Select Your Language

Notifications

webdunia
webdunia
webdunia
webdunia

ಮೋಹಕ ಚೆಲುವೆ ಆಯೇಷಾ ಟಕಿಯಾ ಪರಿಚಯ

ಮೋಹಕ ಚೆಲುವೆ ಆಯೇಷಾ ಟಕಿಯಾ ಪರಿಚಯ
IFM
ಆಯೇಷಾ ಟಕಿಯಾ ಹುಟ್ಟಿದ್ದು ಏ.10, 1986ರಲ್ಲಿ. ಆಕೆಯ ಅಪ್ಪ ನಿಶಿತ್ ಒಬ್ಬ ಗುಜರಾತಿ. ಅಮ್ಮ ಅರ್ಧ ಬ್ರಿಟೀಶ್, ಅರ್ಧ ಮಹಾರಾಷ್ಟ್ರಿಯನ್ ಆಂಗ್ಲೋ ಇಂಡಿಯನ್. ಟಕಿಯಾ ಓದಿದ್ದು ಸೈಂಟ್ ಆಂಥೋನಿ ಸ್ಕೂಲ್‌ನಲ್ಲಿ. ಶಾಲೆಯಲ್ಲಿರುವಾಗಲೇ ಜಾಹಿರಾತುಗಳಲ್ಲಿ ನಟಿಸುತ್ತಿದ್ದದರಿಂದ ಆಕೆಯ ಡೇಟ್ಸ್, ಫೋನ್ ಕಾಲ್ ಎಲ್ಲವನ್ನೂ ಅಪ್ಪನೇ ನಿಭಾಯಿಸುತ್ತಿದ್ದರು. ಆಯೇಷಾಗೆ ನತಾಶಾ ಎಂಬ ಒಬ್ಬ ತಂಗಿಯಿದ್ದಾಳೆ.

ಪುಟ್ಟ ಹುಡುಗಿಯಾಗಿದ್ದಾಗಿನಿಂದಲೂ ಆಯೇಷಾಗೆ ನಟನೆಯ ನಂಟು. ಹಲವು ಜಾಹಿರಾತುಗಳಲ್ಲಿ ನಟಿಸಿರುವ ಆಯೇಷಾಳ ಕಾಂಪ್ಲಾನ್ ಜಾಹಿರಾತು ಪ್ರಖ್ಯಾತಿ ಪಡೆಯಿತು. ಐ ಎಮ್ ಎ ಕಾಂಪ್ಲಾನ್ ಗರ್ಲ್ ಎಂದು ಮುದ್ದಾಗಿ ಹೇಳುವ ಆ ಜಾಹಿರಾತಿನಲ್ಲಿ ಆಯೇಷಾ ಜತೆಗಿದ್ದ ಪುಟ್ಟ ಹುಡುಗ ಶಾಹಿದ್ ಕಪೂರ್. ಇಂತಿಪ್ಪ ಆಯೇಷಾ 15ರ ಹರೆಯದಲ್ಲೇ ಫಾಲ್ಗುಣಿ ಪಾಠಕ್ ಅವರ ಮೇರಿ ಚುನರಿ ಉಡ್ ಉಡ್ ಜಾಯೇ... ಅಂತ ಮ್ಯೂಸಿಕ್ ವಿಡಿಯೋದಲ್ಲಿ ಕುಣಿದು ಹೆಸರು ಪಡೆದಳು. ನಂತರ ಶೇಕ್ ಇಟ್ ಡ್ಯಾಡಿ ವಿಡಿಯೋ ಆಲ್ಬಮ್‌ನಲ್ಲಿ 16ರ ವಯಸ್ಸಿನ್ಲಲಿ ಕಾಣಿಸಿಕೊಂಡಳು. ಹೀಗಾಗಿ ಖ್ಯಾತಿ ಎಂಬುದು ಆಯೇಷಾಳ ಬೆನ್ನ ಹಿಂದೆಯೇ ಬಂತು.

ಆಯೇಷಾಳ ಮ್ಯೂಸಿಕ್ ಆಲ್ಬಮ್ ನಟನೆಯಿಂದಾಗಿ ಆಕೆಗೆ ಸುಲಭವಾಗಿ ಹಿಂದಿ ಚಿತ್ರರಂಗದಿಂದಲೂ ಕರೆ ಬಂತು. ಸೋಚಾ ನಾ ಥಾ ಚಿತ್ರ ಆಕೆಯ ನಟನೆಯ ಮೊದಲ ಚಿತ್ರವಾದರೂ, ಟಾರ್ಜನ್- ದಿ ವಂಡರ್ ಕಾರ್ ಚಿತ್ರ ಸೋಚಾ ನಾ ಥಾಕ್ಕಿಂತ ಮೊದಲು ಬಿಡುಗಡೆ ಕಂಡಿತು. ವಂಡರ್ ಕಾರ್ ಚಿತ್ರದ ಅಭಿನಯಕ್ಕೆ ಆಕೆಗೆ ಚಿತ್ರವಿಮರ್ಶಕರಿಂದಲೂ ಅತ್ಯುತ್ತಮ ಮೆಚ್ಚುಗೆ ಕೇಳಿ ಬಂತು. ಗ್ಲ್ಯಾಮರ್ ಪಾತ್ರಗಳಲ್ಲದಿದ್ದರೂ, ಹೊಸ ನಟಿ ತನ್ನದೇ ಇಮೇಜ್ ಹುಟ್ಟುಹಾಕಿ ತೆರೆಯ ವಿರುದ್ಧ ಈಜಬಲ್ಲವಳೆಂದರೆ ಅದು ಆಯೇಷಾ ಎಂದು ಪತ್ರಿಕೆಗಳು ಆಯೇಷಾಳ ನಟನೆಗೆ ಹೊಗಳಿದವು.

webdunia
IFM
ಮಾರ್ಚ್ 2009ರಲ್ಲಿ ಆಯೇಷಾ ಫರ್ಹಾನ್ ಅಜ್ಮಿ ಜತೆಗೆ ಮದುವೆಯಾಗಿದ್ದಾಳೆ. ಖ್ಯಾತ ರಾಜಕಾರಣಿ ಅಬು ಅಜ್ಮಿ ಮಗನಾದ ಫರ್ಹಾನ್ ಅಜ್ಮಿ ರೆಸ್ಟೋರೆಂಟ್ ಉದ್ಯಮಿ. ಡಿಸೆಂಬರ್ 2008ರಲ್ಲೇ ಮದುವೆಯಾಗಬೇಕೆಂದು ಅಂದುಕೊಂಡಿದ್ದ ಆಯೇಷಾ ಜೋಡಿ ಮುಂಬೈ ಉಗ್ರರ ದಾಳಿ ಹಿನ್ನೆಲೆಯಲ್ಲಿ ವಿಳಂಬ ಮಾಡಬೇಕಾಯಿತು.

2005ರಲ್ಲಿ ಮೊದಲ ಚಿತ್ರ ಟಾರ್ಜನ್: ದಿ ವಂಡರ್ ಕಾರ್ ಚಿತ್ರದ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದ ಆಯೇಷಾ, 2005ರಲ್ಲೇ ಸ್ಟಾರ್ ಟಿವಿಯ ಸಬ್‌ಸೇ ಫೇವರಿಟ್ ನಯೀ ಹೀರೋಯಿನ್ ಎಂಬ ಗೌರವಕ್ಕೆ ಪಾತ್ರರಾದರು. 2007ರಲ್ಲಿ ನಾಗೇಶ್ ಕೂಕನೂರ್ ಅವರ ಢರ್ ಚಿತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಅವಾರ್ಡ್ ಪಡೆದರು. ಏದೇ ವರ್ಷ ಸ್ಟಾರ್‌ಡಸ್ಟ್ ಪ್ರಶಸ್ತಿಯೂ ಒಲಿಯಿತು, ಬೆಂಗಾಲ್ ಫಿಲ್ಮ್ ಜರ್ನಲಿಸ್ಟ್ ಅಸೋಸಿಯೇಶನ್ ಪ್ರಶಸ್ತಿಯೂ ಢರ್ ಚಿತ್ರಕ್ಕಾಗಿ ನಡೆಯಿತು. ಝೀ ಕ್ರಿಟಿಕ್ ಅವಾರ್ಡ್ ಬಂತು.

ಟಾರ್ಜನ್: ದಿ ವಂಡರ್ ಕಾರ್, ದಿಲ್ ಮಾಂಗೇ ಮೋರ್, ಸೋಚಾ ನಾ ಥಾ, ಶಾದಿ ನಂ.1, ಶಾದಿ ಸೇ ಪೆಹ್ಲೇ, ಢರ್, ಸಲಾಂ ಎ ಇಶ್ಕ್, ಕ್ಯಾ ಲವ್ ಸ್ಟೋರಿ ಹೈ, ಸಂಡೇ, ನೋ ಸ್ಮೋಕಿಂಗ್, ವಾಂಟೆಡ್... ಹೀಗೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದವಳು ಆಯೇಷಾ. ಈಕೆಯ ಇತ್ತೀಚೆಗಷ್ಟೆ ಬಿಡುಗಡೆಯಾದ ಚಿತ್ರ ಅಕ್ಷಯ್ ಕುಮಾರ್ ಜತೆಗಿನ ಥ್ರಿಲ್ಲರ್ 8 X 10 ತಸ್ವೀರ್. ಆದರೆ ಈ ಚಿತ್ರ ಫ್ಲಾಪ್ ಆಯಿತು.

ಸದ್ಯಕ್ಕೆ ಆಯೇಷಾ ಕೈಯಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳೇನೂ ಇಲ್ಲ. ಅವಕಾಶವೂ ಕಡಿಮೆಯಾಗಿದೆ. ಆದರೂ ಆಯೇಷಾ ಅದ್ಭುತ ನಟಿ ಎಂಬಲ್ಲಿ ಎರಡು ಮಾತೇ ಇಲ್ಲ. ಈಗಿನ್ನೂ 23ರ ಹರೆಯದ ಆಯೇಷಾ ಈಗಾಗಲೇ ಬಾಲಿವುಡ್‌ನಲ್ಲಿ ಬದಿಗೆ ಸರಿಸಲ್ಪಟ್ಟಿದ್ದಾಳೆ. ಜತೆಗೆ ಮದುವೆಯೂ ಆಗಿದೆ. ಹೀಗಾಗಿ ಆಕೆ ಮತ್ತೆ ಚಿತ್ರರಂಗಕ್ಕೆ ಬರುವ ಸಾಧ್ಯತೆಗಳೂ ಕಡಿಮೆ ಎನ್ನಲಾಗುತ್ತಿದೆ. ತನ್ನದೇ ಬ್ರ್ಯಾಂಡ್‌ನ ಫ್ಯಾಷನ್ ಉಡುಪುಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಿರುವ ಆಯೇಷಾ ಸದ್ಯದಲ್ಲೇ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಫ್ಯಾಷನ್ ಪ್ರಪಂಚದಲ್ಲೇ ಕಾಲೂರುವ ಪ್ರಯತ್ನ ಕಾಣುತ್ತಿದೆ.
webdunia
IFM

Share this Story:

Follow Webdunia kannada