Select Your Language

Notifications

webdunia
webdunia
webdunia
webdunia

ಆಮೀರ್ ಖಾನ್‌ಗೆ ನಿದ್ದೆ ಮಾಡಲು ಬಿಡದ ಸಲ್ಮಾನ್ ಖಾನ್-ಶಾರುಖ್ ಖಾನ್

ಆಮೀರ್ ಖಾನ್‌ಗೆ  ನಿದ್ದೆ ಮಾಡಲು ಬಿಡದ ಸಲ್ಮಾನ್ ಖಾನ್-ಶಾರುಖ್ ಖಾನ್
, ಶುಕ್ರವಾರ, 21 ನವೆಂಬರ್ 2014 (10:05 IST)
ಸಲ್ಮಾನ್ ಖಾನ್ ಅವರ ತಂಗಿ ಮದುವೆ ಇತ್ತೀಚಿಗೆ ಹೈದರಾಬಾದ್ ನಲ್ಲಿ ಬಹಳ ವಿಜೃಂಭಣೆಯಿಂದ  ನಡೆಯಿತು. ಆ ಕಾರ್ಯಕ್ರಮಕ್ಕೆ ಬಾಲಿವುಡ್ ಅನೇಕಾನೇಕ ಪ್ರಸಿದ್ಧರು ಭಾಗವಹಿಸಿದ್ದರು. ಆಮೀರ್ ಖಾನ್ ಸಹ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರ್ಪಿತಾ ಖಾನ್ ಮದುವೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಇಡಿ ರಾತ್ರಿ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರು ಆಮೀರ್ ಖಾನ್ ಅವರಿಗೆ ನಿದ್ರೆ ಮಾಡಲು ಬಿಡಲೇ ಇಲ್ಲವಂತೆ. 

ಆ ನಟರಿಬ್ಬರು ಒಂದೆಡೆ ಸೇರಿದ್ದರಾ ಎನ್ನುವ ಪ್ರಶ್ನೆಗೆ ಹೌದು ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಈ ರಾತ್ರಿಯಲ್ಲ ನಿದ್ರೆ ಮಾಡಲು ಬಿಡಲೇ ಇಲ್ಲ. ಅರ್ಧರಾತ್ರಿ ಒಂದೂವರೆಗೆ ಒಂದು ಬಾರಿ ನನ್ನ ಸೆಲ್‌ಗೆ ಕಾಲ್ ಮಾಡಿದರು. ಅದನ್ನು ನನಗೆ ಹೇಳಿದರು. ಅದಾದ ಬಳಿಕ ಮತ್ತೆ ಅವರು ಎರಡೂವರೆಗೂ ಮತ್ತೊಂದು ಕಾಲ್ ಮಾಡಿದರು. ಅಲ್ಲಿಂದ ರಾತ್ರಿ ಇಡೀ ಮಾತಾಡಿದ್ದೇ ಮಾತಾಡಿದ್ದು. ಹಾಗೆ ಆಡುತ್ತ ಆಡುತ್ತಾ ಬೆಳಕಾಯಿತು ಮಲಗಲು ಅವರಿಬ್ಬರೂ ಬಿಡಲೇ  ಇಲ್ಲ ಎಂದು ಹೇಳಿದ್ದಾರೆ. ಸಂಭ್ರಮದ ಸಮಯದಲ್ಲಿ ಎಲ್ಲವು ಸಂಭ್ರಮವೇ ! 

Share this Story:

Follow Webdunia kannada