Select Your Language

Notifications

webdunia
webdunia
webdunia
webdunia

ಆಗ ರಜನಿ ರೋಬೋ ... ಈಗ ವಿಜಯ್ ರೋಬೋ ?

ಆಗ ರಜನಿ ರೋಬೋ ... ಈಗ ವಿಜಯ್ ರೋಬೋ ?
, ಸೋಮವಾರ, 10 ನವೆಂಬರ್ 2014 (14:58 IST)
ಕಾಲಿವುಡ್ ಚಿತ್ರರಂಗದ ಸ್ಟಾರ್ ದಂಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿರುವ ಸ್ಟಾರ್ ಹೀರೋಗಳು ತಮ್ಮ ಎಲ್ಲ ಗಮನ ಅದರತ್ತ ಕೇಂದ್ರೀಕರಿಸಿದ್ದಾರೆ. ವಿಜಯ್, ಅಜಿತ್, ಸೂರ್ಯ, ಧನುಷ್ರಂತಹ ಹೀರೋಗಳು ಇದಕ್ಕೆ ಹೊರತಲ್ಲ. ಇವರೆಲ್ಲರಲ್ಲಿ  ವಿಜಯ್ ಅವರ ರೀತಿನೇ ಭಿನ್ನ. ಸಾಮಾನ್ಯವಾಗಿ ಹೀರೋ ಪ್ರಧಾನ  ಚಿತ್ರಗಳಾಗಿದ್ದರು ಸಹಿತ ಹೀರೋಗೆ ಅಧಿಕ ಪ್ರಾಮುಖ್ಯತೆ ಇರುವುದು ಕಡಿಮೆ. ಆದರೆ ವಿಜಯ್ ವಿಷಯದಲ್ಲಿ ಹಾಗಲ್ಲ. ಅವರ ಪಾತ್ರಗಳ ಆಯ್ಕೆಯು, ಅವರಿಗೆ ಈವರೆಗೂ ದಕ್ಕಿರುವುದು ಎಲ್ಲವು ಹೀರೋಗೆ ಅಧಿಕ ಪ್ರಾಧಾನ್ಯತೆ ನೀಡುವಂತಹದ್ದಾಗಿದೆ . 

ಸಾಮಾನ್ಯವಾಗಿ ವಿಜಯ್ ಕಥೆ ಅಲ್ಲದೆ ಹೀರೋಗೆ ಹೆಚ್ಚು ಪ್ರಾಮುಖ್ಯತೆ ಇರುವ ಚಿತ್ರಗಳಲ್ಲಿ ನಟಿಸಲು ಇಷ್ಟ ಪಡುತ್ತಾರೆ. ಈಗ ರಜನಿಕಾಂತ್ ಅವರು ತೆಗೆದುಕೊಂಡಿರುವ ನಿರ್ಧಾರದಿಂದ ಅದು ವಿಜಯ್ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿದೆ ಎಂದೇ ಹೇಳ ಬಹುದಾಗಿದೆ. ರಜನಿ ಕಾಂತ್ ಅವರ ನಟನೆಯ ರೋಬೋ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿದ್ದಲ್ಲದೆ , ಸಿಕ್ಕಾಪಟ್ಟೆ ದಾಖಲೆಗಳನ್ನು ಸಹಿತ ಸಾಧಿಸಿದೆ ಎಂದೇ ಹೇಳ ಬಹುದು.
 
ಅಂದಿನಿಂದ  ಈ ಚಿತ್ರದ ಮುಂದುವರೆದ ಭಾಗ ನಿರ್ಮಿಸಲು ರಿಲಯನ್ಸ್ ಎಂಟರ್ಟೈನ್ಮೆಂಟ್ ಪ್ರಯತ್ನ ಮಾಡುತ್ತಲೇ ಇದೆ. ತಮ್ಮ ಆರೋಗ್ಯ ಆ ರೀತಿ ನಟಿಸಲು ಸಹಕಾರಿಯಾಗಿಲ್ಲ ಎಂದು ರಜನಿ ಬಂದ ಅವಕಾಶ ತಿರಸ್ಕರಿಸಿದ್ದಾರೆ. ಅದರಲ್ಲಿ ನಟಿಸಲು ವಿಜಯ್ ಆಸಕ್ತಿ ತೋರುತ್ತಿದ್ದಾರೆ. ಎಲ್ಲವು ನಿರೀಕ್ಷಿಸಿದಂತಾರೆ  ವಿಜಯ್ ಮತ್ತೊಬ್ಬ ರೋಬೋ ಆಗಿ ಜನರನ್ನು ರಂಜಿಸಿ ತಮ್ಮ ತಾರ ಬದುಕನ್ನು   ಉಜ್ವಲ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. 

Share this Story:

Follow Webdunia kannada