್ಷಣಾ ವಲಯಕ್ಕೆ 1.41 ಲಕ್ಷ ಕೋಟಿ ರೂಪಾಯಿ.

- ಬೆಂಗಳೂರಿನಲ್ಲಿ ಕೇಂದ್ರೀಯ ತೆರಿಗೆ ನಿರ್ವಹಣಾ ಕೇಂದ್ರ

- 100 ಕೋಟಿ ರೂಪಾಯಿ ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ.

- 46 ಲಕ್ಷ ಬಡ ಕುಟುಂಬಗಳಿಗೆ ಆರೋಗ್ಯ ವಿಮೆ.

- ಗ್ರಾಮೀಣ ವಸತಿ ಯೋಜನೆಗೆ ಎರಡು ಸಾವಿರ ಕೋಟಿ ರೂಪಾಯಿ.

- 45 ದಿನಗಳಲ್ಲಿ ನೂತನ ತೆರಿಗೆ ನೀತಿ ಜಾರಿ.

- ಕಾರ್ಪೊರೇಟ್ ತೆರಿಗೆಯಲ್ಲಿ ಬದಲಾವಣೆಯಿಲ್ಲ.

- ನೇರ ತೆರಿಗೆ, ವೈಯಕ್ತಿಕ ತೆರಿಗೆ ಮೇಲಿನ ಸರ್ಚಾರ್ಜ್ ರದ್ದು.

- ಕಮಾಡಿಟಿ ಟ್ರಾನ್ಸಾಕ್ಷನ್ ಮೇಲಿನ ತೆರಿಗೆ ರದ್ದು.

- ರಾಜಕೀಯ ದೇಣಿಗೆಗೆ ಶೇಕಡಾ 100 ರಿಯಾಯಿತಿ.

- ಮಾಜಿ ಯೋಧರ ನಿವೃತ್ತಿ ವೇತನ ಹೆಚ್ಚಳ.

- ಯೋಜನೇತರ ವೆಚ್ಚದ ಗಾತ್ರ 6.96 ಲಕ್ಷ ಕೋಟಿ.

- ಆದಾಯ ತೆರಿಗೆ ಮಿತಿ 1.6 ಲಕ್ಷ, ಮಹಿಳೆಯರಿಗೆ 1.90 ಲಕ್ಷ, ಹಿರಿಯ ನಾಗರಿಕರಿಗೆ 2.40 ಲಕ್ಷಕ್ಕೆ ಏರಿಕೆ.

- ಫ್ರಿಂಜ್ ಬೆನಿಫಿಟ್ ಟ್ಯಾಕ್ಸ್ ರದ್ದು.

- ಮೊತ್ತ ಮೊದಲ ಬಾರಿಗೆ 10 ಲಕ್ಷ ಕೋಟಿ ದಾರಿದ ಬಜೆಟ್ ವೆಚ್ಚ.

- ಎಲ್‌ಸಿಡಿ ಟೀವಿ, ಪಾದರಕ್ಷೆ ಅಗ್ಗ, ಚಿನ್ನ, ಬೆಳ್ಳಿ ತುಟ್ಟಿ

- ಚಿನ್ನ ಗಟ್ಟಿ ಮೇಲಿನ ಸೀಮಾಸುಂಕ ಹೆಚ್ಚಳ.

- ರಫ್ತುದಾರರ ತೆರಿಗೆ ರಜೆ 2011ರವರೆಗೆ ವಿಸ್ತರಣೆ.

- ಜೀವರಕ್ಷಕ ಔಷಧಗಳ ಸೀಮಾಸುಂಕ ಕಡಿತ.

- ಜೈವಿಕ ಡೀಸೆಲ್ ಮೇಲಿನ ಸೀಮಾಸುಂಕ ಕಡಿತ.

- ಸಣ್ಣ ಉದ್ಯಮಗಳ ಮೇಲಿನ ಮುಂಗಡ ತೆರಿಗೆ ರದ್ದು.

ಕಳೆದ ಬಜೆಟ್‌ನ ಅನುಷ್ಠಾನ, ಸಾಧನೆಗಳು...

- ಕಳೆದ ವರ್ಷ ಶೇಕಡಾ 6.7ರ ಪ್ರಗತಿ.

- ಸರಕಾರಿ ವೆಚ್ಚದಲ್ಲಿ ಹೆಚ್ಚಳ

- ಆಂತರಿಕ ಉಳಿತಾಯದಲ್ಲೂ ಹೆಚ್ಚಳ

- ವಿದೇಶಿ ಬಂಡವಾಳ ಗಳಿಕೆಯಲ್ಲಿ ಗಣನೀಯ ಏರಿಕೆ

- ನೈಸರ್ಗಿಕ ಅನಿಲದ ದೇಶೀಯ ಉತ್ಪಾದನೆ ದ್ವಿಗುಣ.

- ಜಾಗತಿಕ ಆರ್ಥಿಕ ಕುಸಿತ ಪರಿಣಾಮ ಭಾರತದ ಮೇಲೂ ಆಗಿದೆ.

- ರಾಜಧನ ಸಂಗ್ರಹದಲ್ಲೂ ಹೆಚ್ಚಳ.

- ಖಾಸಗಿ ಬಂಡವಾಳ ಆಕರ್ಷಣೆಯಲ್ಲಿ ಸರಕಾರ ಸಫಲವಾಗಿದೆ.

- ಸಾರ್ವಜನಿಕ ಉದ್ದಿಮೆಗಳು ರಾಷ್ಟ್ರದ ಸಂಪತ್ತು.

Share this Story:

Follow Webdunia kannada