Webdunia - Bharat's app for daily news and videos

Install App

ಹರ್ಷಿಕಾ ಪೂಣಚ್ಚ ಏನು ಮಾಡ್ತಿದ್ದಾರೆ?

Webdunia
ಗುರುವಾರ, 27 ಅಕ್ಟೋಬರ್ 2016 (13:35 IST)
ಬೆಂಗಳೂರು: ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಬಿಗ್ ಬಾಸ್ ಗೆ ಮನೆಗೆ ಹೋದರು, ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಕುಣಿದರು. ಬಾಲಿವುಡ್ ಗೆ ಹೋಗ್ತಾರೆ ಅಂತ ಸುದ್ದಿಯಾಗಿತ್ತು. ಅದೂ ಇಲ್ಲವೆಂದಾಯ್ತು. ಕೊನೆಗೆ ಉಪೇಂದ್ರ ಜತೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಸುದ್ದಿಯಾಗಿತ್ತು. ಇದೀಗ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಕೊಟ್ಟಿದ್ದಾರೆ.

ಆದರೆ ಅದರ ಹೆಸರು, ಯಾವಾಗ ಆರಂಭವಾಗುತ್ತದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ತಮಿಳು ನಟ ಜೈ ಜತೆ ಸಿನಿಮಾ ಮಾಡುವುದು ಪಕ್ಕಾ. ಬಹುಶಃ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಬಹುದು.

ಮಾತುಕತೆ ಇನ್ನೂ ಪ್ರಗತಿಯಲ್ಲಿದೆ ಎಂದು ಸ್ವತಃ ಹರ್ಷಿಕಾ ವೆಬ್ ದುನಿಯಾಗೆ ತಿಳಿಸಿದ್ದಾರೆ. ಮರಿಕ್ಕಾರ್ ಫಿಲಂಸ್ ತಮಿಳು ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಅದರಲ್ಲಿ ಒಂಥರಾ ಬೋಲ್ಡ್ ವ್ಯಕ್ತಿತ್ವದ ಹುಡುಗಿ ಪಾತ್ರ ಮಾಡುತ್ತಿದ್ದೇನೆ ಎಂದಿದ್ದಾರೆ.

 
ಸದ್ಯ ಸಿಕ್ಕ ಸಿಕ್ಕ ಪಾತ್ರಗಳಲ್ಲಿ ಅಭಿನಯಿಸುವುದನ್ನು ಬಿಟ್ಟು ಚ್ಯೂಸಿಯಾಗಿದ್ದೇನೆ. ಕೆಲವೆಲ್ಲಾ ಮಾತುಕತೆ ಪ್ರಗತಿಯಲ್ಲಿದೆ.

ಬಾಲಿವುಡ್ ಸಿನಿಮಾ ಲೋಕದ ಅನುಭವವಾದ ನಂತರ ಹರ್ಷಿಕಾ ತುಂಬಾ ಜಾಗರೂಕರಾಗಿದ್ದಾರೆ. ಯಾವುದೇ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿಯನ್ನು ಪಕ್ಕಾ ಕನ್ ಫರ್ಮ್ ಆಗುವ ಮೊದಲೇ ಘೋಷಣೆ ಮಾಡಿ ತಪ್ಪು ಮಾಡಲ್ಲ ಅಂತಿದ್ದಾರೆ.

ಅಷ್ಟಕ್ಕೂ ಬಾಲಿವುಡ್ ಗೆ ಹೋಗಿದ್ದ ಹರ್ಷಿಕಾ ಮತ್ಯಾಕೆ ಹಿಂದೆ ಬಂದರು ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.  ಸಿನಿಮಾ ಆಗುವುದು ಪಕ್ಕಾ ಆಗಿತ್ತು. ಹೀರೋಯಿನ್ ಕ್ಯಾರೆಕ್ಟರ್ ಇವರೇ ಮಾಡುವುದೆಂದೂ ಪಕ್ಕಾ ಆಗಿತ್ತು. ಆದರೆ ಮತ್ತೆ ಅವರು ನಟಿಸದೇ ಇರುವುದಕ್ಕೆ ಕಾರಣ ಚಿತ್ರ ತಂಡ ಅಲ್ಲ ಅಂತಾರೆ.

ಎಲ್ಲಾ ಫೈನಲ್ ಆಯ್ತು ಇನ್ನೇನು ಸಿನಿಮಾ ಶುರುವಾಗಬೇಕು ಎನ್ನುವ ಹೊತ್ತಿಗೆ ಬಾಲಿವುಡ್ ನ ಒಬ್ಬ ಜನಪ್ರಿಯ ನಾಯಕ ಈ ಕ್ಯಾರೆಕ್ಟರ್ ಮಾಡಿದ್ರೆ ಜನ ನಿನ್ನನ್ನು ನೆಗೆಟಿವ್ ಆಗಿ ನೋಡ್ತಾರೆ. ಮುಂದೆ ನಿನಗೆ ಕಷ್ಟವಾಗಬಹುದು ಎಂದರಂತೆ. ಅದಕ್ಕೇ ಆ ಸಿನಿಮಾ ಕೈ ಬಿಟ್ಟೆ ಎನ್ನುವುದು ಅವರ ಮಾತು.

ಅಷ್ಟಕ್ಕೂ ಅದು ಭಯೋತ್ಪಾದಕರ ಬಗೆಗಿನ ಚಿತ್ರವಾಗಿತ್ತಂತೆ. ಈ ಥರದ ಪಾತ್ರ ಮಾಡುವುದು ತನ್ನ ಕೆರಿಯರ್ ಗೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಪಾತ್ರ ಮಾಡುವುದಿಲ್ಲ ಎಂದು ಬಿಟ್ಟರಂತೆ.

ಅದೆಲ್ಲಾ ಸರಿ, ಹರ್ಷಿಕಾ ಬಿಗ್ ಬಾಸ್ ಗೆ ಹೋಗಿ ಬಂದ ಮೇಲೂ ಅಷ್ಟೊಂದು ಸದ್ದು ಮಾಡ್ತಿಲ್ಲವಲ್ಲ ಎಂದು ಕೇಳಿದರೆ ಅವರು ಹೇಳಿದ್ದು ಹೀಗೆ. ನಂಗೆ ರಿಯಾಲಿಟಿ ಶೋಗಳೇ ಇಷ್ಟ ಇಲ್ಲ. ಪರಿಚಯದವರ ಒತ್ತಾಯಕ್ಕೆ ಕಟ್ಟು ಬಿದ್ದು ಮಾಡಿದ್ದೆ ಎನ್ನುತ್ತಾರೆ.

ಹಾಗೆಂದು ಇದರಲ್ಲಿ ಭಾಗವಹಿಸಿದ್ದಕ್ಕೆ ಬೇಸರವಿಲ್ಲ. ಆಗುವುದೆಲ್ಲಾ ಒಳ್ಳೆಯದಕ್ಕೇ ಎಂದು ತಿಳಿಯುವವಳು ನಾನು. ಚಿತ್ರರಂಗಕ್ಕೆ ಬಂದ ಹೊಸದರಲ್ಲೇ ಪುನೀತ್ ರಾಜ್ ಕುಮಾರ್ ಜತೆ ಸಿನಿಮಾ ಮಾಡಿದ್ದೆ. ಈಗ ಉಪೇಂದ್ರ ಜತೆ ಮಾಡುವ ಅವಕಾಶ ಸಿಕ್ಕಿದೆ. ಇದೆಲ್ಲಾ ಸುಮ್ನೇನಾ ಅಂತ ನಮ್ಮನ್ನು ಕೇಳುತ್ತಾರೆ ಕನ್ನಡದ ಹುಡುಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

Indian Idol 12 winner ಪವನ್‌ದೀಪ್ ರಾಜನ್ ಸ್ಥಿತಿ ನೋಡಕ್ಕಾಗಲ್ಲ

Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

ಮುಂದಿನ ಸುದ್ದಿ
Show comments