Select Your Language

Notifications

webdunia
webdunia
webdunia
webdunia

ಅಪರಿಚಿತರ ಮದುವೆಯಲ್ಲಿ ನಟಿ ತಾಪ್ಸಿ ರಾಧ್ದಾಂತ

ಅಪರಿಚಿತರ ಮದುವೆಯಲ್ಲಿ ನಟಿ ತಾಪ್ಸಿ ರಾಧ್ದಾಂತ
Mumbai , ಸೋಮವಾರ, 23 ಜನವರಿ 2017 (12:36 IST)
ನಟಿ ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ಊಹೆಗೂ ಮೀರಿ ಯಶಸ್ವಿಯಾದ ಚಿತ್ರ ’ಪಿಂಕ್’. ಹಾಗಾಗಿ ಈಗ ಬಾಲಿವುಡ್ ಚಿತ್ರಗಳ ಮೇಲೆ ಎಲ್ಲಿಲ್ಲದ ಉತ್ಸಾಹ ತೋರುತ್ತಿದ್ದಾರೆ ತಾಪ್ಸಿ. ಸದ್ಯಕ್ಕೆ ಮೂರು ಸಿನೆಮಾಗಳು ಆಕೆಯ ಖಾತೆಗೆ ಜಮೆ ಆಗಿವೆ. 
 
ಅವುಗಳಲ್ಲಿ ’ರನ್ನಿಂಗ್ ಷಾದಿ ಡಾಟ್ ಕಾಮ್’ ಎಂಬ ಚಿತ್ರವೂ ಒಂದು. ಶೀಘ್ರದಲ್ಲೇ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ತಾಪ್ಸಿ. ಈ ಸಿನಿಮಾಗೆ ಪ್ರಚಾರ ಮಾಡುವ ಜವಾಬ್ದಾರಿಯನ್ನೂ ತಾಪ್ಸಿ ಹೊತ್ತುಕೊಂಡಿದ್ದಾರಂತೆ. ಯಾರೂ ಊಹಿಸದಂತೆ ಸಿನೆಮಾ ಪ್ರಚಾರ ಮಾಡಿದ್ದಾರೆ.
 
ಹೋಡಿಹೋಗಿ ಮದುವೆ ಮಾಡಿಕೊಳ್ಳುವ ಜೋಡಿ ಸಹಾಯ ಮಾಡುವ ಕಾನ್ಸೆಪ್ಟ್‌ನೊಂದಿಗೆ ಈ ಸಿನಿಮಾ ಬರುತ್ತಿದೆ. ಪ್ರಚಾರದ ಭಾಗವಾಗಿ ಮದುವೆಯೊಂದಕ್ಕೆ ದಿಢೀರ್ ಭೇಟಿ ನೀಡಿದ ತಾಪ್ಸಿ ಮದುವೆ ಮನೆಯಲ್ಲಿ ನಾನ ರಾದ್ಧಾಂತ  ಮಾಡಿದ್ದಾರೆ.
 
ಮುಂಬೈನ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ಮದುವೆಗೆ ಇದ್ದಕ್ಕಿದ್ದಂತೆ ಸಾಂಪ್ರದಾಯಿಕ ಬಟ್ಟೆತೊಟ್ಟು ದಿಢೀರ್ ಎಂದು ಪ್ರತ್ಯಕ್ಷವಾಗಿದ್ದಾರೆ. ಅಲ್ಲಿ ನಾನಾ ಹಂಗಾಮ ಮಾಡಿ ಎಲ್ಲರ ಗಮನಸೆಳೆದಿದ್ದಾಳೆ. ಇದಿಷ್ಟೇ ಅಲ್ಲದೆ ಡಿಂಪಿ ಪೇ ನಾಲ್ ಭಾಗೆ ಬಂಟಿ ಎಂಬ ಹಾಡನ್ನೂ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆ ಈ ಭಿನ್ನವಾದ ಕಾನ್ಸೆಪ್ಟ್‌ಗೆ ಮದುವೆ ಮನೆಯವರು ದಂಗಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಕಾಳಹಸ್ತೀಶ್ವರ ದರ್ಶನ ಪಡೆದ ಚಿರಂಜೀವಿ