Select Your Language

Notifications

webdunia
webdunia
webdunia
webdunia

ಸುಲ್ತಾನ್ ಸಿನಿಮಾದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಗಳಿವೆ-ಆಮೀರ್ ಖಾನ್

ಸುಲ್ತಾನ್ ಸಿನಿಮಾದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಗಳಿವೆ-ಆಮೀರ್ ಖಾನ್
ಮುಂಬೈ , ಮಂಗಳವಾರ, 16 ಫೆಬ್ರವರಿ 2016 (20:23 IST)
ಸಲ್ಮಾನ್ ಖಾನ್ ಅವರ ಸಿನಿಮಾಗಳು ಯಾವಾಗಲೂ ತುಂಬಾ ಚೆನ್ನಾಗಿರುತ್ತವೆ. ಸುಲ್ತಾನ್ ಸಿನಿಮಾದ ಬಗ್ಗೆಯೂ ನನಗೆ ಸಾಕಷ್ಟು ನಿರೀಕ್ಷೆಗಳಿವೆ. ಹೀಗಂಥಾ ಭಜರಂಗಿ ಭಾಯಿಜಾನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರೋದು ಬೇರಾರು ಅಲ್ಲ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್.
 
ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಸುಲ್ತಾನ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಆಮೀರ್ ಖಾನ್ ಅಭಿನಯಿಸುತ್ತಿರುವ ದಂಗಾಲ್ ಸಿನಿಮಾದ ಶೂಟಿಂಗ್ ಕೂಡ ಅಂತಿಮ ಹ್ತಂತಕ್ಕೆ ತಲುಪಿದೆ. ಇಬ್ಬರ ಸಿನಿಮಾಗಳು ಕೂಡ ಕುಸ್ತಿಪಟುಗಳ ಕುರಿತಾದ ಸಿನಿಮಾ. ಆದ್ರೆ ಆಮೀರ್ ಖಾನ್ ಅವರು ಸಲ್ಮಾನ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ. 
 
ನನಗೆ ಸುಲ್ತಾನ್ ಸಿನಿಮಾ ಕೂಡ ಒಂದು ಒಳ್ಳೆ ಸಿನಿಮಾವಾಗುತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಸಲ್ಮಾನ್ ಖಾನ್ ಅವರು ಯಾವುದೇ ಸಿನಿಮಾವಾದ್ರೂ ಅದನ್ನು ಚೆನ್ನಾಗಿ ಮಾಡುತ್ತಾರೆ. ಹಾಗಾಗಿ ಈ ಸಿನಿಮಾ ಕೂಡ ಭರ್ಜರಿ ಯಶಸ್ಸು ಪಡೆಯುತ್ತೆ ಅನ್ನೋ ನಂಬಿಕೆ ನನಗಿದೆ ಅಂತಾ ಅವರು ಹೇಳಿದ್ದಾರೆ.
 
ಸುಲ್ತಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹರ್ಯಾಣದ ಕುಸ್ತಿಪಟು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಇನ್ನು ದಾಂಗಾಲ್ ಸಿನಿಮಾದಲ್ಲಿ ಆಮೀರ್ ಖಾನ್ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಲ್ತಾನ್ ಸಿನಿಮಾ ಈದ್ ಹಬ್ಬಕ್ಕೆ ಪ್ರೇಕ್ಷಕರೆದುರಿಗೆ ಬರಲಿದೆ. ಇನ್ನು ದಾಂಗಲ್ ಸಿನಿಮಾ ಕ್ರಿಸ್ ಮಸ್ ಹಬ್ಬಕ್ಕೆ ಪ್ರೇಕ್ಷಕರೆದುರಿಗೆ ಬರಲಿದೆ

Share this Story:

Follow Webdunia kannada