Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್ ತಾರೆಯರ ಮನೆಗಳಲ್ಲಿ ಕಬಾಲಿ ಸ್ಪೆಷಲ್ ಸ್ಕ್ರೀನಿಂಗ್

ಸ್ಯಾಂಡಲ್‌ವುಡ್ ತಾರೆಯರ ಮನೆಗಳಲ್ಲಿ ಕಬಾಲಿ ಸ್ಪೆಷಲ್ ಸ್ಕ್ರೀನಿಂಗ್
ಬೆಂಗಳೂರು , ಶುಕ್ರವಾರ, 22 ಜುಲೈ 2016 (09:10 IST)
ಸದ್ಯ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಸಿನಿಮಾ ಕಬಾಲಿ. ಎಲ್ಲೇ ಹೋದ್ರು ಕಬಾಲಿ ಸಿನಿಮಾದ್ದೇ ಮಾತು. ಕಬಾಲಿ ಸಿನಿಮಾದ ಫಸ್ಟ್ ಡೇಯ ಫಸ್ಟ್ ಶೋ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಹೊರತಾಗಿಲ್ಲ. ಕನ್ನಡದ ನಟರು ಇದಕ್ಕಾಗಿ ಈಗ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.


 ನಟರಾದ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಗಣೇಶ್ ಈ ಮೂವರ ನಟರು ತಮ್ಮ ಮನೆಯಲ್ಲೇ ಖಾಸಗಿ ಥಿಯೇಟರ್ ಗಳನ್ನು ಹೊಂದಿದ್ದಾರೆ,ಆಗಾಗ್ಗೆ ರಿಲೀಸ್ ಆಗುವ ಅನೇಕ ಸಿನಿಮಾಗಳನ್ನು ಇವರುಗಳು ಇಲ್ಲೇ ನೋಡುತ್ತಾರೆ, ಇದೀಗ ಕಬಾಲಿ ಸಿನಿಮಾವನ್ನು ಕೂಡ ಇವರು ಮನೆಗಳಲ್ಲೇ ನೋಡಲಿದ್ದಾರಂತೆ.

ಇನ್ನು ಈ ತಾರೆಗೆಳ ಮನೆಯ ಥಿಯೇಟರ್ ಗಳಲ್ಲಿ ಇನ್ನ್ಯಾರೆಲ್ಲ ಬಂದು ಸಿನಿಮಾ ನೋಡುತ್ತಾರೋ ಗೊತ್ತಿಲ್ಲ.ಆದ್ರೆ ಕಬಾಲಿ ಸಿನಿಮಾ ನೋಡೋದಕ್ಕೆ ಆಯಾಯ ತಾರೆಯರ ಸ್ನೇಹಿತರು ಹಾಗೇ ಸ್ಯಾಂಡಲ್ ವುಡ್ ನ ಒಂದಷ್ಟು ನಟರ ಬರೋದಿ ಪಕ್ಕಾ, ಯಾರೆಲ್ಲಾ ಅನ್ನೋದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮಾವತಿ ಸಿನಿಮಾದಲ್ಲಿ ಶಾರುಖ್ ಹಾಗೂ ಹೃತಿಕ್ ಅಭಿನಯಿಸುತ್ತಾರಾ?