Select Your Language

Notifications

webdunia
webdunia
webdunia
webdunia

ಸಂಗೀತ ಸಂಯೋಜನೆಯಲ್ಲಿ ಬದಲಾವಣೆ ಅಗತ್ಯ-ಲತಾ

ಸಂಗೀತ ಸಂಯೋಜನೆಯಲ್ಲಿ ಬದಲಾವಣೆ ಅಗತ್ಯ-ಲತಾ
ಬಾಲಿವುಡ್ ಸಂಗೀತ ಸಂಯೋಜನಾ ಕ್ಷೇತ್ರದಲ್ಲಿ ತುರ್ತುಬದಲಾವಣೆ ಪ್ರಸ್ತುತ ಅಗತ್ಯವಿದೆ ಎಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸಂಗೀತ ಸಂಯೋಜನೆಯಲ್ಲಿ ಬದಲಾವಣೆಯಾದಲ್ಲಿ ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಅಥವಾ ಗಾಯಕ, ಗಾಯಕಿಯರು ತಮ್ಮ ಗೀತೆಯ ಸಂಗೀತವನ್ನು ತಾವು ಸ್ವತಃ ಸಂಗೀತ ರಚಿಸಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಬಾಲಿವುಡ್ ಮೆಲೋಡೀಸ್ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂಗೀತ ಸಂಯೋಜನೆಯಲ್ಲಿ ಬದಲಾವಣೆಯಾಗುವುದು ಸಾಧ್ಯವಿಲ್ಲ ಎನ್ನುವ ಅನುಮಾನ ವ್ಯಕ್ತಪಡಿಸಿದ ಲತಾ ಮಂಗೇಶ್ಕರ್ , ಆದರೆ ಚಿತ್ರಸಂಗೀತಕ್ಕಾಗಿ ಬದಲಾವಣೆ ಅನಿವಾರ್ಯವಾಗಿದೆ. ದೇಶದಲ್ಲಿ ಗಾಯಕರ ಕೊರತೆಯಿಲ್ಲ ಎಂದು ಹೇಳಿದ್ದಾರೆ.

1950ರಲ್ಲಿ ಸಂಗೀತ ಸಂಯೋಜಕರು ಗಾಯಕಿಯರ ಧ್ವನಿ ಪರೀಕ್ಷೆ ಮಾಡುವಂತೆ ಇಂದಿನ ಸಂಗೀತಜ್ಞರು ಪರೀಕ್ಷೆ ಮಾಡುವ ಗೋಜಿಗೆ ಹೋಗದಿರುವುದು ವಿಷಾದನೀಯ ಸಂಗತಿಯಾಗಿದೆ.ಹೊಸತಾದ ಸಂಗೀತವನ್ನು ಸೃಷ್ಟಿಸುವ ಕಾರ್ಯಮಾಡದೇ ಹಳೆಯ ಸಂಗೀತದಲ್ಲಿ ಅಲ್ಪ ಬದಲಾವಣೆಗಳನ್ನು ಮಾಡಿ ಹೊರತರುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ. ಮುಂಬೈ ದಕ್ಷಿಣ ಭಾರತ, ಬಂಗಾಳ ಸೇರಿದಂತೆ ಹೊಸತಾದ ಸಂಗೀತವನ್ನು ಸೃಷ್ಟಿಸುವ ಕೆಲಸವಾಗುತ್ತಿಲ್ಲ. ಇದಕ್ಕಾಗಿ ಗಾಯಕರನ್ನು ದೂಷಿಸುವುದು ಯಾವ ನ್ಯಾಯ ಎಂದು ಗಿನ್ನಿಸ್ ದಾಖಲೆಯ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಪ್ರಶ್ನಿಸಿದ್ದಾರೆ.

ಬೆಂಗಳೂರು ಮೂಲದ ಗಣೇಶ ಅನಂತರಾಮನ್ ಅವರು ಬರೆದ ಬಾಲಿವುಡ್ ಮೆಲೋಡೀಸ್ ಮ್ಯಾಗಜಿನ್‌‌ ಪುಸ್ತಕದಲ್ಲಿ ಬಾಲಿವುಡ್‌ನ ಕೆ.ಎಲ್ ಸೆಹಗಲ್‌ರಿಂದ ಸೋನುನಿಗಮ್, ನೌಶಾದ್‌ರಿಂದ ಎ.ಆರ್.ರೆಹಮಾನ್ ಸಾಹಿರ್ ಲುಧಿಯಾನ್ವಿಯವರಿಂದ ಜಾವೇದ್ ಅಖ್ತರ್‌ವರೆಗೆ, ಸೇರಿದಂತೆ ಖ್ಯಾತ 50 ಸಂಗೀತ ಸಂಯೋಜಕರು, ಗಾಯಕ ಗಾಯಕಿಯರು ಹಾಗೂ ಗೀತಕಾರರ ವಿವರಗಳನ್ನು ಸಂಗ್ರಹಿಸಿ ಬರೆದಿದ್ದಾರೆ.

Share this Story:

Follow Webdunia kannada