Select Your Language

Notifications

webdunia
webdunia
webdunia
webdunia

ಕರಣ್ ಜೋಹರ್ ಜೊತೆ ಸಿನಿಮಾ ಮಾಡ್ತಾರಾ ರಾಜಮೌಳಿ

ಕರಣ್ ಜೋಹರ್ ಜೊತೆ ಸಿನಿಮಾ  ಮಾಡ್ತಾರಾ ರಾಜಮೌಳಿ
, ಶನಿವಾರ, 6 ಫೆಬ್ರವರಿ 2016 (10:39 IST)
ಬಾಹುಬಲಿ ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ ನಿರ್ದೇಶಕ ರಾಜಮೌಳಿ ಅವರಿಗೆ ಬಾಲಿವುಡ್ ಹಾಲಿವುಡ್ ಗಳಿಂದ ಭರ್ಜರಿ ಆಫರ್ ಗಳು ಬರ್ತಿವೆ.ಆದ್ರೆ ರಾಜಮೌಳಿ ಅವರು ಮಾತ್ರ ಎಲ್ಲೂ ಓಕೆ ಅಂದಿಲ್ಲ.ಅದಕ್ಕೆ ಕಾರಣ ಅವರು ಸದ್ಯ ಬಾಹುಬಲಿ ಪಾರ್ಟ್ -2 ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ  ರಾಜಮೌಳಿ ಹಾಗೂ ಕರಣ್ ಸೇರಿ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಗುಲ್ಲೆದ್ದಿದೆ.

ಕರಣ್ ಜೋಹರ್ ಹಾಗೂ ರಾಜಮೌಳಿ ಸೇರಿ ಸಿನಿಮಾ ಒಂದನ್ನು ನಿರ್ಮಿಸಲು ತಯಾರಿ ಮಾಡುತ್ತಿದ್ದಾರೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕರಣ್ ಹಾಗೂ ರಾಜಮೌಳಿ ಅವರು ಈ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರೆ ಅಂತಾ ಹೇಳಲಾಗ್ತಿದೆ.ಆದ್ರೆ ಬಾಹುಬಲಿ ಪಾರ್ಟ್ -2  ಸಿನಿಮಾ ಮುಗಿಯೋವರೆಗೂ ರಾಜಮಾಳಿ ಬಾಲಿವುಡ್ ನಲ್ಲಿ ಸಿನಿಮಾ ಮಾಡೋ ಪ್ಲಾನ್ ನಲ್ಲಿ ಇಲ್ವಂತೆ. ಹಾಗಾಗಿ ಸದ್ಯಕ್ಕಂತೂ ಕರಣ್ ಹಾಗೂ ರಾಜಮೌಳಿ ಸಿನಿಮಾವನ್ನು ನೋಡೋ ಭಾಗ್ಯ ಅಭಿಮಾನಿಗಳಿಗಿಲ್ಲ.
 
ಇನ್ನು ಬಾಹುಬಲಿ ಪಾರ್ಟ್-2 ನಲ್ಲೂ ಈ ಹಿಂದೆ ಬಾಹುಬಲಿ ಮೊದಲ ಭಾಗದಲ್ಲಿ ಅಭಿನಯಿಸದ ಕಲಾವಿದರೇ ಅಭಿನಯಿಸಲಿದ್ದಾರಂತೆ. ಪ್ರಭಾಸ್ , ಅನುಷ್ಕಾ ಶೆಟ್ಟಿ, ರಾಣಾ  ದಗ್ಗುಭಾಟಿ  ತಮನ್ನಾ ಮುಂತಾದವರೇ ಈ ಸಿನಿಮಾದಲ್ಲೂ ಅಭಿನಯಿಸೋ ಸಾಧ್ಯತೆಯಿದೆ.ಆದ್ರೆ ಅದಕ್ಕೆಲ್ಲಾ ಉತ್ತರ ಸಿಗಬೇಕಾದ್ರೆ ಕೆಲ ದಿನ ಕಾಯಲೇ ಬೇಕು.

Share this Story:

Follow Webdunia kannada