Select Your Language

Notifications

webdunia
webdunia
webdunia
webdunia

ವಿಶ್ವದ ಸೆಕ್ಸೀ ತಾರೆ ಕತ್ರಿನಾ ಕೈಫ್

ವಿಶ್ವದ ಸೆಕ್ಸೀ ತಾರೆ ಕತ್ರಿನಾ ಕೈಫ್
IFM

ಯಶಸ್ಸಿನ ಅಲೆಯಲ್ಲಿ ಕತ್ರಿನಾ

ಕತ್ರಿನಾ ಕೈಫ್ - ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ಗ್ಲ್ಯಾಮರಸ್ ತಾರೆ. ಕಳೆದ ವಾರವಷ್ಟೇ ಈಕೆಯ ಜನ್ಮದಿನ. 1984ರ ಜುಲೈ 16ರಂದು ಜನಿಸಿದ ಈಕೆ 24 ವರ್ಷ ಪೂರ್ಣಗೊಳಿಸಿ, ಕಿರಿ ವಯಸ್ಸಿನಲ್ಲೇ ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ. ನಿರಂತರ ಹಿಟ್ ಚಿತ್ರಗಳನ್ನು ನೀಡುತ್ತಾ ಪ್ರತಿಸ್ಪರ್ಧಿ ನಾಯಕಿಯರ ಮತ್ತು ತಮ್ಮ ಮಾದಕ ಸೌಂದರ್ಯದಿಂದ ಚಿತ್ರ ರಸಿಕರ ನಿದ್ದೆಗೆಡಿಸಿರುವ ಕತ್ರಿನಾ, ಯಾವುದೇ ಚಿತ್ರದಲ್ಲಿದ್ದರೆ ಆ ಚಿತ್ರದ ಯಶಸ್ಸು ಗ್ಯಾರಂಟಿ ಎಂಬ ಮಾತೂ ಕೇಳಿಬರುತ್ತಿದೆ.


webdunia
IFM

ಸ್ಟಾರ್ ಕಲಾವಿದೆ

ಒಂದಷ್ಟು ದೌರ್ಬಲ್ಯಗಳಿದ್ದರೂ ಜನ ಮೆಚ್ಚುಗೆ ಪಡೆಯುವವರ ಸಾಲಿಗೆ ಈ ತಾರಾ ಕಲಾವಿದೆ ಸೇರುತ್ತಾರೆ. ನಟಿಯಾಗಿ ಸಾಕಷ್ಟು ಕಲಿಯಬೇಕಿದ್ದರೂ, ಮುಗ್ಧ-ಸ್ನಿಗ್ಧ ಸೌಂದರ್ಯದಿಂದಲೇ ಈಕೆ ಪ್ರೇಕ್ಷಕರ ಮನದಲ್ಲಿ ಭದ್ರವಾಗಿ ನಿಲ್ಲುತ್ತಾರೆ.


webdunia
IFM

ವಿಶಿಷ್ಟ ಛಾಪೊತ್ತಿದ ನಾಯಕಿ

2003ರಲ್ಲಿ 'ಬೂಮ್'ನಂತಹ ಫ್ಲಾಪ್ ಚಿತ್ರದಿಂದ ಚಿತ್ರರಂಗದ ಜೀವನ ಆರಂಭಿಸಿದ ಕತ್ರಿನಾ, ಮೊದಲು ಗುರುತಿಸಿಕೊಂಡಿದ್ದು ಸ್ಟಾರ್ ಸಲ್ಮಾನ್ ಖಾನ್ ಅವರ ಗೆಳತಿಯಾಗಿ. ಹಿಂದಿ ಚೆನ್ನಾಗಿ ಮಾತನಾಡಲು ಆಕೆಗೆ ಬರುವುದಿಲ್ಲ, ಆದರೆ ಕಠಿಣ ಪರಿಶ್ರಮಿ ಆಕೆ. ಹಿಂದಿ ಕಲಿಯುವುದರೊಂದಿಗೆ ಅಭಿನಯದಲ್ಲೂ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಒತ್ತಿದ್ದಾರೆ.


webdunia
IFM

ವಿಶ್ವದ ಸೆಕ್ಸೀ ತಾರೆ

ಕತ್ರಿನಾ ಆನ್‌ಲೈನ್‌ನಲ್ಲೂ ಜನಪ್ರಿಯ ತಾರೆ. ಈಕೆಯ ಫೋಟೋಗಳು ಅತೀ ಹೆಚ್ಚು ಡೌನ್‌ಲೋಡ್ ಆಗಿವೆ. ವಿಶ್ವದ ಅತ್ಯಂತ ಸೆಕ್ಸೀ ಮಹಿಳೆ ಎಂದೂ ಗುರುತಿಸಲ್ಪಟ್ಟಿರುವ ಕತ್ರಿನಾ ಕೈಫ್ ಭಾರತೀಯ ಚಿತ್ರೋದ್ಯಮ ನೀಡಿದ ಸ್ಟೈಲ್ ಐಕಾನ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. 'ಸಿಂಗ್ ಈಸ್ ಕಿಂಗ್", ಪಾರ್ಟ್ನರ್ ಚಿತ್ರಗಳ ಅಭಿನಯದಲ್ಲಿ ಗಮನ ಸೆಳೆದಿರುವ ಈಕೆ, 'ಬ್ಲೂ' 'ಅಜಬ್ ಪ್ರೇಮ್ ಕೀ ಗಜಬ್ ಕಹಾನೀ', 'ಹಲೋ' ಚಿತ್ರಗಳಲ್ಲೂ ನಟಿಸಿದ್ದಾರೆ.


Share this Story:

Follow Webdunia kannada