Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಶ್ವೇತಾ ಪಂಡಿತ್...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಶ್ವೇತಾ ಪಂಡಿತ್...
ಮುಂಬೈ , ಬುಧವಾರ, 27 ಜುಲೈ 2016 (11:09 IST)
ಬಾಲಿವುಡ್‌ನ ಖ್ಯಾತ ಗಾಯಕಿ ಶ್ವೇತಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುದಿನದ ಇಂಟಾಲಿಯನ್ ಗೆಳೆಯನ ಜತೆಗೆ ಶ್ವೇತಾ ಸಪ್ತಪದಿ ತುಳಿದಿದ್ದಾರೆ. ಅಲ್ಲದೇ ತಮ್ಮ ಫ್ಯಾಮಿಲಿ ಫ್ರೆಂಡ್ಸ್ ಹಾಗೂ ಆಪ್ತರಿಗಾಗಿ ಮದುವೆ ಕಾರ್ಯಕ್ರಮ ಆಯೋಜಿಸುವ ಕುರಿತು ಪ್ಲ್ಯಾನ್ ಮಾಡಿದ್ದಾರೆ. 

 
ಕೋರ್ಟ್‌ನಲ್ಲಿ ಶ್ವೇತಾ ಪಂಡಿತ್ ಇವಾನೋ ಪುಚ್ಚಿ ಜತೆಗೆ ರೆಜಿಸ್ಟರ್ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಳೆದ ತಿಂಗಳಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಸಾಬೀತಾಗಿದೆ. 

ಕಳೆದ ಒಂದು ತಿಂಗಳಿಂದ ಪ್ಯಾರಿಸ್‌ನಲ್ಲಿದ್ದ ಈ ಜೋಡಿ ಇದೀಗ ಮುಂಬೈಯಲ್ಲಿ ವಿವಾಹವಾಗಿದ್ದಾರೆ. ಇದೀಗ ಕಾನೂನಿನ ಅಡಿಯಲ್ಲಿ ವಿವಾಹವಾಗಿರುವುದಾಗಿ ಶ್ವೇತಾ ಪಂಜಿತ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. 
 
ಹಿಂದಿ, ಪಂಜಾಬ್, ತಮಿಳು ಹಾಗೂ ತೆಲಗು ಚಿತ್ರಗಳಲ್ಲಿ ಶ್ವೇತಾ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದರು. ಬಾಲಿವುಡ್‌ನ ಹೈವೆ, ಡೆವಿಡ್, ಜಂಜೀರ್, ಸರ್ದಾರ್ ಗಬ್ಬರ್ ಹಾಗೂ ಯಮಲಾ ಪಗಲ ದೀವನಾ, ವೆಲ್‌ಕಮ್ ಪಾರ್ಟ್‌ನರ್ ಹಲವು ಚಿತ್ರಗಳಲ್ಲಿ ಶ್ವೇತಾ ಹಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ಬಾರಿ ಹಣೆಗೆ ಸಿಂಧೂರ ಇಟ್ಟು ಕಾಣಿಸಿಕೊಂಡ ಖ್ಯಾತ ತಾರೆ ಕತ್ರೀನಾ