ವಿದ್ಯಾ ಬಾಲನ್ ಜೊತೆ ಅಸಭ್ಯ ವರ್ತನೆ ತೋರಿದ ಅಪರಿಚಿತ ವ್ಯಕ್ತಿ

Webdunia
ಶುಕ್ರವಾರ, 24 ಮಾರ್ಚ್ 2017 (08:26 IST)
ಸೆಲೆಬ್ರಿಟಿಗಳೆಂದರೆ ಹಾಗೆ.. ಅಭಿಮಾನಿಗಳು ಮುಗಿಬೀಳುತ್ತಾರೆ. ಕೆಲವೊಮ್ಮೆ ಅಭಿಮಾನಿಗಳ ನೆಪದಲ್ಲಿ ಉದ್ದೇಶಪೂರ್ವಕವಾಗಿಯೇ ಎಲ್ಲೆ ಮೀರಿ ವರ್ತಿಸುತ್ತಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್`ಗೂ ಇಂಥದ್ದೊಂದು ಕಹಿ ಅನುಭವವಾಗಿದೆ. ನಟಿಯ ಸಮೀಪಕ್ಕೆ ಬಂದ ವ್ಯಕ್ತಿ ಮೈಮುಟ್ಟಿ ಮುಜುಗರ ಹುಟ್ಟಿಸುವ ರೀತಿ ನಡೆದುಕೊಂಡಿದ್ಧಾನೆ. ಮನರಂಜನಾ ವೆಬ್ ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿದ್ಯಾ ಬಾಲನ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಸಿದ್ಧಿ ವಿನಾಯಕ ದೇಗುಲಕ್ಕೆ ತೆರಳಿದ್ದ ಸಂದರ್ಭ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿ ನನ್ನ ಭುಜವನ್ನ ಮುಟ್ಟಿದ ಕಣ್ತೆರೆದು ನೋಡಿದಾಗ.. ಮೇಡಂ ನನ್ನ ಹೆಂಡತಿಗೆ ಹಲೋ ಹೇಳಿ ಎಂದ.. ಒಂದು ನಿಮಿಷ ಕಾಯಿರಿ ಎಂದೆ. ಸ್ವಲ್ಪ ಸಮಯದ ಬಳಿ ಮತ್ತೆ ಭುಜ ತಟ್ಟಿ ಮೇಡಂ ಹಲೋ ಹೇಳಿ ಎಂದ.. ನನ್ನ ಕೋಪವನ್ನ ಅದುಮಿಟ್ಟುಕೊಂಡು ನಿನ್ನ ಹೆಂಡತಿಯ ಭುಜವನ್ನೂ ಹೀಗೆ ಒಬ್ಬ ಅಪರಿಚಿತನೊಬ್ಬ ಮುಟ್ಟಿದರೆ ನೀನು ಆರಾಮವಾಗಿರುತ್ತೀಯಾ ಎಂದು ಪ್ರಶ್ನಿಸಿದೆ ಎಂದು ಹೇಳಿದ್ದಾರೆ.

ಬೇಗಂ ಚಿತ್ರ ಪ್ರಚಾರಕ್ಕೆ ತೆರಳಿದ್ದ ವೇಳೆ ಕೋಲ್ಕತ್ತಾ ಏರ್`ಪೋರ್ಟ್`ನಲ್ಲಿ ಸೆಲ್ಫಿ ಪಡೆಯಲು ಬಂದ ವ್ಯಕ್ತಿಯೊಬ್ಬ ವಿದ್ಯಾ ಮೇಲೆ ತನ್ನ ತೊಳನ್ನ ಬಳಸಿ ಸೆಲ್ಫಿಗೆ ಯತ್ನಿಸಿದ್ದ. ಈ ಸಂದರ್ಭ ವಿದ್ಯು ಬಾಲನ್ ಕೈತಳ್ಳಿ ಸೆಲ್ಫಿ ಕ್ಲಿಕ್ಕಿಸಿದ್ದರು.

ತಮ್ಮ ಕಹಿ ಅನುಭವಗಳನ್ನ ಬಿಚ್ಚಿಟ್ಟಿರುವ ವಿದ್ಯಾ ಬಾಲನ್, ಅಭಿಮಾನಿಗಳು ಸಹ ಇತಿಮಿತಿಯಲ್ಲಿ ವರ್ತಿಸುವಂತೆ ಮನವಿ ಮಾಡಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಯಾರೋ ಒಬ್ಬರಿಂದ ಇಂಡಸ್ಟ್ರಿ ನಡೀತಿಲ್ಲ: ದರ್ಶನ್ ಗೆ ಟಾಂಗ್ ಕೊಟ್ಟ ಉಮಾಪತಿ ಗೌಡ

ನಾನು ಕಂಡಿದ್ದು ಮ್ಯಾಜಿಕ್‌ಗಿಂತ ಕಡಿಮೆಯಿರಲಿಲ್ಲ: ರಿಷಭ್ ಶೆಟ್ಟಿ ಕೊಂಡಾಡಿದ ರಿತೇಶ್ ದೇಶ್‌ಮುಖ್

ಮುಂದಿನ ಸುದ್ದಿ
Show comments