Select Your Language

Notifications

webdunia
webdunia
webdunia
webdunia

ಅಹ್ಮದ್ ಖಾನ್ ಮುಂದಿನ ಸಿನಿಮಾದಲ್ಲಿ ಟೈಗರ್ ಶ್ರಾಫ್ ಅಭಿನಯ

ಅಹ್ಮದ್ ಖಾನ್ ಮುಂದಿನ ಸಿನಿಮಾದಲ್ಲಿ ಟೈಗರ್ ಶ್ರಾಫ್ ಅಭಿನಯ
, ಶುಕ್ರವಾರ, 13 ನವೆಂಬರ್ 2015 (10:27 IST)
ಹೀರೋಪಂಥಿ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟವರು ಟೈಗರ್ ಶ್ರಾಫ್. ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ಟೈಗರ್‌ಗೆ  ಅನೇಕ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶಗಳು ಒಲಿದು ಬಂದವು. ಅನೇಕರು ಟೈಗರ್ ಅವರನ್ನು ನೋಡಿ ಅವರೂ ಕೂಡ ಅಪ್ಪ ಜಾಕಿಶ್ರಾಫ್ ಅವರಂತೆ ಬಾಲಿವುಡ್ ನ ಸ್ಟಾರ್ ಆಗಿ ಮಿಂಚುತ್ತಾರೆ ಅಂತಾ ಹೇಳಿದ್ದರು. ಇದೀಗ ಆ ಮಾತು ನಿಜವಾಗಿದೆ. 

ಟೈಗರ್ ಶ್ರಾಫ್ ಅವರಿಗೆ ಇದೀಗ ಅಹ್ಮದ್ ಖಾನ್ ಅವರ ಕಾಮಿಡಿ ಸಿನಿಮಾದಲ್ಲಿ ನಟಿಸಲು ಅವಕಾಶ ಒದಗಿ ಬಂದಿದೆ. ಸಾಜಿದ್ ನಾಡಿಯಾಲಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಟೈಗರ್ ಶ್ರಾಫ್ ಅವರು ಈಗಾಗಲೇ ಸಿನಿಮಾಗೆ ಸಹಿ ಮಾಡಿದ್ದಾರೆ.ಈಗಾಗಲೇ ಸಿನಿಮಾದ ಸ್ಕ್ರಿಫ್ಟ್ ಕೆಲಸ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಅಂದ್ಹಾಗೆ ಈ ಸಿನಿಮಾ 1997ರಲ್ಲಿ ಈ ತೆರೆ ಕಂಡ ಸಲ್ಮಾನ್ ಖಾನ್ ಜುದ್ವಾ ಸಿನಿಮಾದ ಸೀಕ್ವೆಲ್ ಅಂತೆ. 
 
 ಸಿನಿಮಾಕ್ಕೆ ಟೈಗರ್ ಶ್ರಾಫ್ ಅವರು ನಾಯಕನಾಗಿ ಆಯ್ಕೆಯಾಗಿದ್ರೂ ಇದುವರೆಗೂ ಸಿನಿಮಾಗೆ ನಾಯಕಿ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ನಿರ್ದೇಶಕ ಅಹ್ಮದ್ ಖಾನ್ ಸಿನಿಮಾದ ಶೂಟಿಂಗ್ ಮುಂದಿನ ವರ್ಷ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.ಇದಲ್ಲದೇ ಟೈಗರ್ ಏಕ್ತಾ ಕಪೂರ್ ಅವರ ದಿ ಪ್ಲೈಯಿಂಗ್ ಜಟ್ ಹಾಗೂ ಸಾಜೀದ ನಾಡಿಯಾವಾಲ ಅವರ ಭಾಗೀ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.

Share this Story:

Follow Webdunia kannada