Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಳದಲ್ಲಿ ಕಹಾನಿ-2 ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡ ವಿದ್ಯಾ

ಪಶ್ಚಿಮ ಬಂಗಾಳದಲ್ಲಿ ಕಹಾನಿ-2 ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡ ವಿದ್ಯಾ
ಪಶ್ಚಿಮ ಬಂಗಾಳ , ಸೋಮವಾರ, 28 ಮಾರ್ಚ್ 2016 (18:16 IST)
ಈ ಹಿಂದೆ ಡರ್ಟಿ ಪಿಕ್ಛರ್‌ನಲ್ಲಿ ನಟಿಸಿದ್ದ ವಿದ್ಯಾ ಬಾಲನ್ ಬೋಲ್ಡ್‌ನೆಸ್ ಎಂತವರನ್ನಾದರೂ ಒಮ್ಮೆ ಕಾಡದೇ ಇರದು. ಸೀರೆ ಇಮೇಜ್‌ನಿಂದ ಹೊರಬಂದು 'ಡರ್ಟಿ' ಸಿನಿಮಾದಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದ ವಿದ್ಯಾ ಬಾಲನ್ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸದ್ಯ ವಿದ್ಯಾ ಬಾಲನ್ ಕಹಾನಿ-2 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಕಹಾನಿ-2 ಚಿತ್ರದ ಶೂಟಿಂಗ್ ಅನ್ನು ಪಶ್ಚಿಮ ಬಂಗಾಳದಲ್ಲಿಮುಗಿಸಿದ್ದಾರೆ ವಿದ್ಯಾ ಬಾಲನ್, ಕಹಾನಿ-2 ಚಿತ್ರದ ಶೂಟಿಂಗ್  ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎಂದು ಖುದ್ದು ವಿದ್ಯಾ ಬಾಲನ್ ಟ್ವಿಟ್ ಮಾಡಿದ್ದಾರೆ. 
 
ಪಶ್ಚಿಮ ಬಂಗಾಳದಲ್ಲಿ ಶೂಟಿಂಗ್ ವೇಳೆ ಆದ ಅನುಭವವನ್ನು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಗಿರಿಧಾಮದಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದೆಯಂತೆ. ಕಹಾನಿ- 2 ಚಿತ್ರದ ಮೊದಲ ದಿನದ ಶೂಟಿಂಗ್ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ ವಿದ್ಯಾ. ಇನ್ನೂ ಕಾಲಿಂಪಾಂಗ್ ಎಂಬಲ್ಲಿ ಶೂಟಿಂಗ್ ನಡೆಸಲಾಗಿದೆ. ಶೂಟಿಂಗ್ ವೇಳೆ ಕಾಲಿಂಪಾಂಗ್ ಮರಗಳನ್ನು ನೋಡಿ ಚಕಿತಳಾಗಿದ್ದೇನೆ ಎಂದು ಎಂದು  ಹೇಳಿದ್ದಾರೆ. 
 
ಕಹಾನಿ-2 ಚಿತ್ರ ಇದೊಂದು ಥ್ರಿಲ್ಲರ್ ಮೂವೀ ಅಂತ ಹೇಳಲಾಗ್ತಿದೆ. ಈ ಚಿತ್ರದಲ್ಲಿ ಗರ್ಭಿಣಿ ಮಹಿಳೆಯ ಕಥೆ ಒಳಗೊಂಡಿದೆ. ಮಹಿಳೆ ತನ್ನ ಪತಿ ಕಾಣೆಯಾಗಿರುವ ಕುರಿತು ಪತ್ತೆ ಮಾಡುವುದೇ ಸ್ಟೋರಿಯ ಹಿಂದಿರುವ ಕಥೆ. ಒಬ್ಬ ಗರ್ಭಿಣಿ ಮಹಿಳೆಯ ಕ್ಲಿಷ್ಟ ಪರಿಸ್ಥಿತಿ ಕುರಿತು ಚಿತ್ರದಲ್ಲಿ ಬಿಂಬಿಸಲಾಗಿದೆ.  
 
ಇನ್ನೂ ಚಿತ್ರವನ್ನು ಸಂಜಯ್ ಘೋಷ ನಿರ್ದೇಶನ ಮಾಡಿದ್ದಾರೆ..ಮೊದಲ ಬಾರಿಗೆ ಅರ್ಜುನ್ ರಾಮಪಾಲ್ ಹಾಗೂ ವಿದ್ಯಾ ಜೊತೆಯಾಗಿ ನಟಿಸುತ್ತಿರುವುದು ವಿಶೇಷ. ಲೀಡ್ ರೋಲ್‌ನಲ್ಲಿ ಇವರಿಬ್ಬರು ಕಾಣಿಸಿ ಕೊಳ್ಳಲಿದ್ದಾರೆ. ಹಾಗಾಗಿ ರಾಮಪಾಲ್ ಜತೆಗೆ ವಿದ್ಯಾ ಅಭಿನಯ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ನೋಡುವ ಅವಕಾಶ ದೊರಕಿದೆ.

Share this Story:

Follow Webdunia kannada