Webdunia - Bharat's app for daily news and videos

Install App

ಸಲ್ಲು ತಂಬಾಕು-ಮದ್ಯ ಪ್ರಚಾರ ಮಾಡುತ್ತಿಲ್ಲ, ಕ್ರೀಡೆಯನ್ನು ಪ್ರಚಾರ ಮಾಡುತ್ತಿದ್ದಾರೆ -ಸಲೀಂ ಖಾನ್ ಹೇಳಿಕೆ

Webdunia
ಗುರುವಾರ, 28 ಏಪ್ರಿಲ್ 2016 (15:17 IST)
ಸಲ್ಮಾನ್ ತಂಬಾಕು ಹಾಗೂ ಮದ್ಯವನ್ನು ಪ್ರಚಾರ ಮಾಡುತ್ತಿಲ್ಲ. ಕ್ರೀಡೆಯನ್ನ ಪ್ರಚಾರ ಮಾಡುತ್ತಿದ್ದಾರೆ ಎಂದು ಸಲ್ಮಾನ್ ಅಪ್ಪ ಸಲೀಂ ಹೇಳಿಕೆ ನೀಡಿದ್ದಾರೆ.


ಇದರ ಬೆನ್ನಲ್ಲೇ ಸಲ್ಮಾನ್ ತಂದೆ ಸಲೀಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.ಅಲ್ಲದೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಲೀಂ, ನಾನು ಸಲ್ಮಾನ್‌ಗೆ ಬೆಂಬಲ ನೀಡುತ್ತೇನೆ, ಯಾಕೆಂದ್ರೆ ಅವರು ರಿಯೊ ಒಲಿಂಪಿಕ್ಸ್‌ಗೆ ರಾಯಭಾರಿಯಾಗಿರುವುದು ಸಂತೋಷವಾಗಿದೆ. 
 
ಸಲ್ಮಾನ್ ತಂಬಾಕು ಹಾಗೂ ಮದ್ಯವನ್ನು ಪ್ರಚಾರ ಮಾಡುತ್ತಿಲ್ಲ. ಕ್ರೀಡೆಯನ್ನ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ ಸಲೀಂ ಖಾನ್.
 
ಆದರೆ ಸಲ್ಮಾನ್ ಖಾನ್ ಅಂಬಾಸಿಡರ್ ಆಗಿರುವುದರ ಕುರಿತು ಸಲ್ಮಾನ್ ‌ರನ್ನು ಕೈ ಬಿಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ.  ಅಗಸ್ಟ್ 5ರಿಂದ ಅಗಸ್ಟ್ 21ರವರೆಗೂ ರಿಯೊ ಒಲಿಂಪಿಕ್ಸ್ ಪಂದ್ಯಗಳು ನಡೆಯಲಿವೆ. ಬ್ರೆಜಿಲ್‌ನ ಅಧ್ಯಕ್ಷೆ ದಿಲ್ಮಾ ರೌಸೆಫ್‌ 2016ರ ರಿಯೊ ಒಲಿಂಪಿಕ್ಸ್‌ ಕ್ರೀಡಾ ಕೂಟದ ಜ್ಯೋತಿಗೆ ಚಾಲನೆ ನೀಡಿದ್ದರು.
 
ಈ ಜ್ಯೋತಿಯು ಬ್ರೆಜಿಲ್‌ನ ರಾಜಧಾನಿ ಬ್ರಸಿಲಿಯಾದಿಂದ ಹೊರಟು ಒಲಿಂಪಿಯಾ, ಗ್ರೀಸ್‌ ಒಳಗೊಂಡಂತೆ 300 ನಗರಗಳಲ್ಲಿ ಸಾಗಿ 2016ರ ಮೇ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ವಾಪಸಾಗಲಿದೆ. 
 
ಸುಲ್ತಾನ್ ಚಿತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರದಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ 'ಸುಲ್ತಾನ್' ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. ಈದ್ ಹಬ್ಬದಂದು ಚಿತ್ರ ರಿಲೀಸ್ ಆಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments