ವಿಶ್ವವಿಡಿ ಐಸ್ ಬಕೆಟ್ ಚಾಲೆಂಜ್ ದ್ದೇ ಹೆಚ್ಚಿನ ಸುದ್ದಿ. ಎಎಲ್ಎಸ್ ಕಾಯಿಲೆಗೆ ಸಂಬಂಧಪಟ್ಟಂತೆ ನಡೆಸುತ್ತಿರುವ ಸಂಶೋಧನೆಗೆ ಹಣ ಸಹಾಯ ಮಾಡುವ ಕೆಲಸದಲ್ಲಿ ಸಿನಿ ಸ್ಟಾರ್ ಗಳು ಮುಂದೆ ಇದ್ದಾರೆ. ಬಕೆಟ್ ತುಂಬಾ ಮಂಜುಗಡ್ಡೆಯನ್ನು ಹಾಕಿಕೊಂಡು ಸ್ನಾನ ಮಾಡುವ ಕೆಲಸ ಅವರದ್ದು.
ಈ ಚಾಲೆಂಜ್ ನ್ನು ನಾವು ಮಾಡಲ್ಲ ಎಂದು ಆಲಿಯ ಮತ್ತು ಪ್ರಿಯಾಂಕ ಚೋಪ್ರ ನಿರಾಕರಿಸಿದ್ದಾರೆ, ಆದರೆ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಈ ಸಾಹಸಕ್ಕೆ ಸಿದ್ಧ ಆಗಿದ್ದಾಳೆ. ಆರೀತಿಯ ನಿರ್ಧಾರ ಹೊಂದಲು ಆಕೆಯ ಟ್ವಿಟ್ಟರ್ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಕಾರಣ ಆಗಿದ್ದಾರೆ. ಅವರ ಹೇಳಿದಂತೆ ಆಕೆ ನಾಮಿನೇಟ್ ಮಾಡಿದ್ದಾಳೆ. ಈ ಸ್ಪರ್ಧೆಯಲ್ಲಿ ಗಾಯಕ ಹನಿ ಸಿಂಗ್ ಸಹ ಭಾಗವಹಿಸಲು ಹೆಸರನ್ನು ನಾಮಿನೇಟ್ ಮಾಡಿದ್ದಾರೆ.
ಲಾ ಗೆರಿಗ್ಸ್ ಎನ್ನುವ ಕಾಯಿಲೆಯಿಂದ ತೊಂದರೆ ಎದುರಿಸುತ್ತಿರುವವರಿಗೆ ಸಹಾಯ ಮಾಡುವ ಸಲುವಾಗಿ ನಿಧಿ ಸಂಗ್ರಹಣೆಯ ಕಾರ್ಯ ಆರಂಭ ಆಗಿದ್ದು, ಅಮೇರಿಕಾದಲ್ಲಿ ಐಸ್ ಬಕೆಟ್ ಚಾಲೆಂಜ್ ಆರಂಭ ಆಗಿದೆ. ಈ ಚಾಲೆಂಜ್ ವಿಶ್ವದ ಪ್ರಸಿದ್ದರೆಲ್ಲರು ಸ್ವೀಕರಿಸಿದ್ದಾರೆ. ಇಷ್ಟುದಿನ ತನ್ನ ಬಿಚ್ಚು ಮೈ ಯಿಂದ ಪಡ್ಡೆ ಮತ್ತು ಆಕೆಯ ಹಿರಿಕಿರಿ ಫ್ಯಾನ್ಸ್ ಮೈ ಬಿಸಿ ಏರಿಸಿದ್ದ ಈ ಚೆಲುವೆ ಈಗ ಐಸ್ ವಾಟರ್ ಮೂಲಕವೂ ಸಹಿತ ಅಭಿಮಾನಿಗಳ ಮೈಬಿಸಿ ಮಾಡಲು ಸಿದ್ಧ ಆಗಿದ್ದಾಳೆ..