Select Your Language

Notifications

webdunia
webdunia
webdunia
webdunia

ರಣ್‌ಬೀರ್ ಮನದಲ್ಲಿ ಸೋನಮ್‌ಗೆ ವಿಶಿಷ್ಟ ಸ್ಥಾನ

ರಣ್‌ಬೀರ್ ಮನದಲ್ಲಿ ಸೋನಮ್‌ಗೆ ವಿಶಿಷ್ಟ ಸ್ಥಾನ
, ಗುರುವಾರ, 21 ಆಗಸ್ಟ್ 2008 (17:32 IST)
IFM
ದೀಪಿಕಾ ಪಡುಕೋಣೆಯಿಂದ, ತಮ್ಮ ಜಾರುತ್ತಿರುವ ಟೆವೆಲ್‌ನಿಂದ ಅಥವಾ ಕಪೂರ್ ಖಾಂದಾನಿನ 4ನೇ ತಲೆಮಾರು ಆಗಿರುವುದರಿಂದಾಗಿ- ಕಾರಣ ಏನೇ ಇರಲಿ ಕೇವಲ ಒಂದು ಚಿತ್ರ ನೀಡಿರುವ ರಣ್‌ಬೀರ್ ಕಪೂರ್ ಬಾಲಿವುಡ್‌ನ ಹೊಸ ಹೃದಯ ಚೋರನಾಗಿರುವುದಂತು ನಿಜ. ತನ್ನ ಎರಡನೇ ಚಿತ್ರ 'ಬಚನಾ ಎ ಹಸೀನೋ'ದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ರಣ್‌ಬೀರ್ ಕಪೂರ್
ತಮ್ಮ ಮನದ ಇಂಗಿತವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.


ಬಚನಾ.. ಸಾವರಿಯಾಕ್ಕಿಂತ ಹೇಗೆ ಭಿನ್ನವಾಗಿದೆ ?

ಸಾವರಿಯಾ ಮತ್ತು ಬಚನಾ...ಗಳೆರಡೂ ರೊಮ್ಯಾಂಟಿಕ್ ಚಿತ್ರಗಳು. ಆದರೆ ಸಾವರಿಯಾ ಪೂರ್ಣವಾಗಿ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ. ನನ್ನ ಜೀವನದಲ್ಲಿ ನಾನು ಕನಸು ಕಟ್ಟಿದಂತಹ ತಿರುವನ್ನು ದೊರಕಿಸಿಕೊಟ್ಟ ನನ್ನ ಮೊದಲ ಚಿತ್ರ. ಆದರೆ ಬಚನಾ...ದಲ್ಲಿ ನಾನು ಹೆಚ್ಚು ಸೃಜನಾತ್ಮಕವಾಗಿ ಪಾಲ್ಗೊಂಡಿದ್ದೇನೆ.

ಅಂದರೆ, ನೀವು ಚಿತ್ರದಲ್ಲಿ ಮೂರು ನಾಯಕಿರೊಡನೆ ಸರಸವಾಡುವ ಸಾಹಸಿ ಪಾತ್ರ ನಿರ್ವಹಿಸುತ್ತಿದ್ದೀರಿ ?

ಇಲ್ಲ, ಇದರ ಬದಲಿಗೆ ನಾನು ಎಲ್ಲರೂ ಇಷ್ಟಪಡುವಂತಹ ಹುಡುಗನ ಪಾತ್ರ ವಹಿಸಿದ್ದೇನೆ, ಚಿತ್ರದಲ್ಲಿ ನಾನು ಜೀವನದ ವಿವಿಧ ಹಂತಗಳಲ್ಲಿ ಮೂರು ಬೇರೆ ಬೇರೆ ಹುಡುಗಿಯರೊಂದಿಗೆ ಪ್ರೇಮಕ್ಕೆ ಸಿಲುಕುವ ಪಾತ್ರ ವಹಿಸಿದ್ದೇನೆ. ಮೊದಲು ಬಿಪಾಶರೊಂದಿಗೆ, ನಂತರ ಮಿನಿಶಾ ಲಾಂಬ ಮತ್ತು ಕೊನೆಯದಾಗಿ ದೀಪಿಕಾ ಪಡುಕೋಣೆಯೊಂದಿಗೆ, ಇದು ಶಾಶ್ವತವಾಗಿ ಉಳಿಯುವ ಮತ್ತು ಹೆಚ್ಚು ರೊಮ್ಯಾಂಟಿಕ್ ಆಗಿರುವ ಪ್ರೀತಿ.
webdunia
IFM


ನಿಜ ಜೀವನದಲ್ಲಿರುವಂತೆಯೇ..?

ಹೌದು

ಚಿತ್ರದಲ್ಲಿ ನಿಮ್ಮಿಬ್ಬರ ಪ್ರಣಯವನ್ನು ನೋಡಲೆಂದೇ ಜನ ಚಿತ್ರಮಂದಿರಗಳಿಗೆ ದೌಡಾಯಿಸುವರೆಂದು ನಿಮಗೆ ಅನಿಸುತ್ತಿಲ್ಲವೇ ?

ನಾವಿಬ್ಬರೂ ಈಗಷ್ಟೇ ನಮ್ಮ ಕೆರಿಯರ್ ಅನ್ನು ಆರಂಭಿಸಿದ್ದೇವೆ. ಜನ ನಮ್ಮಿಬ್ಬರ ತೆರೆಯ ಮೇಲಿನ ಸರಸವನ್ನು ವೈಯಕ್ತಿಕ ಜೀವನಕ್ಕೆ ಹೋಲಿಸುವುದಕ್ಕಿಂತ, ಚಿತ್ರದ ಬಗ್ಗೆ ಮತ್ತು ನಮ್ಮ ಪಾತ್ರಗಳ ಬಗ್ಗೆ ಮಾತನಾಡಿದರೆ ಒಳಿತು.

ನಿಮ್ಮ ತಂದೆಯ 'ಲವ್ವರ್ ಬಾಯ್' ಇಮೇಜ್ ಅನ್ನು ನೀವು ಈಗಾಗಲೇ ಪಡೆದುಕೊಂಡಿದ್ದೀರಿ. ನೀವು ಬೇರೆನನ್ನಾದರೂ ಪ್ರಯತ್ನಿಸಲು ಬಯಸುವುದಿಲ್ಲವೇ ?

ನಾನು ಎಂದಿಗೂ ರಿಷಿ ಕಪೂರ್ ಆಗುವುದು ಸಾಧ್ಯವಿಲ್ಲ. ಇವತ್ತಿಗೂ ನನಗಿಂತಲೂ ಹೆಚ್ಚು, ಬಾಲಿವುಡ್‌ನ ಎಲ್ಲಾ ಸುಂದರಿಯನ್ನು ಮರಳುಮಾಡುವಷ್ಟು ಸಾಮರ್ಥ್ಯ ಅವರಿಗಿದೆ. 'ಲವ್ವರ್ ಬಾಯ್' ಇಮೇಜ್ ಬಗ್ಗೆ ಹೇಳಬೇಕೆಂದರೆ, ನನಗೆ ಇನ್ನು ಎರಡು ವರ್ಷಗಳ ಅವಕಾಶ ಕೊಡಿ, ನಾನು 20 ದಾಂಡಿಗರನ್ನು ಒಂಟಿಯಾಗಿ ಹೊಡೆದುರುಳಿಸುವುದನ್ನು ನೀವು ನೋಡುತ್ತೀರಿ.

webdunia
IFM
ನಿಮ್ಮ ಮೊದಲ ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲಿಲ್ಲ...

ಸಾವರಿಯಾ ಕಮರ್ಶಿಯಲ್ ಹಿಟ್ ಚಿತ್ರವಾಗಲಿಲ್ಲ. ಆದರೆ ಬಚನಾ.. ಬಾಕ್ಸ್ ಆಫೀಸ್‌ನಲ್ಲಿ ಓಡಬಹುದು ಎಂದು ನನ್ನ ನಿರೀಕ್ಷೆ

ಚೊಚ್ಚಲ ಚಿತ್ರದ ನಂತರವೇ ಬಾಲಿವುಡ್‌ನ ಹೃದಯಚೋರ ಎಂಬ ಖ್ಯಾತಿಗೆ ಪಾತ್ರವಾಗಿರುವುದರ ಬಗ್ಗೆ ನಿಮ್ಮ ಅನಿಸಿಕೆಯೇನು ?

ನನ್ನ ಕೆರಿಯರ್ ಆರಂಭಿಕ ಹಂತದಲ್ಲಿಯೇ ಇಂತಹ ಖ್ಯಾತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಜನ ಅಟೋಗ್ರಾಫ್‌ಗಾಗಿ ನನ್ನ ಬಳಿ ಬಂದಾಗ 'ಇದು ಎಂದೆಂದಿಗೂ ಮುಂದುವ ರಿಯುತ್ತಿರಲಿ' ಎಂದು ಹೇಳಬೇಕೆಂದು ಅನಿಸುತ್ತದೆ.

ಹೊಸಬರಾದ ಇಮ್ರಾನ್ ಖಾನ್ ಮತ್ತು ನಿತಿನ್, ಮುಖೇಶ್‌ರ ಬಗ್ಗೆ ನಿಮಗೆ ಏನನಿಸುತ್ತದೆ?

ಎರಡೇ ಹೆಸರುಗಳು ಏಕೆ- ಅಮಿತಾಬ್ ಬಚ್ಚನ್‌ರಿಂದ ಹಿಡಿದು ದರ್ಶೀಲ್ ಸಫಾರಿಯವರೆಗೆ ಬಾಲಿವುಡ್ ಕಳೆದ ಎರಡು ವರ್ಷಗಳಿಗಿಂತ ಹೆಚ್ಚು ಹಿಂದೆಂದೂ ಸ್ಪರ್ಧಾತ್ಮಕವಾಗಿರಲಿಲ್ಲ. ಇಲ್ಲಿ ಪ್ರತಿದಿನವು ಹೊಸ ನಟ ಪ್ರಭಾವಶಾಲಿಯಾಗುತ್ತಾನೆ. ಆದ್ದರಿಂದ ಇಂತಹ ವಿಷಯಗಳಿಗೆ ನಾನು ತಲೆಕೆಡಿಸಿಕೊಂಡರೆ ನಾನು ಆಘಾತಕ್ಕೆ ಒಳಗಾಗಬೇಕಾಗುತ್ತದೆ.

ದೀಪಿಕಾರೊಂದಿಗೆ ನಿಮ್ಮ ಸಂಬಂಧದ ಆರಂಭದ ನಂತರ ನಿಮ್ಮ ಮತ್ತು ಸೋನಮ್ ಕಪೂರ್‌ರ ನಡುವಿನ ಗೆಳೆತನ ಅಂತ್ಯವಾಯಿತು ಎಂಬ ಸುದ್ದಿಯಿದೆ..

ಈ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ. ಆದರೂ ನಾನು ಉತ್ತರಿಸುತ್ತೇನೆ, ನಾನು ಮತ್ತು ಸೋನಮ್ ಕಳೆದ ಐದು ವರ್ಷಗಳಿಂದ ಸ್ನೇಹಿತರು. ಅವಳು ನನ್ನ ಪಾಲಿಗೆ ಬಹಳ ವಿಶಿಷ್ಟ ಸ್ಥಾನ ಹೊಂದಿದ್ದಾಳೆ ಆದರೆ ನಮ್ಮಿಬ್ಬರ ನಡುವೆ ಎಂದೂ ಪ್ರೇಮ ಸಂಬಂಧವಿರಲಿಲ್ಲ. ಆದ್ದರಿಂದ ದೀಪಿಕಾಳಿಂದಾಗಿ ನಮ್ಮಿಬ್ಬರ ಸ್ನೇಹ ಯಾಕೆ ಕೊನೆಗೊಳ್ಳಬೇಕು. ನಾವಿಬ್ಬರೂ ಬೇರೆ ಬೇರೆ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದೇವೆ ಆದ್ದರಿಂದ ಬೇಟಿ ಮಾಡಲು ಸಮಯವಿಲ್ಲ, ಆದರೆ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.
webdunia
IFM


ಕೃಪೆ; ಶ್ರೇಯಾ ಬಸು, ಟ್ರಾನ್ಸ್ ವರ್ಲ್ಡ್ ಫೀಚರ್‌

Share this Story:

Follow Webdunia kannada