Select Your Language

Notifications

webdunia
webdunia
webdunia
webdunia

ಬಿಗ್ ಬಾಸ್‌ ಮನೆಗೆ ಬರ್ತಾರಾ ಟೀಂ ಇಂಡಿಯಾ ಕ್ರಿಕೆಟಿಗ?

ಬಿಗ್ ಬಾಸ್‌ ಮನೆಗೆ ಬರ್ತಾರಾ ಟೀಂ ಇಂಡಿಯಾ ಕ್ರಿಕೆಟಿಗ?
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (11:18 IST)
ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ ಆರಂಭವಾಗುತ್ತಿರುವುದು ನಿಮಗೆಲ್ಲಾ ಗೊತ್ತು.  ಕನ್ನಡದ ಬಿಗ್ ಬಾಸ್‌ಗೆ ಇಂಡಿಯಾ ಕ್ರಿಕೆಟಿಗ ಬರ್ತಾರೆ ಎಂಬುದುರ ಕುರಿತು ಕೇಳಿ ಬರುತ್ತಿದೆ. ಅಕ್ಟೋಬರ್ 9ರಿಂದ ಕಲರ್ಸ್ ಕನ್ನಡದಲ್ಲಿ ಶೋ ಮೂಡಿ ಬರುತ್ತಿದೆ. ವಿಶೇಷವೆಂದರೆ ಕನ್ನಡದ ಬಿಗ್ ಬಾಸ್‌ಗೆ ಭಾರತೀಯ ಕ್ರಿಕೆಟಿಗ ಎಂಟ್ರಿ ನೀಡ್ತಾರೆ ಎನ್ನುವ ಸುದ್ದಿ ಹರಡಿದೆ. 

ಬಿಗ್ ಬಾಸ್‌ನಲ್ಲಿ ಹಲವರ ಹೆಸರು ಹರಿದಾಡುತ್ತಿವೆ. ನಟಿ ಸುಧಾರಾಣಿ, ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ, ರಾಗಿಣಿ ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ ಅಧಿಕೃತವಾಗಿ ಈ ಬಗ್ಗೆ ಬಹಿರಂಗವಾಗಿಲ್ಲ. ಆದ್ರೆ ಸದ್ಯ ಕೇಳಿ ಬರುತ್ತಿರುವುದು ಅದು ಖ್ಯಾತ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರರೊಬ್ಬರ ಹೆಸರು. 
 
ಅವರೇ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಶ್ರೀಶಾಂತ್. ಶ್ರೀಶಾಂತ್ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಈ ಹಿಂದೆ ಗಣಿ ನಡೆಸಿಕೊಡುವ ಸೂಪರ್ ಮಿನಿಟ್ ಶೋನಲ್ಲೂ ಶ್ರೀಶಾಂತ್ ಕಾಣಿಸಿಕೊಂಡಿದ್ದರು. ಆದ್ರೆ ಫೈನಲ್ ಆಗಿ ಶ್ರೀಶಾಂತ್ ಬಿಗ್ ಬಾಸ್ ಮನೆಗೆ ಬರ್ತಾರಾ ಎಂಬುದನ್ನು ಕಾದು ನೋಡಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಸಂಜೆ ಮಹೇಶ್ ಮುಂದಿನ ಚಿತ್ರದಲ್ಲಿ ಯುವರಾಜ್