ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಮಿಂಚಿದ್ದ ನಿತಿನ್‌ ಚೌಹಾಣ್ ಸಾವಿಗೆ ಈ ಅಂಶವೇ ಕಾರಣವಾಯಿತಾ

Sampriya
ಶನಿವಾರ, 9 ನವೆಂಬರ್ 2024 (16:55 IST)
ಬೆಂಗಳೂರು: ಗುರುವಾರ ಮುಂಬೈನಲ್ಲಿ ಆತ್ಮಹತ್ಯೆ ಶರಣಾದ ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ಕಿರುತೆರೆ ನಟ ನಿತಿನ್ ಚೌಹಾಣ್ ಅವರು ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಟ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಒಂದು ಸಮಯದಲ್ಲಿ ಹಿಂದಿ ಕಿರುತೆರೆಯಲ್ಲಿ ಮಿಂಚಿದ್ದ ನಿತಿನ್‌ಗೆ ಕಾಲಕ್ರಮೇಣ ಅವಕಾಶಗಳು ಕಡಿಮೆಯಾಗಿತ್ತು. ಇದರಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಅದಲ್ಲದೆ ಸರಿಯಾದ ಕೆಲಸ ಮತ್ತು ಸಂಭಾವಣೆ ಸಿಗುತ್ತಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

ಇನ್ನೂ ಮಾನಸಿಕ ಖಿನ್ನತೆಗಾಗಿ ಈಚೆಗೆ ಚಿಕಿತ್ಸೆಯನ್ನು ಕೂಡಾ ಪಡೆಯುತ್ತಿದ್ದರು.  ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸಮತೋಲಗೊಳಿಸುವಲ್ಲಿ ಹೆಣಗುತ್ತಿದ್ದರು ಎಂದೂ ಹೇಳಿದ್ದಾರೆ.

ಅದಾಗ್ಯೂ ಪೊಲೀಸರು ಈ ಪ್ರಕರಣವನ್ನು ಕೌಟುಂಬಿಕ, ಹಣಕಾಸಿನ ವ್ಯವಹಾರದ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 35ವರ್ಷದ ನಿತಿನ್ ಆತ್ಮಹತ್ಯೆ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿತ್ತು. ಅವರ ನಿಧನಕ್ಕೆ ಹಿಂದಿ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿದಿದ್ದಾರೆ.

ಉತ್ತರ ಪ್ರದೇಶ ಆಲಿಘಡ ಮೂಲದ ನಿತಿನ್, ಹಿಂದಿಯ ದಾದಾಗಿರಿ–2 ರಿಯಾಲಿಟಿ ಶೋ ವಿಜೇತರಾಗಿದ್ದರು. ಇದಲ್ಲದೇ ಅನೇಕ ರಿಯಾಲಿಟಿ ಶೋ, ಹಿಂದಿ ಧಾರಾವಾಹಿಗಳ ಮೂಲಕ ಅವರು ಕಿರುತೆರೆಯಲ್ಲಿ ಮಿಂಚಿದ್ದರು<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆ ಕ್ಷಣದಲ್ಲಿ ರಾಜು ತಾಳಿಕೋಟೆ ಕೇಳಿಕೊಂಡಿದ್ದು ಇದೇ ಮಾತು: ಕೇಳಿದ್ರೆ ಕಣ್ಣೀರೇ ಬರುತ್ತೆ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದವರು ಯಾರು ಕೇಳಿದ್ರೆ ಶಾಕ್ ಆಗ್ತೀರಿ

Video: ಪಂಚೆ ಕಟ್ಟೋದು ಹೇಗೆ ಹೇಳ್ಕೊಡು: ರಿಷಬ್ ಶೆಟ್ಟಿಗೆ ಬೇಡಿಕೆಯಿಟ್ಟ ಅಮಿತಾಭ್ ಬಚ್ಚನ್

ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 2 ಬರುತ್ತಾ ಅಂದರೆ ಹೀಗೆ ಹೇಳೋದಾ

ರಾಜು ತಾಳಿಕೋಟೆಯನ್ನು ಉಳಿಸಲಾಗಲೇ ಇಲ್ಲ, ಕೊನೆ ಕ್ಷಣ ಏನಾಗಿತ್ತೆಂದು ರಿವೀಲ್ ಮಾಡಿದ ಶೈನ್ ಶೆಟ್ಟಿ

ಮುಂದಿನ ಸುದ್ದಿ
Show comments