Webdunia - Bharat's app for daily news and videos

Install App

ಯಶ್ ರಾಜ್ ಬ್ಯಾನರ್ ನಲ್ಲಿ ಇನ್ಮೇಲೆ ನಟಿಸಲ್ವಾ ಸಲ್ಮಾನ್ ಖಾನ್?

Webdunia
ಶುಕ್ರವಾರ, 5 ಆಗಸ್ಟ್ 2016 (09:23 IST)
ಬಾಲಿವುಡ್ ನಿರ್ಮಾಪಕರ ಪಾಲಿಗೆ ಸಲ್ಮಾನ್ ಖಾನ್ ಸದಾ ಚಿನ್ನದ ಮೊಟ್ಟೆಯಿಡುವ ಕೋಳಿ. ಸಲ್ಲುನನ್ನು ಹಾಕಿಕೊಂಡು ಸಿನಿಮಾ ಮಾಡಿದ್ರೆ ಆ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ ಅನ್ನೋದು ನಿರ್ಮಾಪಕರ ಲೆಕ್ಕಾಚಾರ.ಅದಕ್ಕೆ ಯಶ್ ರಾಜ್ ಫಿಲ್ಮ್ಸ್ ಸಲ್ಲು ಸಿನಿಮಾ ಅಂದ್ರೆ ನಿರ್ಮಾಣ ಮಾಡೋದಕ್ಕೆ ಮುಂದೆ ಬರುತ್ತೆ.


ಇನ್ಮೇಲೆ ಸಲ್ಮಾನ್ ಖಾನ್ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ಕೆಲಸ ಮಾಡೋದು ಅನುಮಾನ ಅಂತಾ ಹೇಳಲಾಗುತ್ತಿದೆ. ಅದಕ್ಕೆ ಕಾರಣ ಇದೆ. ಅಂದ್ಹಾಗೆ ಸಲ್ಲು ಸುಲ್ತಾನ್ ಸಿನಿಮಾದಲ್ಲಿ ಅಭಿನಯಿಸುವ ವೇಳೆ ಸಿನಿಮಾ ಹಿಟ್ ಆದ್ರೆ ಸಂಭಾವನೆಯ ಮೊತ್ತವನ್ನು ಏರಿಸಬೇಕು ಅಂತಾ ಮಾತುಕತೆ ನಡೆದಿದ್ದಂತೆ.

ಸುಲ್ತಾನ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಈಗಾಗಲೇ 300 ಕೋಟಿ ಕ್ಲಬ್ ಸೇರಿದೆ.ಆದ್ರೆ ಆದಿತ್ಯಾ ಛೋಪ್ರಾ ಅವರು ಮಾತ್ರ ಕೊಟ್ಟ ಮಾತನ್ನು ಈಗ ಉಳಿಸಿಕೊಂಡಿಲ್ಲ ಅಂತಾ ಹೇಳಲಾಗ್ತಿದೆ. ಸಲ್ಮಾನ್ ಖಾನ್ ಅವರಿಗೆ ಕೊಟ್ಟ ಮಾತಿನಂತೆ ಹಣ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.

ಅಂದ್ಹಾಗೆ ಹಿಂದೆ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿ ತಯಾರಾದ ಏಕ್ತಾ ಟೈಗರ್ ಸಿನಿಮಾ ರಿಲೀಸ್ ಆದಾಗಲೂ ಇದೇ ರೀತಿ  ಹಣ ನೀಡಿರಲಿಲ್ಲವಂತೆ. ಹಾಗಾಗಿ ಸಲ್ಲು ಅಸಮಾಧಾನಗೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಲ್ಲು ಮುಂದೆ ಯಶ್ ರಾಜ್ ಬ್ಯಾನರ್ ನಡಿ ಕೆಲಸ ಮಾಡದೇ ಇರೋ ಸಾಧ್ಯತೆಗಳು ಕೂಡ ಹೆಚ್ಚಾಗಿವೆಯಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments