Webdunia - Bharat's app for daily news and videos

Install App

30 ಬಾರಿ ಕ್ಯಾಮರಾ ಮುಂದೆ ಚುಂಬಿಸಿದ ರೀಮಾ ಸೇನ್!

Webdunia
IFM
ರೀಮಾ ಸೇನ್ ಎಂಬ ಬೆಂಗಾಳಿ ಬೆಡಗಿ ಹಿಂದಿಯಲ್ಲಿ ಅಷ್ಟಾಗಿ ಸುದ್ದಿ ಮಾಡದಿದ್ದರೂ, ತಮಿಳು, ತೆಲುಗಿನಲ್ಲಿ ಸುದ್ದಿ ಮಾಡಿದ್ದು ಹೆಚ್ಚು. ಇಂತಿಪ್ಪ ನಟಿ ಮೊನ್ನೆ ತನ್ನ ಮುಂದಿನ ಹಿಂದಿ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಕ್ಕಾಗಿ 30 ಟೇಕ್ ತೆಗೆದುಕೊಂಡಿದ್ದಾಳಂತೆ. ಅರ್ಥಾತ್ 30 ಬಾರಿ ಚುಂಬಿಸಿದ್ದಾಳೆ!

ಹೌದು. ರೀಮಾ ಸೇನ್ 30 ಬಾರಿ ಚುಂಬಿಸಿದ್ದಾಳೆ. ಇದು ಹೌದಾ ಎಂದು ನೇರವಾಗಿ ರೀಮಾಳನ್ನೇ ಕೇಳಿದರೆ, ಹೌದು. ಆದರೆ 30 ಬಾರಿ ಎಂದು ನಾನು ಲೆಕ್ಕವಿಟ್ಟಿಲ್ಲ. ಆದರೆ ತುಂಬ ಸಲ ರೀಟೇಕ್ ತೆಗೆದುಕೊಂಡೆವು. ಆದರೆ ಆ ಚುಂಬನವೇನೂ ತುಟಿಗೆ ತುಟಿ ಸೇರಿಸಿದ ಚುಂಬನವಲ್ಲ. ಆದರೂ ಸರಿಯಾದ ಚುಂಬನ ದೃಶ್ಯ ಸೆರೆಹಿಡಿಯಬೇಕಾದರೆ ನಾವು 30 ಬಾರಿ ಚುಂಬಿಸಬೇಕಾಯಿತು ಎನ್ನುತ್ತಾಳೆ.

ಚಿತ್ರದ ನಾಯಕ ನಟ ರಣವೀರ್ ಸಿಂಗ್ ಹೊಸ. ಆತ ತುಂಬಾ ಟೆನ್ಶನ್ ಆಗಿದ್ದ. ಹೀಗಾಗಿ ಕಿಸ್ಸಿಂಗ್ ಸೀನ್ ಸರಿಯಾಗಿ ಬರಲಿಲ್ಲ. ಅದ್ಕಕಾಗಿ ಪದೇ ಪದೇ ಮಾಡಬೇಕಾಯಿತು. ಈಗ ಸಿನಿಮಾಗಳಲ್ಲಿ ಕಿಸ್ಸಿಂಗ್ ಕಾಮನ್ ಆದ್ರೂ ನಾನು ಕಿಸ್ ಅಂದ್ರೆ ಸ್ವಲ್ಪ ಹಿಂದೆ ಅನ್ನುತ್ತಾಳೆ ರೀಮಾ.

ಇಂತಿಪ್ಪ ರೀಮಾ ಸೇನ್ ಹುಟ್ಟಿದ್ದು ಕೋಲ್ಕತ್ತಾದಲ್ಲಿ. ಮೂಲತಃ ಬೆಂಗಾಳಿ. ಮಧ್ಯಮವರ್ಗದ ಸಾಧಾರಣ ಕುಟುಂಬದಿಂದ ಬಂದ ಈಕೆ ಮಾಡೆಲ್ ಆಗಿ ನಂತರ ಚಿತ್ರರಂಗಕ್ಕೆ ಧುಮುಕಿದಳು. ಮುಂಬೈಗೆ ಕುಟುಂಬ ಶಿಫ್ಟ್ ಆದ ಮೇಲೆ ಕಾಲೇಜು ದಿನಗಳಲ್ಲಿ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡ ಅನುಭವ ಹೊಂದಿರುವ ರೀಮಾ ಸೇನ್ ಮೊದಲು ತೆಲುಗಿನ ಕಡಿಮೆ ಬಜೆಟ್ ಚಿತ್ರ 'ಚಿತ್ರಂ'ನಲ್ಲಿ ಬಣ್ಣ ಹಚ್ಚಿದಳು. ನಂತರ ತಮಿಳು ಚಿತ್ರ 'ಮಿನ್ನಲೇ'ಯಲ್ಲಿ ಕಾಣಿಸಿಕೊಂಡು ರಾತ್ರಿ ಬೆಳಗಾಗುವುದರಲ್ಲಿ ಯಶಸ್ಸಿನ ಅಲೆಯಲ್ಲಿ ತೇಲಿದಳು. ಹಿಂದಿಯಲ್ಲೂ ಕಾಲಿರಿಸಿದ ಈಕೆಯ ಮೊದಲ ಚಿತ್ರ ಹಮ್ ಹೋ ಗಯೇ ಆಪ್ ಕೇ ಚಿತ್ರ ಫ್ಲಾಪ್ ಆಯಿತು. ಅದಾದ ನಂತರ ಹಲವು ತಮಿಳು ಚಿತ್ರಗಳಲ್ಲಿ ನಟಿಸಿದ ರೀಮಾ ಬಾಲಿವುಡ್‌ನಲ್ಲಿ ಯಶಸ್ಸಿನ ಉತ್ತುಂಗಕ್ಕೇರುವ ಆಸೆ ಬಿಟ್ಟರೂ, ಆಗೊಮ್ಮೆ ಈಗೊಮ್ಮೆ ಬಾಲಿವುಡ್ ಮೆಟ್ಟಿಲು ತುಳಿದು ಬಂದಳು.

ಮನಸಂತ ನುವ್ವೇ, ಸೀಮಾ ಸಿಂಹಂ, ಅದೃಷ್ಟಂ, ವೀಡೇ, ಅಂಜಿಯಂತಹ ತೆಲುಗು ಚಿತ್ರಗಳಲ್ಲೂ, ಬಗವತಿ, ಧೂಳ್, ಜಯ್ ಜಯ್, ಎನಕ್ಕು 20 ಉನಕ್ಕು 18, ಚೆಲ್ಲಮೇ, ರೆಂಡು, ಆಯಿರತ್ತಿಲ್ ಒರುವನ್ ಮತ್ತಿತರ ಹಲವು ತಮಿಳು ಚಿತ್ರಗಳ್ಲಲಿ ನಾಯಕಿಯಾಗಿ ನಟಿಸಿ ಗಮನ ಸೆಳೆದಿದ್ದಾರೆ. ಕನ್ನಡದಲ್ಲೂ ನ್ಯೂಸ್ ಎಂಬ ಚಿತ್ರದಲ್ಲಿ ಉಪೇಂದ್ರ ಜೊತೆ ಅಭಿನಯಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments