Select Your Language

Notifications

webdunia
webdunia
webdunia
webdunia

ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಕೆ ಕಂಡ 'ಉಡ್ತಾ ಪಂಜಾಬ್' ಚಿತ್ರ

ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಕೆ ಕಂಡ 'ಉಡ್ತಾ ಪಂಜಾಬ್' ಚಿತ್ರ
ಮುಂಬೈ , ಶುಕ್ರವಾರ, 24 ಜೂನ್ 2016 (17:25 IST)
ಅಭಿಷೇಕ್ ಚೌಧರಿ ನಿರ್ದೇಶನದ 'ಉಡ್ತಾ ಪಂಜಾಬ್' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ಗಳಿಕೆ ಕಾಣುವುದರ ಮೂಲಕ ಮುನ್ನುಗ್ಗುತ್ತಿದೆ. ಜೂನ್ 17ಕ್ಕೆ ರಿಲೀಸ್ ಆಗಿದ್ದ ಚಿತ್ರ ರಿಲೀಸ್ ಆಗಿತ್ತು. ಶಾಹಿದ್ ಕಪೂರ್, ಅನಿಲ್ ಕಪೂರ್, ಹಾಗೂ ಆಲಿಯಾ ಭಟ್ ಅಭಿನಯದ ಮೂಲಕ ಚಿತ್ರ ರಸಿಕರನ್ನುಮೋಡಿ ಮಾಡುವಲ್ಲಿ ಹಿಂದೆ ಬಿದ್ದಿಲ್ಲ.


ಚಿತ್ರವನ್ನು ಹೆಚ್ಚು ಪ್ರೇಕ್ಷಕರು ಹೆಚ್ಚು ಲೈಕ ಮಾಡುತ್ತಿದ್ದಾರೆ. ಓಪನಿಂಗ್ ವಿಕೆಂಡ್‌ನಲ್ಲಿ ಚಿತ್ರ 33.80 ಕೋಟಿ ಗಳಿಕೆ ಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಅತಿ ಹೆಚ್ಚು ಗಳಿಕೆ ಕಾಣುತ್ತಿದೆ.

ಇನ್ನೇನು ಉಡ್ತಾ ಪಂಜಾಬ್ ಸಿನಿಮಾ ರಿಲೀಸ್‌ಗೆ ಎರಡು ದಿನವಷ್ಟೇ ಬಾಕಿ ಇದೆ ಅನ್ನೋವಾಗ ಸಿನಿಮಾ ಆನ್ ಲೈನ್ ನಲ್ಲಿ ಸೋರಿಕೆಯಾಗಿತ್ತು. ಹಾಗಾಗಿ ಈ ಸಿನಿಮಾ ರಿಲೀಸ್ ಆದ ಮೇಲೆ ಬಾಕ್ಸಾಫೀಸ್‌ನಲ್ಲಿ ನಮಗೆ ಚೆನ್ನಾಗಿ ಹೊಡೆತ ಬೀಳುತ್ತೆ ಅಂತಾ ಸಿನಿಮಾ ತಂಡ ತಲೆ ಬಿಸಿಯಲ್ಲಿತ್ತು. 
 
ಅಭಿಮಾನಿಗಳು, ಜೊತೆಗೆ ಬಾಲಿವುಡ್ ಮಂದಿ ಕೂಡ ಈ ಬಾರಿ ಸಿನಿಮಾ ಸೋಲೋದು ಪಕ್ಕಾ ಅಂದುಕೊಂಡಿದ್ದರು.ಆದ್ರೆ ಬಿಡುಗಡೆಯಾದ ಮೊದಲ 5 ದಿನಗಳಲ್ಲೇ ಈ ಸಿನಿಮಾ ಬರೋಬ್ಬರಿ 42 ಕೋಟಿ ರೂಪಾಯಿ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ವಿದೇಶದಲ್ಲೂ  ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
 
ಇನ್ನು ಈ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ  ಮೊದಲ ವಾರದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಐದನೇ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ. ಉಡ್ತಾ ಪಂಜಾಬ್ ಸಿನಿಮಾ ಪಂಜಾಬ್ ನ ಜ್ರಗ್ಸ್ ಮಾಫಿಯಾದ ಕುರಿತಾದ ಸಿನಿಮಾವಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿಗೆ 11 ವರ್ಷ ಪೊರೈಸಿದ 'ಪಹೇಲಿ' ಚಿತ್ರ