Select Your Language

Notifications

webdunia
webdunia
webdunia
webdunia

'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ!

'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ!
, ಮಂಗಳವಾರ, 3 ನವೆಂಬರ್ 2009 (18:20 IST)
IFM
ಕನ್ನಡದಲ್ಲಿ ರಮೇಶ್ ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ', ವಿಷ್ಣುವರ್ಧನ್ ಜೊತೆಗೆ 'ಸೂರ್ಯವಂಶ', ರವಿಚಂದ್ರನ್ ಜೊತೆಗೆ 'ಓ ನನ್ನ ನಲ್ಲೆ' ಚಿತ್ರಗಳಲ್ಲಿ ನಟಿಸಿ ಹೋದ ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಇಷಾ ಕೊಪ್ಪಿಕರ್ ಮದುವೆಯಾಗುತ್ತಿದ್ದಾಳೆ. ತನ್ನ ಬಹುಕಾಲದ ಗೆಳೆಯ ಟಿಮ್ಮಿ ನಾರಂಗ್ ಅವರನ್ನು ಇದೇ ನವೆಂಬರ್ 29ರಂದು ಇಷಾ ಕೈಹಿಡಿಯಲಿದ್ದಾರೆ.

ಉದ್ಯಮಿಗಳ ನಾರಂಗ್ ಕುಟುಂಬದಲ್ಲಿ ಜನಿಸಿರುವ ಟಿಮ್ಮಿ ನಾರಂಗ್ ಮುಂಬೈನಲ್ಲಿ ಬಹುದೊಡ್ಡ ಹೊಟೇಲ್ ಒಂದನ್ನು ಹೊಂದಿದ್ದಾರೆ. ಟಿಮ್ಮಿ ಹಾಗೂ ಇಷಾ ಕೆಲವು ವರ್ಷಗಳಿಂದಲೇ ಉತ್ತಮ ಗೆಳೆತನ ಹೊಂದಿದ್ದರು.

ತನ್ನ ಮದುವೆಯ ಬಗ್ಗೆ ಹರ್ಷಚಿತ್ತರಾಗಿರುವ ಇಷಾ ಕೊಪ್ಪಿಕರ್, ನಾನಿನ್ನೂ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿಲ್ಲ. ಮೂರು ಚಿತ್ರಗಳು ಕೈಯಲ್ಲಿವೆ. ಆದರೂ ಮದುವೆಯಾಗೋ ನಿರ್ಧಾರಕ್ಕೆ ನಾನು, ಟಿಮ್ಮಿ ಬಂದಿದ್ದೇವೆ. ಯಾಕಂದ್ರೆ, ಇದಕ್ಕಿಂತ ಉತ್ತಮ ಸಂದರ್ಭ ಇನ್ನೊಂದಿಲ್ಲ. ತಡ ಮಾಡೋದು ನನಗೆ ಇಷ್ಟವಿಲ್ಲ. ಹಾಗಾಗಿ ನವೆಂಬರ್ 26ರಂದು ಅತ್ಯುತ್ತಮ ದಿನವೆಂದು ಪಂಡಿತರು ಹೇಳಿದ್ರು. ಆದರೆ ಕಳೆದ ವರ್ಷ ಅದು ಮುಂಬೈ ಪಾಲಿಗೆ ಕರಾಳ ದಿನ. ಹಾಗಾಗಿ ಆ ದಿನ ಬೇಡವೆಂದು ನಿರ್ಧರಿಸಿ ನವೆಂಬರ್ 29ರಂದು ಮದುವೆಯಾಗೋದೆಂದು ನಿರ್ಧರಿಸಿದೆವು.

webdunia
IFM
ಟಿಮ್ಮಿ ತುಂಬ ವಿಶಾಲ ಹೃದಯದವನು. ನನ್ನನ್ನು ತುಂಬ ಅರ್ಥ ಮಾಡಿಕೊಳ್ಳುತ್ತಾನೆ. ಮದುವೆಯಾದ ಮೇಲೂ ಚಿತ್ರಗಳಲ್ಲಿ ನಟಿಸಲು ಆತನ ಒಪ್ಪಿಗೆಯಿದೆ. ನನ್ನ ಎಲ್ಲ ಕೆಲಸಗಳಿಗೂ ಆತನ ಸಪೋರ್ಟ್ ಇದೆ. ಆತನನ್ನು ಜೀವನ ಸಂಗಾತಿಯಾಗಿ ಪಡೆಯುತ್ತಿರುವ ಬಗ್ಗೆ ಅತೀವ ಖುಷಿಯಿದೆ ಎನ್ನುತ್ತಾಳೆ ಇಷಾ. ಮದುವೆ ಮುಂಬೈನಲ್ಲೇ ನಾರಂಗ್ ಮನೆಯಲ್ಲಿ ಮಂಗಳೂರು ಸಂಪ್ರದಾಯದಂತೆ ನಡೆಯಲಿದೆ. ಟಿಮ್ಮಿ ಹಾಗೂ ಇಷಾ ಇಬ್ಬರಿಗೂ ಸಾಂಪ್ರದಾಯಿಕ ಮದುವೆ ಇಷ್ಟವಾದ್ದರಿಂದ ಹಾಗೂ ಇಷಾ ಮಂಗಳೂರು ಮೂಲವಾದ್ದರಿಂದ ಮಂಗಲೂರು ಶೈಲಿಯಲ್ಲಿ ಮದುವೆ ನಡೆಯಲಿದೆ.

ಮದುವೆಯೆಲ್ಲಾ ಸರಿ, ಹನಿಮೂನ್ ಎಲ್ಲಿ? ಎಂದರೆ, ಹನಿಮೂನ್ ಬಗ್ಗೆ ಇನ್ನೂ ಕರೆಕ್ಟಾಗಿ ಪ್ಲಾನ್ ಮಾಡಿಲ್ಲ. ಕ್ಯಾಲಿಫೋರ್ನಿಯಾ ಬೀಚುಗಳಲ್ಲಿ ಅಡ್ಡಾಡಬೇಕೆಂಬ ಆಸೆಯಿದೆ ಎನ್ನುತ್ತಾಳೆ.

webdunia
IFM
1976ರಲ್ಲಿ ಜನಿಸಿದ ಇಷಾ ಕೊಪ್ಪಿಕರ್‌ಗೆ ಈಗ 33ರ ಹರೆಯ. 1995ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲ ಪ್ರತಿಭಾನ್ವಿತ ಸುಂದರಿ ಎಂಬ ಕಿರೀಟ ಧರಿಸಿದಳು. ಹಾಗಾಗಿ ಸಿನಿಮಾ ಪ್ರವೇಶವಾಯ್ತು. 1998ರಲ್ಲಿ ತಮಿಳಿನಲ್ಲಿ ಕಾದಲ್ ಕವಿದೈ ಚಿತ್ರದಲ್ಲಿ ನಟಿಸಿದ ಇಷಾ ಈವರೆಗೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾದಲ್ ಕವಿದೈ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಪಡೆದ ಇಷಾ ಕೊಪ್ಪಿಕರ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಹಿಂದಿಯಲ್ಲೂ ಸಾಕಷ್ಟು ಅವಕಾಶಗಲು ಸುರಿದವು. ಹಿಂದಿಯಲ್ಲಿ ಉತ್ತಮ ಮಾರುಕಟ್ಟೆ ಕುದುರಿದ್ದ ಸಂದರ್ಭದಲ್ಲೇ ಕನ್ನಡಕ್ಕೂ ಬಂದು ಮೂರು ಸಿನಿಮಾಗಳಲ್ಲಿ ಒಂದರ ಹಿಂದೊಂದರಂತೆ ನಟಿಸಿ ಹೋದಳು.

ಕಂಪನಿ ಚಿತ್ರದಲ್ಲಿ ಖಲ್ಲಾಸ್... ಎಂಬ ಐಟಂ ಹಾಡಿನಲ್ಲಿ ಕುಣಿದು ಹರೆಯ ಹೃದಯಗಳಿಗೆ ಕಿಚ್ಚುಹತ್ತಿಸುವ ಮೂಲಕ ಖಲ್ಲಾಸ್ ಗರ್ಲ್ ಅಂತಾನೇ ಈಗಲೂ ಜನಪ್ರಿಯತೆ ಪಡೆದುಕೊಂಡಿರುವ ಬೆಡಗಿಯೀಕೆ. ತಮಿಳು, ತೆಲುಗಿನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿರುವ ಇಷಾ ಪ್ಯಾರ್ ಇಶ್ಕ್ ಔರ್ ಮೊಹಬ್ಬತ್, ಕಾಂಟೇ, ದಿಲ್ ಕಾ ರಿಶ್ತಾ, ಫಿಝಾ, ಡರ್ನಾ ಮನಾ ಹೈ, ಹಮ್ ತುಂ, ಗರ್ಲ್ ಫ್ರೆಂಡ್, ಡಾನ್, 36 ಚೈನಾ ಟೌನ್, ಡಾರ್ಲಿಂಗ್, ಹೆಲೋ, ಏಕ್ ವಿವಾಹ್ ಐಸಾ ಭೀ, ಹರ್ ಪಲ್ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟನೆಯಷ್ಟೇ ಅಲ್ಲದೆ, ಮಾಡೆಲ್ ಲೋಕದಲ್ಲೂ ಇಷಾ ಖ್ಯಾತಿ ಪಡೆದಿದ್ದಾರೆ. ರೆಕ್ಸೋನಾ ಜಾಹಿರಾತಿನಲ್ಲಿ ಇಷಾ ಖ್ಯಾತಿವೆತ್ತವಳು. ಕೊಕೋ ಕೋಲಾ, ಲಿಯಾರೆಲ್ ಜಾಹಿರಾತುಗಳಲ್ಲೂ ಈಕೆ ಮಾಡೆಲ್ ಆಗಿದ್ದವಳು. ಪ್ರಾಣಿ ದಯಾ ಸಂಘ ಪೇಟಾದ ವಕ್ತಾರಳೂ ಆಗಿರುವ ಈಕೆ ಪ್ರತಿಭಾನ್ವಿತ ಕರಾಟೆ ಪಟುವೂ ಹೌದು. ಸದ್ಯಕ್ಕೆ ಇಷಾ ಕೊಪ್ಪಿಕರ್ ಕೈಯಲ್ಲಿ ರೈಟ್ ಯಾ ರಾಂಗ್, ಹೆಲೋ ಡಾರ್ಲಿಂಗ್, ಶಾಬ್ರಿ ಚಿತ್ರಗಳಿವೆ. ಮದುವೆಯ ನಂತರವೂ ವೃತ್ತಿಜೀವನ ಮುಂದುವರಿಸುವ ಇಚ್ಛೆಯಿರುವ ಇಷಾ ಕೊಪ್ಪೀಕರ್‌ಗೆ ಮದುವೆಯ ಮುಂಚಿತ ಶುಭಾಷಯ ಕೋರೋಣ ಅಲ್ಲವೇ?

Share this Story:

Follow Webdunia kannada