Select Your Language

Notifications

webdunia
webdunia
webdunia
webdunia

60 ವಯಸ್ಸಿನಲ್ಲೂ ನಟಿ ಆಶಾ ಪರೇಖ್‌ರ ಸೌಂದರ್ಯದ ಗುಟ್ಟೇನು?

60 ವಯಸ್ಸಿನಲ್ಲೂ ನಟಿ ಆಶಾ ಪರೇಖ್‌ರ  ಸೌಂದರ್ಯದ ಗುಟ್ಟೇನು?
ದೆಹಲಿ , ಶುಕ್ರವಾರ, 17 ಜೂನ್ 2016 (15:14 IST)
ಹಿರಿಯ ನಟಿ ಆಶಾ ಪರೇಖ್ 60 ವಯಸ್ಸಿನಲ್ಲೂ ಯುವತಿ ಥರಾ ಕಾಣಿಸುವುದರ ಹಿಂದೆ ಸೌಂದರ್ಯದ ಗುಟ್ಟೇನು ಎಂದು ಅವರ ಅಭಿಮಾನಿಗಳಿಗೆ ಇಂದಿಗೂ ಕಾಡುತ್ತಿರುವ ವಿಷ್ಯ. ಸದ್ಯ ಆಶಾ ಪರೇಖ್ ತಮ್ಮ ಸೌಂದರ್ಯದ ಬಗ್ಗೆ ನಟಿ ಬಹಿರಂಗಪಡಿಸಿದ್ದಾರೆ.


ನಾನು ಸಂತೋಷವಾಗಿದ್ದೇನೆ ಯಾಕಂದ್ರೆ ನಾನು ಮದುವೆಯಾಗಿಲ್ಲ, ಇಂದು ಪೋಷಕರು ಹಾಗೂ ಮಕ್ಕಳ ಮಧ್ಯೆ ತುಂಬಾ ಒತ್ತಡವಿರುವುದನ್ನು ನಾನು ಕಂಡಿದ್ದೇನೆ ಎಂದು ಆಶಾ ಪರೇಖ್ ತಿಳಿಸಿದ್ದಾರೆ. 'ನಿಮಗೆ ಒಂಟಿಯಾಗಿದ್ದೇನೆ ಎಂದು ಅನ್ನಿಸುತ್ತದೆಯೇ' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 

ನಾನು ಅಂತರ್ಮುಖಿ ಅಲ್ಲ, ನಾನು ತುಂಬಾ ಒಡನಾಡಿಯಾಗಿದ್ದೇನೆ. ನನ್ನ ಸ್ನೇಹಿತರು,ಆಪ್ತರು ಸಿಕ್ಕರೆ ತುಂಬಾ ಮಾತನಾಡುತ್ತೇನೆ ಎಂದು ಆಶಾ ಪರೇಖ್ ತಿಳಿಸಿದ್ದಾರೆ. 

'ನಿಮ್ಮ ಹಣೆಬರಹದಲ್ಲಿ ಮದುವೆ ಎಂಬುದು ಬರೆದಿಲ್ಲವೆಂದರೆ'.. 'ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗುತ್ತಾರೆ' ಇಲ್ಲವೇ' ನಿಮ್ಮ ಪತಿ ಮೃತನಾಗಬಹುದು'. ಆ ಬಳಿಕ ನೀವು ಮತ್ತೆ ಒಂಟಿಯಾಗುತ್ತೀರಿ. ಆದ್ದರಿಂದ ಒಂಟಿಯಾಗಿ ಬರಬೇಕು..ಒಂಟಿಯಾಗಿ ಹೋಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕ ತಾಪಮಾನದ ಮಧ್ಯೆ ಶೂಟಿಂಗ್‌ನಲ್ಲಿದ್ದಾಳೆ ಪರಿಣಿತಿ ಛೋಪ್ರಾ