Webdunia - Bharat's app for daily news and videos

Install App

ಬಾಕ್ಸ್ ಆಫೀಸಲ್ಲಿ ಜಾಲಿ ಎಲ್‍ಎಲ್‍ಬಿ 2 ಜಾಲಿ ರೈಡ್

Webdunia
ಮಂಗಳವಾರ, 14 ಫೆಬ್ರವರಿ 2017 (21:11 IST)
ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅಭಿನಯದ ’ಜಾಲಿ ಎಲ್‍ಎಲ್‍ಬಿ 2’ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದೆ. ಇದುವರೆಗೆ ಚಿತ್ರ ರೂ.54 ಕೋಟಿ ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಜಾಲಿ ಎಲ್ಎಲ್‍ಬಿ ಸಿನಿಮಾ ಫೆಬ್ರವರಿ 10ರಂದು ತೆರೆಕಂಡಿತ್ತು.
 
ಈ ಬಗ್ಗೆ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಶುಕ್ರವಾರ ರೂ.13.20 ಕೋಟಿ, ಶನಿವಾರ ರೂ.17.31 ಕೋಟಿ, ಭಾನುವಾರ ರೂ.19.95 ಕೋಟಿ ಮತ್ತು ಸೋಮವಾರ ರೂ.7.26 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. 
 
ಸುಭಾಷ್ ಕಪೂರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅಕ್ಷಯ್‌ಗೆ ಜೋಡಿಯಾಗಿ ಹುಮಾ ಖುರೇಷಿ ಅಭಿನಯಿಸಿದ್ದಾರೆ. ಅನ್ನು ಕಪೂರ್ ಪ್ರತಿಸ್ಪರ್ಧಿ ವಕೀಲರಾಗಿ, ಸೌರಭ್ ಶುಕ್ಲಾ ನ್ಯಾಯಮೂರ್ತಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. 
 
ನಿರ್ಲಜ್ಜ ವಕೀಲನಾಗಿ ಅಕ್ಕಿ ಕಾಣಿಸಿದ್ದು ಕಡೆಗೆ ಹೇಗೆ ಬದಲಾಗುತ್ತಾನೆ ಎಂಬುದು ಚಿತ್ರದ ತಿರುಳು. 2013ರಲ್ಲಿ ಬಿಡುಗಡೆಯಾದ ಜಾಲಿ ಎಲ್ಎಲ್ ಚಿತ್ರದ ಮುಂದುವರಿದ ಅವತರಣಿಕೆ ಇದು. ಅರ್ಷದ್ ವಾರ್ಸಿ, ಬೋಮನ್ ಇರಾನಿ ಚಿತ್ರದ ಪಾತ್ರವರ್ಗದಲ್ಲಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇ: ಪುನೀತ್ ಮಾಡಿದ ತ್ಯಾಗದಿಂದ ಸ್ಟಾರ್ ಆದ್ರು ಗಣೇಶ್

ನಟ ಮೋಹನ್ ಲಾಲ್ ಮಗಳು ಬೆಳ್ಳಿತೆರೆಗೆ ಪಾದಾರ್ಪಣೆ

ಟಾಪ್ ಮ್ಯೂಸಿಕ್ ಕೆಟಗರಿಯಲ್ಲಿ ಸ್ಥಾನ ಪಡೆದ ಬ್ಯಾಂಗಲ್ ಬಂಗಾರಿ, ಯುವ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ

ಗೌತಮ್ ಹೆಂಡ್ತಿ ಭೂಮಿಕಾ ಡೆಲಿವರಿ ಮಾಡಿಸೋದು ಇದೇ ಡಾಕ್ಟರ್ ಅಂತಿದ್ದಾರೆ ವೀಕ್ಷಕರು

ಯಾವುದೇ ಕಾರಣಕ್ಕೂ ಆ ಒಂದು ದೃಶ್ಯದಲ್ಲಿ ನಟಿಸಲ್ಲ ಎಂದ ರಶ್ಮಿಕಾ ಮಂದಣ್ಣ

ಮುಂದಿನ ಸುದ್ದಿ
Show comments