Select Your Language

Notifications

webdunia
webdunia
webdunia
webdunia

ಯಶ್ ಜೊತೆ ಅನುಷ್ಕ ಅಥವಾ ಪ್ರಿಯಾ ಆನಂದ್ ನಟನೆ ?

ಯಶ್ ಜೊತೆ ಅನುಷ್ಕ ಅಥವಾ ಪ್ರಿಯಾ ಆನಂದ್ ನಟನೆ ?
, ಶನಿವಾರ, 25 ಅಕ್ಟೋಬರ್ 2014 (08:57 IST)
ಸ್ಯಾಂಡಲ್‌ವುಡ್‌ ನಟ ಯಶ್ ಈಗ ಕನ್ನಡ ಚಿತ್ರರಂಗದ ಲೀಡ್ ಹೀರೋ. ಅವರ ಚಿತ್ರಗಳನ್ನು ಗೆಲ್ಲಿಸಿ ಪ್ರೇಕ್ಷಕ ಯಶ್ ಸ್ಥಾನ ಭದ್ರ ಮಾಡಿದ್ದಾರೆ ಸ್ಯಾಂಡಲ್‌ವುಡ್‌ನಲ್ಲಿ. ಪ್ರಸ್ತುತ ತನ್ನ ಗರ್ಲ್ ಫ್ರೆಂಡ್ ರಾಧಿಕ ಪಂಡಿತ್ ಜೊತೆ ಅಭಿನಯಿಸುತ್ತಿರುವ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಯಶ್ ತುಂಬಾ ಬ್ಯುಸಿಯಾಗಿದ್ದಾರೆ. ಇದಲ್ಲದೇ ಅವರ ಮುಂದಿನ ಚಿತ್ರವೂ ಸಹಿತ ಸಿದ್ಧವಾಗಿದೆ , ಸದ್ಯದಲ್ಲೇ ಚಿತ್ರದ ಶೂಟಿಂಗ್ ಕಾರ್ಯವು ನಡೆಯುವ ಹಾದಿಯಲ್ಲಿದೆ. 

ಯಶ್ ಮುಂದಿನ ಚಿತ್ರ ಅತ್ಯಂತ ಭಿನ್ನವಾಗಿದ್ದು, ಅದು ವಿಶಿಷ್ಟತೆಯಿಂದ ಕೂಡಿದ್ದಾಗಿದೆ. ಈ ಚಿತ್ರದಲ್ಲಿ ಯಶ್ ಜೊತೆ ಪ್ರಾಯಶಃ ಕಾಲಿವುಡ್ ನಟಿ ಪ್ರಿಯಾ ಆನಂದ್ ಅಥವಾ ಟಾಲಿವುಡ್ ನಟಿ ಅನುಷ್ಕ ಶೆಟ್ಟಿ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದು ಅಂತಿಮ ನಿರ್ಧಾರ ಪಡೆದಿಲ್ಲ. ಯಶ್ ಈಗ ಈ ಇಬ್ಬರಲ್ಲಿ ಒಬ್ಬರ ಜೊತೆ ಅಭಿನಯಿಸಲು ಆದ್ಯತೆ ನೀಡಿದ್ದಾರೆ.ಆದರೆ ಅಂತಿಮವಾಗಿ ಯಾರ ಜೊತೆ ನಟಿಸುತ್ತಾರೆ ಯಶ್ ಎನ್ನುವ ಸಂಗತಿ ಇನ್ನು ನಿರ್ಧಾರವಾಗಿಲ್ಲ. ಸಧ್ಯದಲ್ಲೇ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಆರಂಭ ಆಗುವ ಸಾಧ್ಯತೆಗಳು ಇವೆ ಎಂದು ಚಿತ್ರತಂಡ ತಿಳಿಸಿದೆ.

Share this Story:

Follow Webdunia kannada