Webdunia - Bharat's app for daily news and videos

Install App

ಮತ್ತೊಂದು ದಾಖಲೆಯತ್ತ ಕಿಚ್ಚ ಸುದೀಪ್..

Webdunia
ಸೋಮವಾರ, 10 ನವೆಂಬರ್ 2014 (15:07 IST)
ಕಿಚ್ಚ ಸುದೀಪ್ ಸ್ಯಾಂಡಲ್ ವುಡ್‌ನ ಅಗ್ರಮಾನ್ಯ ಹೀರೋ. ಅವರು ಬಾಕ್ಸಾಫೀಸಲ್ಲಿ ಅನೇಕ ಗೆಲುವಿನ ಚಿತ್ರಗಳನ್ನು  ನೀಡಿದ್ದಾರೆ. ಬ್ಲಾಕ್ ಬಸ್ಟರ್ ಚಿತ್ರಗಳು ಸಹ ಅನೇಕ ದಾಖಲೆಗಳನ್ನು ನಿರ್ಮಿಸಿವೆ. ಇವೆಲ್ಲದ ನಡುವೆ ಕಿಚ್ಚ ಕನ್ನಡೇತರ ಚಿತ್ರಗಳಲ್ಲೂ ಸಹಿತ ನಟಿಸಿ ಸೈ ಎಂದು ಅನ್ನಿಸಿಕೊಂಡಿದ್ದಾರೆ. ಈಗ ಹೇಳುವ ಸಂಗತಿ ಏನೆಂದರೆ ಕನ್ನಡ ಮೊದಲ ಹೀರೋ ಸೋಶಿಯಲ್ ನೆಟ್ವರ್ಕ್ ಟ್ವಿಟ್ಟರ್ ನಲ್ಲಿ ತಮ್ಮ ಅಕೌಂಟ್ ತೆರೆದಿರುವುದು. ಈ ನಟನಿಗೆ ಅಪಾರ ಸಂಖ್ಯೆಯ ಫಾಲೋವರ್ ಗಳು ಇದ್ದಾರೆ ಇದರಲ್ಲಿ.

ತಾನು ಎಷ್ಟೇ ಬ್ಯುಸಿ ಇರಲಿ ತಪ್ಪದೆ ಕಿಚ್ಚ ಸೋಶಿಯಲ್ ನೆಟ್ ವರ್ಕ್ ಪೇಜ್ ನಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ತೋರುತ್ತಲೇ ಬಂದಿದ್ದಾರೆ. ಈ ಮುಖಾಂತರ ಅಭಿಮಾನಿಗಳು ಹಾಗೂ ತಮ್ಮ ನಡುವೆ ಒಂದು ಬಾಂಧವ್ಯ ಹೊಂದಿದ್ದಾರೆ ಈ ಹೀರೋ. ಈಗ ಅವರು ಇಲ್ಲೂ ಸಹಿತ ತಮ್ಮ ದಾಖಲೆ ನಿರ್ಮಿಸಿದ್ದಾರೆ. ಈಗ ಇಲ್ಲಿ ಎರಡು ಲಕ್ಷ ಫಾಲೋಯರ್ಸ್ ಇದ್ದು ಆ ಮುಖಾಂತರ ಕಿಚ್ಚ ಹೊಚ್ಚ ಹೊಸ ದಾಖಲೆ ಹೊಂದಿದ್ದಾರೆ. ಈ ಬಗ್ಗೆ ಕಿಚ್ಚ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 2 ಲಕ್ಷ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು. ಲವ್ ಯು ಆಲ್ವೇಸ್  ಎಂದು ತಮ್ಮ ಪ್ರೀತಿಯನ್ನು ಟ್ವೀಟಿಸಿ ವ್ಯಕ್ತ ಪಡಿಸಿದ್ದಾರೆ.
 
ರಮ್ಯಾಗೆ 2 .86  ಲಕ್ಷದಷ್ಟು  ಫಾಲೋಯರ್ಸ್ ಟ್ವಿಟ್ಟರ್ ಪೇಜ್ ನಲ್ಲಿ ಇದ್ದಾರೆ. ಆದರೆ ನಟನಾಗಿ ಅತಿಯಾದ ಅಭಿಮಾನಿಗಳನ್ನು ಕಿಚ್ಚ ಸುದೀಪ್ ಹೊಂದಿದ್ದಾರೆ. ಸಾಮಾನ್ಯವಾಗಿ ಕಿಚ್ಚ ಅಭಿಪ್ರಾಯಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅನೇಕ ವಿವಾದಗಳಿಗೆ ಕ್ಲಾರಿಫಿಕೇಶನ್ ಸಹ ನೀಡಿದ್ದಾರೆ.ಒಟ್ಟಾರೆ ಈಗ ಕಿಚ್ಚ ಕೇವಲ ಸಿನಿಮಾ , ಟೀವಿ ಮಾತ್ರವಲ್ಲ ಟ್ವಿಟ್ಟರ್  ಅನುಸರಿಸುವ ಅಭಿಮಾನಿಗಳಿಗೂ ಸಹಿತ ಹಾಟ್  ಫೇವರಿಟ್ ಆಗಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments