Select Your Language

Notifications

webdunia
webdunia
webdunia
webdunia

ಕನ್ನಡತಿ ದೀಪಿಕಾಳ ಬಾಲಿವುಡ್ ಹೆಜ್ಜೆಗಳು

ಕನ್ನಡತಿ ದೀಪಿಕಾಳ ಬಾಲಿವುಡ್ ಹೆಜ್ಜೆಗಳು
ಕನ್ನಡತಿ ದೀಪಿಕಾ ಪಡುಕೋಣೆ ಮುಂಬೈಗೆ ಹಾರಿ ಬಾಲಿವುಡ್‌ನಲ್ಲಿ ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದ್ದಾಳೆ. ತನ್ನ ಮೊದಲ ಚಿತ್ರ ಓಂ ಶಾಂತಿ ಓಂ ಮೂಲಕ ಬಾಲಿವುಡ್ ಬಾದ್‌ಶಾಹ್ ಶಾರುಖ್ ಖಾನ್ ಜೊತೆಗೆ ನಟಿಸಿ ಅಚ್ಚರಿ ಮೂಡಿಸಿದ ಈ ದೀಪಿಕಾ ಪಡುಕೋಣೆ ಹುಟ್ಟಿದ್ದು ಡೆನ್ಮಾರ್ಕಿನಲ್ಲಿ. ಹನ್ನೊಂದು ತಿಂಗಳ ಮಗುವಾಗಿದ್ದಾಗ ಅಪ್ಪ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಜೊತೆಗೆ ಬೆಂಗಳೂರಿಗೆ ಬಂದಳು. ಮಾಡೆಲ್ ಲೋಕದ ಈ ಬೆಕ್ಕಿನ ನಡಿಗೆಯ ಬೆಡಗಿ ದೀಪಿಕಾ ಅಪ್ಪನಂತೆಯೇ ಬ್ಯಾಡ್ಮಿಂಟನ್ ಬಗ್ಗೆ ಒಲವನ್ನೂ ಹೊಂದಿದ್ದಾಳೆ. ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಆಟವನ್ನೂ ಆಡಿ ವಿಜಯದ ನಡೆ ಬೀರಿದ್ದಳು. ಆದರೂ ಆರಿಸಿಕೊಂಡದ್ದು ಮಾಡೆಲಿಂಗನ್ನು.

ಕನ್ನಡದಲ್ಲಿ ಉಪೇಂದ್ರ ಜೊತೆಗೆ ಐಶ್ವರ್ಯ ಚಿತ್ರದಲ್ಲಿ ನಟಿಸಿದ ದೀಪಿಕಾ ನಂತರ ಹಿಂದಿಯತ್ತ ಹಾರಿ ತಿರುಗಿ ನೋಡಲೇ ಇಲ್ಲ. ಯಶಸ್ಸೂ ಬೆನ್ನಿಗಿತ್ತು. ಮಾಡೆಲ್ ಲೋಕದ ಥಳುಕು ವೈಯ್ಯಾರವೂ ಇತ್ತು. ಅಪ್ರತಿಮ ಸೌಂದರ್ಯದ ಜೊತೆಗೆ ಪ್ರತಿಭೆಯೂ ಇತ್ತು. ಮೊದಲ ಚಿತ್ರ ಓಂ ಶಾಂತಿ ಓಂ ಭರ್ಜರಿ ಹಿಟ್ ಆಯಿತು. ನಂತರ ಬಚ್ನಾ ಏ ಹಸೀನೋ, ಲವ್ ಆಜ್ ಕಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾಳೆ. ಸದ್ಯ ಕೈಯಲ್ಲಿ ತುಂಬ ಪ್ರಾಜೆಕ್ಟುಗಳೂ ಇವೆ.

Share this Story:

Follow Webdunia kannada