Webdunia - Bharat's app for daily news and videos

Install App

ಐಶ್ವರ್ಯ-ಸಲ್ಮಾನ್ ಮಧ್ಯೆ ಕನೆಕ್ಷನ್.. ಸಲ್ಮಾನ್ ತಂದೆ ಅವರನ್ನ ಭೇಟಿ ಆಗಿದ್ರಾ ಐಶ್ವರ್ಯ!

Webdunia
ಮಂಗಳವಾರ, 23 ಆಗಸ್ಟ್ 2016 (09:38 IST)
ಐಶ್ವರ್ಯ ರೈ ಬಚ್ಚನ್ ಸಲ್ಮಾನ್ ಖಾನ್ ಲೈಫ್‌ಯಿಂದ ದೂರ ಹೋದರು, ಆದ್ರೆ ಇದೀಗ ಹೊಸದಾಗಿ ಸಲ್ಮಾನ್ ಹಾಗೂ ಐಶ್ವರ್ಯ ಮಧ್ಯೆ ಕನೆಕ್ಷನ್ ಕೇಳಿ ಬಂದಿದೆ. ಅಷ್ಟಕ್ಕೂ ಐಶ್ವರ್ಯ ಹಾಗೂ ಸಲ್ಮಾನ್ ಮಧ್ಯದ ಕನೆಕ್ಷನ್ ಏನು. ಈ ಕುರಿತು ವರದಿ

 
ಬಿಗ್ ಬಾಸ್ ಸ್ಪರ್ಧಿಯಾಗಿರುವ ನಟ ಇಜಾಜ್ ಖಾನ್ ನಿಮಗೆ ಗೊತ್ತಿರಬಹುದು.. ಇದೀಗ ಇಜಾಜ್ ಖಾನ್ ಸುದ್ದಿಯಲ್ಲಿದ್ದಾರೆ. ಮಾಡೆಲ್‌ಗೆ ಅಶ್ಲೀಲ ಮೆಸೇಜ್ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

 ಆರೋಪ ಮಾಡಿರುವ ಹುಡುಗಿ ಐಶ್ವರ್ಯ ಚೌಬೆ ಅಂತ.. ಈಕೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದವಳು. ಐಶ್ವರ್ಯ ಚೌಬೆ ಅವರನ್ನು ಧಮಕಿ ಹಾಕಿರುವ ಇಜಾಜ್ ಖಾನ್, ಈಕೆಯ ಬಗ್ಗೆ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ಚೌಬೆ ಮಧ್ಯದ ಬಗ್ಗೆ ಬಿಚ್ಚಿಟ್ಟಿದ್ದಾರೆ. 
 
ಈ ಬಗ್ಗೆ ನಾನು ನಿರ್ದೋಷಿ ಎಂದಿರುವ ಇಜಾಜ್ ಖಾನ್, ಐಶ್ವರ್ಯರನ್ನು ನಾನು ಒಂದೇ ಸಲ ಭೇಟಿ ಮಾಡಿದ್ದೆ. ನನಗೆ ನಿಜಕ್ಕು ಇದರಿಂದ ದುಃಖವಾಗಿದೆ. ಇವಳ ಜತೆಗೆ ನಾನು ಏನೆನು ಮಾಡಿಲ್ಲ. ಅಪರಿಚಿತರ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇ ತಪ್ಪಾಯ್ತು. ಇದೀಗ ನನಗೆ ಈ ಸಮಸ್ಯೆ ಎದುರಾಗಿದೆ ಎಂದು ಇಜಾಜ್ ಖಾನ್ ಹೇಳಿದ್ದಾರೆ.
 
ಇನ್ನೂ ಇಜಾಜ್ ಹೇಳೋ ಪ್ರಕಾರ, ಐಶ್ವರ್ಯ ಚೌಬೆ ಸಲ್ಮಾನ್ ಖಾನ್ ಕುರಿತಂತೆ ಯೂ ಟೂಬ್‌ಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಳು. ಸಲ್ಮಾನ್ ಅವರ ಜತೆಗೆ ಹೊಸ ಐಶ್ವರ್ಯ ಆಗಿ ಇರುವುದಾಗಿ ಹೇಳಿದ್ದಳು. ಅಲ್ಲದೇ ಮುಂಬರುವ ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆಗೆ ನಟಿಸಲಿದ್ದೇನೆ ಎಂದು ಸಹ ಹೇಳಿದ್ದಳು. ಇಜಾಜ್ ಹೇಳುವಂತೆ ಐಶ್ವರ್ಯ ಚೌಬೆ ಸಲ್ಮಾನ್ ಖಾನ್ ತಂದೆ ಸಲೀಂ ಅವರನ್ನು ಭೇಟಿಯಾಗುತ್ತೇನೆ ಎಂದು ಸಹ ಹೇಳಿದ್ದಳಂತೆ. ಸಲ್ಮಾನ್ ಖಾನ್ ಹೆಸರನ್ನು ಆಕೆ ಬಳಕೆ ಮಾಡುತ್ತಿದ್ದಾರೆ ಎಂದು ಇಜಾಜ್ ಖಾನ್ ತಿಳಿಸಿದ್ದರು.
 
ಇನ್ನೂ ಇಜಾಜ್ ಖಾನ್ ವಿರುದ್ಧ  ಪೊಲೀಸ್ ಠಾಣೆಯಲ್ಲಿ ಮಾಡೆಲ್ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಬಳಿಕವೇ ಸತ್ಯಾಂಶ ಹೊರ ಬರಲಿದೆ. ಆದ್ರೆ ಸಲ್ಮಾನ್ ಹೆಸರಿನ ಜತೆಗೆ ಐಶ್ವರ್ಯಎಂಬ ಮಾಡೆಲ್ ಹೆಸರು ಕೇಳಿ ಬಂದಿರುವುದಕ್ಕೆ. ಸಲ್ಮಾನ್ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments