Select Your Language

Notifications

webdunia
webdunia
webdunia
webdunia

ಹುಲಿ ಸಂರಕ್ಷಣೆಗಾಗಿ ಸರ್ಕಾರಕ್ಕೆ ಪತ್ರ ಬರೆದ ಟೈಗರ್ ಶ್ರಾಫ್

ಹುಲಿ ಸಂರಕ್ಷಣೆಗಾಗಿ ಸರ್ಕಾರಕ್ಕೆ ಪತ್ರ ಬರೆದ ಟೈಗರ್ ಶ್ರಾಫ್
ಮುಂಬೈ , ಶನಿವಾರ, 30 ಜುಲೈ 2016 (09:23 IST)
ಬಾಲಿವುಡ್ ಅನೇಕ ತಾರೆಯರು ಕೇವಲ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ  ನಾವು ಹೀರೋಗಳೇ ಅನ್ನೋದನ್ನು ಅನೇಕ ಬಾರಿ ತೋರಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ಆಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಮುಂತಾದವರು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಅದೇ ಸರದಿ ಟೈಗರ್ ಶ್ರಾಫ್.


 ತನ್ನ ಹೆಸರಲ್ಲೇ ಟೈಗರ್ ಅಂತಿರುವ ಟೈಗರ್ ಶ್ರಾಫ್ ಅವರಿಗೆ ಹುಲಿಗಳು ಅಂದ್ರೆ ತುಂಬಾನೇ ಇಷ್ಟವಂತೆ. ಹಿಂದಿನಿಂದಲೂ ಹುಲಿಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ. ಆದ್ರೆ ದೇಶದಲ್ಲಿ ಹುಲಿಗಳು ಸದ್ಯ ವಿನಾಶದ ಅಂಚಿನಲ್ಲಿವೆ. ಹಾಗಾಗಿ ಇಂತಹ ಹುಲಿಗಳ ಪರವಾಗಿ ಧ್ವನಿಯೆತ್ತಿದ್ದಾರೆ ಟೈಗರ್.

ನಿನ್ನೆ ಅಂತರರಾಷ್ಟ್ರೀಯ ಹುಲಿಗಳ ದಿನದ ಬಗ್ಗೆ ಮಾತನಾಡಿದ ಟೈಗರ್ ತಾನು ಹುಲಿಗಳ ಸಂರಕ್ಷಣೆಗಾಗಿ ಧ್ವನಿಯೆತ್ತಿದ್ದಾರೆ.ಅಲ್ಲದೇ ಕೇಂದ್ಪ ಪರಿಸರ ಸಂರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದಾರೆ.ಹುಲಿಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅಂತಾ ಮನವಿ ಮಾಡಿದ್ದಾರೆ.

ಇನ್ನು ಟೈಗರ್ ಶ್ರಾಫ್ ಅವರು ಹುಲಿಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಅವರು ಹುಲಿಗಳ ಸಂರಕ್ಷಣೆಗಾಗಿ ಶ್ರಮಿಸಿದ್ದಾರೆ. ಇನ್ನು ಝೂ ನಲ್ಲಿರುವ ಹೆಣ್ಣು ಹುಲಿಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ ಟೈಗರ್ ಶ್ರಾಫ್. ಇದೀಗ ಅವರು ಮತ್ತೆ ಪ್ರಾಣಿ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿರೋದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ತೀರ್ಪಿನ ವಿರುದ್ಧ ಧ್ವನಿಯೆತ್ತಲಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್‌ಗಳು