Select Your Language

Notifications

webdunia
webdunia
webdunia
webdunia

ಬ್ಯಾಂಗ್ ಬ್ಯಾಂಗ್ ನ ತು ಮೇರಿಗೆ ವರ್ಷದ ಬ್ಲಾಕ್ ಬಸ್ಟರ್ ಹಾಡಿನ ಪಟ್ಟಿಯಲ್ಲಿ ಮೊದಲ ಸ್ಥಾನ

ಬ್ಯಾಂಗ್ ಬ್ಯಾಂಗ್ ನ ತು ಮೇರಿಗೆ  ವರ್ಷದ  ಬ್ಲಾಕ್ ಬಸ್ಟರ್  ಹಾಡಿನ ಪಟ್ಟಿಯಲ್ಲಿ  ಮೊದಲ ಸ್ಥಾನ
, ಮಂಗಳವಾರ, 26 ಆಗಸ್ಟ್ 2014 (10:02 IST)
ತು ಮೇರಿ ಅನ್ನುವ ಆರಂಭ ಹೊಂದಿರುವ ಹಿಂದಿ ಚಿತ್ರದ  ಯಾವುದೇ ಹಾಡುಗಳು ಆಗಿರಲಿ ಅದು ಸೂಪರ್ ಡೂಪರ್ ಹಿಟ್ ಆಗಿವೆ. ಈಗ  ಹೃತಿಕ್   ರೋಶನ್ ಮತ್ತು ಕತ್ರಿನಾ ಕೈಫ್ ಅವರ ನಟನೆಯ  ತು ಮೇರಿ ಎನ್ನುವ ಹಾಡು ಸಹ ಸೂಪರ್ ಹಿಟ್ ಸ್ಥಾನ ಪಡೆದಿದೆ.  ಬ್ಯಾಂಗ್ ಬ್ಯಾಗ್ ಚಿತ್ರದ ಹಾಡನ್ನು ಈಗಾಗಲೇ 2  ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರಂತೆ.  

ಅನೇಕ  ಚಿತ್ರಗಳಲ್ಲಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದ ಹೃತಿಕ್ ಈಗ ಮತ್ತೊಮ್ಮೆ ಈ ಚಿತ್ರದಲ್ಲಿ ಕತ್ರಿನ ಜೊತೆ ಹೆಜ್ಜೆ ಹಾಕಿದ್ದಾರೆ. ಇದರಲ್ಲಿ ಕತ್ರಿನ ಗಾರ್ಜಿಯಸ್ ಆಗಿ ಕಂಡು ಬರುತ್ತಿದ್ದಾಳೆ .ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿದೆ. ಈ ಹಾಡಿನ ಮುಖಾಂತರ ಈ ಜೋಡಿ ಮತ್ತೊಮ್ಮೆ ಜನರಿಗೆ ಇಷ್ಟ ಆಗುವ ಪೇರ್ ಆಗಿದ್ದಾರೆ. 
ಈ ವರ್ಷದ ಬ್ಲಾಕ್  ಬಸ್ಟರ್ ಹಾಡಿನ  ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ.  
 
ಇದಕ್ಕೆ ವಿಶಾಲ್ ಶೇಖರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಬಾಸ್ಕೋ -ಸೀಸರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಫಾಕ್ಸ್ ಸ್ಟುಡಿಯೊಸ್ ನಿರ್ಮಿಸಿದ್ದಾರೆ. ಬ್ಯಾಂಗ್ ಯಂಗ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವೂ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. 

Share this Story:

Follow Webdunia kannada