Select Your Language

Notifications

webdunia
webdunia
webdunia
webdunia

ಕತ್ರೀನಾ ಕೈಫ್ ಅವರು ಅಂದುಕೊಂಡಿದ್ದೆಲ್ಲಾ ನೆರವೇರಲಿ- ಟಬು

ಕತ್ರೀನಾ ಕೈಫ್ ಅವರು ಅಂದುಕೊಂಡಿದ್ದೆಲ್ಲಾ ನೆರವೇರಲಿ- ಟಬು
, ಶುಕ್ರವಾರ, 5 ಫೆಬ್ರವರಿ 2016 (13:30 IST)
ನಟಿ ಟಬು ಹಾಗೂ ಕತ್ರೀನಾ ಕೈಫ್ ಫಿತೂರ್ ಸಿನಿಮಾದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ.ಟಬು ಹಾಗೂ ಕತ್ರೀನಾ ಅವರು ಜೊತೆಯಾಗಿ ಅಭಿನಯಿಸಿರೋದರಿಂದ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಇದಕ್ಕೆ ಸಾಕ್ಷಿ ಟಬು ಕತ್ರೀನಾ ಅವರಿಗೆ ಶುಭ ಹಾರೈಸಿರೋದು.

ಕತ್ರೀನಾ ಅವರು ಜೀವನದಲ್ಲಿ ಏನೆಲ್ಲಾ ಅಂದುಕೊಂಡಿದ್ದಾರೋ ಅದೆಲ್ಲಾ ನೆರವೇರಲಿ ಅಂತಾ ಟಬು ಹಾರೈಸಿದ್ದಾರೆ.ನಾನು ಫಿತೂರ್ ಸಿನಿಮಾದಲ್ಲಿ ಕತ್ರೀನಾ ಅವರ ಜೊತೆ ಅಭಿನಯಿಸಿದ್ದೇನೆ. ನನಗೆ ಆಕೆ ಎಂದರೆ ತುಂಬಾ ಇಷ್ಟ.ನಾನು ಕೆಲಸ ಮಾಡಿರುವ ಅತ್ಯಂತ ಒಳ್ಳೆಯ ವ್ಯಕ್ತಿಗಳಲ್ಲಿ ಕ್ಯಾಟ್ ಕೂಡ ಒಬ್ಬರು.ನಾವು ಮೂರು ದಿನವೇ ಜೊತೆಯಾಗಿ ಕೆಲಸ ಮಾಡಿದ್ದೇವೆ. ಕೆಲವೇ ಕೆಲವು ಸೀನ್ ಗಳಲ್ಲಿ ಜೊತೆಯಾಗಿದ್ದೇವೆ.ಆದ್ರೆ ಅದರಲ್ಲಿ ನನಗೆ ಸಾಕಷ್ಟು ನೆನಪುಗಳಿವೆ ಅಂತಾ ಟಬು ಹೇಳಿದ್ದಾರೆ.
 
ನಾನು ಯಾವಾಗಲೂ ಆಕೆ ಅಂದುಕೊಂಡಿದ್ದೆಲ್ಲಾ ಆಕೆಗೆ ಸಿಗಲಿ ಅಂತಾ ಹಾರೈಸುತ್ತೇನೆ. ನನ್ನ ಪ್ರಕಾರ ಆಕೆ ಅತ್ಯಂತ ಕಷ್ಟಪಡುವ ನಟಿ. ಅಭಿನಯದಲ್ಲಿ ಆಕೆ ತುಂಬಾನೇ ತಲ್ಲೀನರಾಗುತ್ತಾರೆ. ಕೆಲಸಕ್ಕೆ ತುಂಬಾ ಗೌರವ ಕೊಡುತ್ತಾರೆ.ಅವರಿಗೆ ಬಾಲಿವುಡ್ ನಲ್ಲಿ ಉತ್ತಮ ಯಶಸ್ಸು ಸಿಗಲಿ ಅಂತಾ ನಾನು ಸದಾ ಹಾರೈಸುತ್ತೇನೆ ಅಂತಾ ಟಬು ಹೇಳಿದ್ದಾರೆ.
 

Share this Story:

Follow Webdunia kannada