Select Your Language

Notifications

webdunia
webdunia
webdunia
webdunia

ಯಾರಿದು ನಂದಿತಾ ಸಿಂಗ್ಗ ? : ಸೂರ್ಯ

ಯಾರಿದು ನಂದಿತಾ ಸಿಂಗ್ಗ ? : ಸೂರ್ಯ
, ಶುಕ್ರವಾರ, 17 ಏಪ್ರಿಲ್ 2015 (10:24 IST)
ಸುದ್ದಿ ಹರಡಿಸುವ ಭರದಲ್ಲಿ ಏನೇನೇನೋ ಹರಡಿಸುವ ಮಂದಿ ಸಿಕ್ಕಾಪಟ್ಟೆ ಇರುತ್ತಾರೆ. ಆದರೆ ಸಿನಿ ರಂಗದಲ್ಲಿ ಅಂತಹವರ ಪ್ರಮಾಣ ಹೆಚ್ಚು. ಅನೇಕ ತಾರೆಗಳು ಅವರಿಗೆ ಗೊತ್ತಿಲ್ಲದೇ ಅನೇಕ ಸುದ್ದಿಗಳ ಮೂಲಕ ಸದಾ ಗಾಸಿಪ್ ಕಾಲಂಗಳ ಮೂಲಕ ಜೀವಂತವಾಗಿರುತ್ತಾರೆ. 

ಈಗ ಕಾಲಿವುಡ್ ನಟ ಸೂರ್ಯ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಇತ್ತೀಚೆಗೆ ಸೂರ್ಯ ಅವರು ಪ್ರಿಯಾಂಕ ಚೋಪ್ರ ಅವರ ಜೊತೆಗೆ ನಟಿಸುತ್ತಿದ್ದಾರೆ. ಅದೂ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿರುವ ಚಿತ್ರ .ಅದನ್ನು ನಂದಿತಾ ಸಿಂಗ್ಗ  ಅವರು ನಿರ್ಮಾಣ ಮಾಡುತ್ತಿದ್ದಾರೆ ಅದೂ ಇದೂ ಎನ್ನುವ ಸುದ್ದಿ ಹೆಚ್ಚು ಪ್ರಚಾರ ಪಡೆದಿತ್ತು. ಆದರೆ ಈ ಸಂಗತಿ ಖುದ್ದು  ನಟ ಸೂರ್ಯ ಅವರಿಗೆ ಗೊತ್ತಿಲ್ಲವಂತೆ.  ಪ್ರಿಯಾಂಕ ಜೊತೆ ನಟಿಸುವಂತಹ ಚಿತ್ರಕ್ಕೆಂದು ಸೂರ್ಯ ಸಹಿತ ಹಣ ಹೂಡುತ್ತಿದ್ದಾರೆ ಎಂದು ಬಿಟೌನ್ ನಲ್ಲಿ ಹರಡಿದ್ದ ಸುದ್ದಿಗೆ ಆಶ್ಚರ್ಯ ಚಕಿತರಾಗಿದ್ದಾರೆ ಸೂರ್ಯ!
 
ಈ ಚಿತ್ರದ ಬಗ್ಗೆ ತಮಗೆ ಸ್ವಲ್ಪವೂ ಸುಳಿವಿಲ್ಲ ಎಂದಿರುವ ಸೂರ್ಯ ಯಾರು ಆ ನಂದಿತಾ ಸಿಂಗ್ಗ ಎಂದು ಮಾಧ್ಯಮಗಳನ್ನೇ  ಪ್ರಶ್ನಿಸಿದ್ದಾರೆ. ಒಟ್ಟಾರೆ ಆ ಜಾಗ ತುಂಬಲು ಪತ್ರಿಕೆಗಳು ಬರೆಯುತ್ತವೆ. ತಮ್ಮ ಬಾಯ್ ಚಪಲ ತೀರಿಸಿಕೊಳ್ಳಲು ಸಿನಿಮಾ ವದಂತಿ ಪ್ರಿಯರು ಸುದ್ದಿ ಹರಡುತ್ತಾರೆ. ಇದೇ ಬಣ್ಣದ ಲೋಕದ ಜೀವನ ಹಾಗೂ ಇದುವೇ ಜೀವನ !!

Share this Story:

Follow Webdunia kannada