Webdunia - Bharat's app for daily news and videos

Install App

ಮಣಿರತ್ನಂ ಚಿತ್ರದಲ್ಲಿ ತ್ರಿಷ ನಟನೆ.. ಜೈ ಇದರ ಹೀರೋ .. ಯಂಗ್ ಒಲ್ಡ್ ಗಳ ನಡುವೆ ತ್ರಿಷ!

Webdunia
ಶನಿವಾರ, 19 ಜುಲೈ 2014 (11:10 IST)
ತ್ರಿಷ ಕನ್ನಡದಲ್ಲಿ ಪವರ್ ಸ್ಟಾರ್ ಚಿತ್ರದಲ್ಲಿ ನಟಿಸಿ ಪುನೀತ್ ರಾಜ್ ಕುಮಾರ್ ಅವರ ಜೊತೆ  ಕನ್ನಡಿಗರ ಮನ ತಣಿಸಲು ಸಿದ್ಧ ಆಗಿದ್ದಾಳೆ. ಈಗ ಆಕೆ ತೆಲುಗಿನಲ್ಲಿ   ನಂದಮೂರಿ ಬಾಲಕೃಷ್ಣ ಅವರ ನಟನೆಯ ಗಾಡ್ಸ್ ಚಿತ್ರದಲ್ಲೂ ಸಹಿತ ನಟಿಸುತ್ತಿದ್ದಾಳೆ. ಅಲ್ಲದೆ ಈಗ ಬಂದಿರುವ ಸುದ್ದಿ ಪ್ರಕಾರ ದಕ್ಷಿಣ ಭಾರತದ ಪ್ರಸಿದ್ದ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಚಿತ್ರದಲ್ಲಿ ಅವಕಾಶ ಪಡೆದುಕೊಂಡಿದ್ದಾಳೆ!

ನಾಗಾರ್ಜುನ ಮತ್ತು ಮಹೇಶ್ ಅವರ ನ್ನು ಜೊತೆ ಮಾಡಿಕೊಂಡು ಸಿನಿಮಾ ನಿರ್ದೇಶಿಸುವ ಆಸೆ ಮಣಿರತ್ನಂ ಅವರಿಗೆ ಸಾಕಷ್ಟು ದಿನಗಳಿಂದ ಇದೆ. ಆದರೆ ಅದಕ್ಕೆ ಸಮಯ ಗಳಿಗೆ ಕೂಡಿ ಬಂದಿಲ್ಲ. ಮಣಿ ರತ್ನಂ ಕಾಲಿವುಡ್ ನ ಯಂಗ್ ಹೀರೋ ಜೈ ಅವರನ್ನು ಹಾಕಿಕೊಂಡು ಒಂದು ಲವ್ ಸ್ಟೋರಿ ಒಳಗೊಂಡ ಚಿತ್ರ ನಿರ್ದೇಶಿಸುವ ಆಶಯ ಹೊಂದಿದರು. ಆದರೆ ಇಲ್ಲಿ ಸಹ ಅವರಿಗೆ ಹೀರೋಯಿನ್  ಸಮಸ್ಯೆ ಕಾಡಿತು. ಈಗ ಆ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾಳೆ ಈ ಚೆಲುವೆ. ಜೈ ನಂತಹ ಹೊಸ ಹೀರೋ ಜೊತೆ ನಟಿಸುವ ಆಸಕ್ತಿ ಇಲ್ಲದೆ ಇದ್ದರು ಹಿರಿಯ ನಿರ್ದೇಶಕ ಮಣಿ ಅವರ ಮಾತಿಗೆ ಬೆಲೆ ಕೊಟ್ಟು ಆಕೆ ನಟಿಸಲು ಸಿದ್ಧತೆ ನಡಿಸಿದ್ದಾಳೆ. ಯುವ ಚಿತ್ರದಲ್ಲಿ ಮಣಿರತ್ನಂ ಈಕೆಗೆ ಅವಕಾಶ ನೀಡಿದ್ದರು. ಅದು ಸಾಕಷ್ಟು ಯಶಸ್ಸು ನೀಡಿತ್ತು. ಆ ಋಣ ಸಂದಾಯ ಮಾಡಲು ಈಗ ಹೊಸ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾಳಂತೆ!
 
ಈಗಾಗಲೇ ಮುವ್ವತ್ತರ ಹರೆಯದಲ್ಲಿ ಇರುವ ಈಕೆ ಯುವ ಹೀರೋಗಳ ಜೊತೆ ಮತ್ತು ಹಿರಿಯ ನಟರ ಜೊತೆ ನಟಿಸುತ್ತಾ ತನಗೆ ಇನ್ನು ಚಿತ್ರರಂಗದಲ್ಲಿ ಸಕತ್ ಬೇಡಿಕೆ ಇದೆ ಎನ್ನುವುದನ್ನು ಸಾಬೀತು ಮಾಡಲು ಹೊರಟಿದ್ದಾಳೆ. ಈ ಮುಖಾಂತರ ಹೆಚ್ಚು ಹೆಚ್ಚು ಮೀಡಿಯಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾಳೆ ಈ ಚೆಲುವೆ ..

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments