Select Your Language

Notifications

webdunia
webdunia
webdunia
webdunia

ರಣ್‌ಬೀರ್ ಅತ್ಯುತ್ತಮ ಸಹನಟ: ಮಿನಿಶಾ

ರಣ್‌ಬೀರ್ ಅತ್ಯುತ್ತಮ ಸಹನಟ: ಮಿನಿಶಾ
, ಮಂಗಳವಾರ, 10 ಮಾರ್ಚ್ 2009 (14:46 IST)
WD
ಮಿನಿಶಾ ಲಾಂಬ ಚಿತ್ರರಂಗಕ್ಕೆ ಬಂದು ಮೂರು ವರ್ಷಗಳಷ್ಟೇ ಆಗಿವೆ ಆದರೆ ಆಕೆ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಉತ್ತಮ ದುಡಿಮೆಗೆ ಮಿನಿಶಾಗೆ ಪ್ರತಿಫಲ ಸಿಕ್ಕಿದೆ. 'ಬಚನಾ ಎ ಹಸೀನೋ'ದಲ್ಲಿ ಮಿನಿಶಾ ರಣ್‌ಬೀರ್ ಪ್ರೇಯಸಿಯಾಗಿದ್ದಾರೆ. ಮಿನಿಶಾ ತಮ್ಮ ಪಾತ್ರ, ಕೆರಿಯರ್ ಮತ್ತು ಭವಿಷ್ಯದ ಯೋಜನೆಗಳ ಕುರಿತು ತಮ್ಮ ಮನದಾಳದ ಮಾತನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.


ಹಾಯ್, ನೀವು ಹೇಗಿದ್ದೀರಿ ? ನೀವು ಬಹಳ ಉತ್ಸಾಹದಲ್ಲಿರುವಂತೆ ಕಾಣಿಸುತ್ತಿದೆ..

ನಾನು ಚೆನ್ನಾಗಿದ್ದೇನೆ. ಹೌದು ನಾನು ಬಹಳ ಉತ್ಸಾಹದಲ್ಲಿದ್ದೇನೆ. ಕಮ್ ಆನ್ ! ಯಾಕೆಂದು ನಿಮಗೆ ತಿಳಿದಿದೆ.

ಉತ್ಸಾಹಿತರಾಗಿರಲೇಬೇಕು ಏಕೆಂದರೆ ನೀವು ಈ ಬಾರಿ ರಣ್‌ಬೀರ್ ಎದುರು ನಾಯಕಿಯಾಗಿದ್ದೀರಿ.

ನಾನು ಮೂವರು ನಾಯಕಿಯರಲ್ಲಿ ಒಬ್ಬಳು. ಆದರೆ ನಾನು ಬಹಳ ಕಾತುರಗೊಂಡಿದ್ದೇನೆ ಏಕೆಂದರೆ ಇದು ನನಗೆ ಬಹು ದೊಡ್ಡ ಚಿತ್ರ. ಇಂತಹ ಒಂದು ಅವಕಾಶ ನನ್ನಲ್ಲಿಗೆ ಬರಬೇಕೆಂದು ನಾನು ಬಹಳ ಸಮಯದಿಂದ ಕಾಯುತ್ತಿದ್ದೇನೆ ಮತ್ತು ಈ ಬಗ್ಗೆ ನನಗೆ ನಿಜವಾಗಿಯೂ ಖುಷಿಯಾಗಿದೆ ಮತ್ತು ಹೆಮ್ಮೆಯುಂಟಾಗಿದೆ.
webdunia
IFM


ಈ ಚಿತ್ರ ಯಶ್ ರಾಜ್ ಬ್ಯಾನರ್‌ನಡಿ ಮೂಡಿ ಬರುತ್ತಿರುವುದು ಇದಕ್ಕೆ ಕಾರಣವೇ ?

ಯಾರಿಗೆ ಖುಷಿಯಾಗುವುದಿಲ್ಲ ಹೇಳಿ? ಅವರದು ಭಾರತದಲ್ಲಿ ಬಹುದೊಡ್ಡ ಹೆಸರು ಮತ್ತು ನಾನು ಚಿತ್ರರಂಗಕ್ಕೆ ಬಂದು ಕೇವಲ ಮೂರು ವರ್ಷಗಳಷ್ಟೇ ಆಗಿರುವುದರಿಂದ ಇದು ನನಗೆ ದೊಡ್ಡ ವಿಷಯ. ನನ್ನ ಉತ್ತಮ ಶ್ರಮಕ್ಕೆ ಫಲ ದೊರೆತಿದೆ ಎಂದು ನನಗೆ ಅನಿಸುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ನಾನು ಇದನ್ನು ಸದುಪಯೋಗ ಪಡಿಸಿಕೊಳ್ಳಲು ಬಯಸುತ್ತೇನೆ.

ಅಂದರೆ ನಿಮ್ಮ ಪ್ರಕಾರ ಇದು ನಿಮ್ಮ ಕೆರಿಯರ್‌ನ ಅತಿ ದೊಡ್ಡ ಸಾಧನೆ ಎಂದು ನಿಮಗನಿಸುತ್ತದೆಯೇ ?

(ನಗುತ್ತಾರೆ). ನಾನು ಕೇವಲ ಕೆಲವೇ ಚಿತ್ರಗಳನ್ನು ಮಾಡಿದ್ದೇನೆ ಮತ್ತು ನನ್ನ ಎಲ್ಲಾ ಚಿತ್ರಗಳು ಹಿಟ್ ಆಗಿಲ್ಲದೇ ಇರಬಹುದು ಆದರೆ ನನ್ನ ಅಭಿನಯವನ್ನು ಪ್ರಶಂಶಿಸಲಾಗಿದೆ.

ಇದು ಯಾವಾಗಲೂ ನನಗೆ ನೆಮ್ಮದಿ ನೀಡಿದೆ. ಆದರೆ ನಾನು ನಿಧಾನವಾಗಿ ಮತ್ತು ತಾಳ್ಮೆ ಕಳೆದುಕೊಳ್ಳದೆ ಪ್ರಯತ್ನಿಸುವುದರ ಮೇಲೆ ನಂಬಿಕೆಯಿರಿಸಿದ್ದೇನೆ. ಮತ್ತು ಇದರ ಫಲವಾಗಿಯೇ ಈ ಚಿತ್ರ ಸಿದ್ಧವಾಗಿದೆ.

ಯಶ್ ರಾಜ್‌ರೊಂದಿಗೆ ದುಡಿದ ಅನುಭವ ಹೇಗಿತ್ತು?

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅದ್ಭುತವಾಗಿತ್ತು. ಈ ಚಿತ್ರದ ಉತ್ತಮ ಅಂಶವೆಂದರೆ ಇದು ಯುವ ತಂಡವಾಗಿತ್ತು ಮತ್ತು ಎಲ್ಲರಿಗೂ ಅವಕಾಶವಿತ್ತು. ಈ ಚಿತ್ರ ಸುಂದರ ಪ್ರೇಮ ಕತೆ ಮತ್ತು ಈ ಅಂಶವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲಿದೆ. ಈ ಚಿತ್ರವನ್ನು ಅವರು ಆನಂದಿಸುತ್ತಾರೆ.

ನೀವು ಮಾಹಿ ಎಂಬ ಪಾತ್ರ ವಹಿಸಿದ್ದೀರಿ ಮತ್ತು ಅದರಲ್ಲೂ ಇದು 17 ವರ್ಷ ಪ್ರಾಯದ ಹುಡುಗಿಯ ಪಾತ್ರ.

ಅದು ಒಂದು ಸುಂದರ ಅನುಭವ. ಅದು ಸ್ವಲ್ಪ ಕಿರಿಯ ವಯಸ್ಸಿನ ಪಾತ್ರ ಆದರೆ ನಾನು ಅದನ್ನು ಆನಂದಿಸಿದ್ದೇನೆ. ನಾನು ಚಿತ್ರದ ಮಾಹಿ ಪಾತ್ರಕ್ಕೆ ಹೊಂದಿಕೆಯಾಗುತ್ತೇನೆ. ಮಾಹಿ ಅಮೃತಸರದ ಮುಗ್ಧ ಹುಡುಗಿ ಅವಳಿಗೆ ಪ್ರೀತಿ ಎನ್ನುವುದು ಬಹಳ ಪವಿತ್ರವಾದ ವಿಷಯ.

ಅವಳು ಫರ್‌ಫೆಕ್ಟ್ ಹುಡುಗಿ, ಅವಳು ಯಾವಾಗಲೂ ಪ್ರೀತಿ ಮತ್ತು ಜೀವನದ(ಲೈಫ್) ಮೇಲೆ ನಂಬಿಕೆಯಿಡುತ್ತಾಳೆ ಮತ್ತು ಪ್ರೀತಿ ತುಂಬಿದ ವಿವಾಹಿತ ಜೀವನವನ್ನು ಬಯ ಸುತ್ತಾಳೆ. ನಿಜ ಹೇಳಬೇಕೆಂದರೆ ಈ ಚಿತ್ರದ ಎಲ್ಲರೂ ಅವರವರ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ. ಇದು ಪ್ರೇಮಕತೆ ಆದರೆ ನೈಜತೆಗೆ ಹತ್ತಿರವಾಗಿದೆ ಮತ್ತು ಇದಕ್ಕಾಗಿಯೇ ಇದು ಎಲ್ಲರಿಗೂ ಇಷ್ಟವಾಗುತ್ತದೆ.

webdunia
IFM
ರಣ್‌ಬೀರ್ ಕಪೂರ್ ಬಗ್ಗೆ ಹೇಳಿ?

ನಾನು ಯಾವಾಗಲೂ ಹೇಳುತ್ತಿರುವಂತೆ ರಣ್‌ಬೀರ್ ಅತ್ಯುತ್ತಮ ಸಹ ನಟ. ಅವರು ಸ್ಟಾರ್ ಕುಟುಂಬದಿಂದ ಬಂದಿದ್ದರೂ ಅವರಿಗೆ ಆ ಬಗ್ಗೆ ಹಮ್ಮು ಇಲ್ಲ ಮತ್ತು ಅವರಿಗೆ ಅವರ ಕಾರ್ಯವೇನೆಂಬುದು ತಿಳಿದಿದೆ ಮತ್ತು ಅವರಲ್ಲಿ ಆಗಾಧ ಪ್ರತಿಭೆ ಇದೆ. ಮತ್ತು ಇದಕ್ಕಿಂತಲೂ ಹೆಚ್ಚಾಗಿ ಅವರು ಜಂಟಲ್‌ಮಾನ್.(ನಗುತ್ತಾರೆ)

ಚಿತ್ರದಲ್ಲಿ ನೀವು ದೀಪಿಕಾ ಮತ್ತು ಬಿಪಾಶ ಬಸು ಅವರಿಂದ ತೀವ್ರ ಸ್ಪರ್ಧೆ ಎದುರಿಸಬೇಕಾಗಿತ್ತು ಅಲ್ಲವೇ?

ನನಗೆ ಹಾಗೆ ಅನಿಸುವುದಿಲ್ಲ ಮತ್ತು ಅವರು ಸಹ ಹೀಗೆ ಅಂದುಕೊಂಡಿರುತ್ತಾರೆ ಎಂದು ನನಗನಿಸುವುದಿಲ್ಲ. ಇದು ಉತ್ತಮ ತಂಡವಾಗಿತ್ತು ಮತ್ತು ನಮ್ಮ ನಡುವೆ ಉತ್ತಮ ಗೆಳೆ ತನವಿತ್ತು. ನಾನು ಈ ಮೊದಲು ಬಿಪಾಶರೊಂದಿಗೆ ಕಾರ್ಪರೇಟ್ ಚಿತ್ರದಲ್ಲಿ ದುಡಿದಿದ್ದೆ.

ಅವರು ಹಿಂದಿನಂತೆಯೇ ಇದ್ದಾರೆ ಗಾರ್ಜಿಯಸ್ ಮತ್ತು ಲವ್ವೆಬಲ್. ದೀಪಿಕಾ ಕೂಡ ಹಾಗೆ. ಚಿತ್ರೀಕರಣ ಸಂದರ್ಭದಲ್ಲಿ ನಾವು ಹೆಚ್ಚಿನ ಸಮಯ ಜೊತೆಗಿರುವ ಅವಕಾಶ ಲಭಿಸಲಿಲ್ಲ ಆದರೆ ಮ್ಯೂಸಿಕ್ ವಿಡಿಯೋ ಸಂದರ್ಭ ನಾವು ಬಹಳ ಮೋಜು ಮಾಡಿದೆವು. ನೀವು ಮ್ಯೂಸಿಕ್ ಆಲ್ಬಮ್ ನೋಡಿದ್ದೀರಾ ?, ನೋಡಲೇಬೇಕು. ರಣ್‌ಬೀರ್ ತನ್ನೆಲ್ಲಾ ಹಸೀನಾ(ಸುಂದರಿಯರು)ರಿಂದ ಹೊಡೆತ ತಿನ್ನುವುದನ್ನು ನೀವು ನೋಡಬಹುದು. ಇದು ತುಂಬಾ ತಮಾಷೆಯಾಗಿರುತ್ತದೆ.

ನೀವು ಬಹಳ ಆತ್ಮವಿಶ್ವಾಸಭರಿತರಾಗಿರುವಂತೆ ಅನಿಸುತ್ತದೆ.

ಹೌದು, ನಾನು ಆತ್ಮವಿಶ್ವಾಸ ಹೊಂದಿದ್ದೇನೆ ಮತ್ತು ಕಾತುರಳಾಗಿದ್ದೇನೆ. ಬಚನಾ ಎ ಹಸೀನೊ ಚಿತ್ರದ ರೂಪದಲ್ಲಿ ಒಂದು ದೊಡ್ಡ ಯಶೋಗಾಥೆಯನ್ನು ನಾನು ಎದುರು ನೋಡುತ್ತಿದ್ದೇನೆ.

ಅಂದರೆ ನೀವು ನಟಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನಿಮಗೆ ತೃಪ್ತಿ ಇದೆ.

ಖಂಡಿತ ಹೌದು. ಇದು ಉತ್ತಮ ಸಾಧನೆ. ಈ ಬಗ್ಗೆ ನಾನು ನಿಜವಾಗಿಯೂ ಖುಷಿಯಾಗಿದ್ದೇನೆ.

ಆದರೆ ಈ ಚಿತ್ರದ ನಂತರ ನಿಮ್ಮ ಕೈಯಲ್ಲಿ ಕೇವಲ ಒಂದೇ ಚಿತ್ರವಿದೆ.
webdunia
IFM

ಚಿತ್ರದ ಹೆಸರು ಕಿಡ್ನಾಪ್ ಮತ್ತು ನೀವು ಹೇಳಿದ್ದು ಸರಿ. ಚಿತ್ರಗಳಿಲ್ಲದಿರುವುದು ನಿಜ ಆದರೆ ಇದರಿಂದ ನನಗೇನು ಸಮಸ್ಯೆ ಇಲ್ಲ, ಬಹಳಷ್ಟು ಅವಕಾಶಗಳು ಬರುತ್ತಿವೆ ಆದರೆ ನಾನು ನನಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾತ್ರ ಮಾಡುತ್ತೇನೆ. ನನ್ನ ಈ ಹಿಂದಿನ ಚಿತ್ರ ಶೌರ್ಯ ಉತ್ತಮವಾಗಿ ನಡೆದಿದೆ. ಆದ್ದರಿಂದ ನನ್ನ ಬಗ್ಗೆ ನನಗೆ ವಿಶ್ವಾಸವಿದೆ.

ಕೃಪೆ: ಟಿಡಬ್ಲ್ಯೂಎಫ್

Share this Story:

Follow Webdunia kannada