Select Your Language

Notifications

webdunia
webdunia
webdunia
webdunia

ಫರ್ಹಾನ್ ಅಖ್ತರ್ ಮುಂದಿನ ಚಿತ್ರದಲ್ಲಿ ಸೂರಜ್ ಪಾಂಚೋಲಿ

ಫರ್ಹಾನ್ ಅಖ್ತರ್ ಮುಂದಿನ ಚಿತ್ರದಲ್ಲಿ ಸೂರಜ್ ಪಾಂಚೋಲಿ
ಮುಂಬೈ , ಗುರುವಾರ, 21 ಜುಲೈ 2016 (17:19 IST)
ಫರ್ಹಾನ್ ಅಖ್ತರ್ ಮುಂದಿನ ಪ್ರೋಡೆಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಸೂರಜ್ ಪಾಂಚೋಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 2015ರಲ್ಲಿ ಕಡೆಯದಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸೂರಜ್ ಇದೀಗ ಮತ್ತೆ ತೆರೆ ಮೇಲೆ ಬರಲಿದ್ದಾರಂತೆ.


ನಾನು ಇದುವರೆಗೂ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ತಿಳಿಸಿರುವ ಸೂರಜ್ ಎಲ್ಲವು ಚೆನ್ನಾಗಿ ನಡೆದರೆ ನಾನು ಚಿತ್ರದಲ್ಲಿ ನಟಟಿಸಲು ಸಿದ್ಧನಿದ್ದೇನೆ. ಆದ್ರೆ ಡೇಟಿಂಗ್ ಸಮಸ್ಯೆ ಇದ್ದು. ಈ ಬಗ್ಗೆ ಸಹ ನಿರ್ಮಾಪಕ ರಿತೇಶ್ ಸಿದ್ಧವಾನಿ ಅವರನ್ನು ಕೇಳಿ ಎಂದು ಸೂರಜ್ ತಿಳಿಸಿದ್ದಾರೆ. 
 
ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ಧವಾನಿ ಜತೆಗೂಡಿ ನಿರ್ಮಾಣಕ್ಕೆ ಮುಂದಾಗಿರುವ ಚಿತ್ರದಲ್ಲಿ ಸೂರಜ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇದುವರೆಗೂ ಯಾವುದೇ ಫೈನಲ್ ಆಗಿಲ್ಲ.

ಈ ಹಿಂದೆ ಸೂರಜ್ ತಾನು ಆಕ್ಷನ್ ಸಿನಿಮಾಗಳಲ್ಲಿ ನಟಿಸೋದಕ್ಕಿಂತ ಸದ್ಯ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಬೇಕು ಅಂತಾ ಆಸೆಯಿದೆ ಎಂದು ಹೇಳಿದ್ದರು. ಅದು ಕೂಡ ಅವರ ಸಿನಿಮಾಗಳಲ್ಲಿ ದೀಪಿಕಾ ಅಥವಾ ಆಲಿಯಾ ಭಟ್ ನಾಯಕಿಯಾಗಿರಬೇಕು ಅಂದಿದ್ದರು. ಅವರೊಂದಿಗೆ ತಾನು ತೆರೆ ಮೇಲೆ ರೋಮ್ಯಾನ್ಸ್ ಮಾಡಬೇಕು ಅಂತಾ ಸೂರಜ್ ಹೇಳಿದ್ದರು. ಅವರಿಬ್ಬರ ಜೊತೆ ನಟಿಸೋದೇ ನನ್ನ ಆಸೆ ಎಂದಿದ್ದಾರೆ.
 
ಇನ್ನು ತಾನು ಕೇವಲ ರೋಮ್ಯಾಂಟಿಕ್ ಸಿನಿಮಾಗಳನ್ನೇ ಮಾಡಬೇಕು ಅಂದುಕೊಂಡಿದ್ದೇನೆ ಎಂದಿರುವ ಸೂರಜ್ ಪಾಂಚೋಲಿ, ಅದರಲ್ಲಿ ಡ್ಯಾನ್ಸ್ ಇದ್ದರೂ ಪರವಾಗಿಲ್ಲ. ಆದ್ರೆ ಸಿನಿಮಾದಲ್ಲಿ ನಾನು ಬಾಡಿ ಬಿಲ್ಡಿಂಗ್ ಹಾಗೂ ಆಕ್ಷನ್ ಸೀನ್ ಗಳು ಇರೋದನ್ನು ಇಚ್ಛಿಸೋದಿಲ್ಲ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಯುವಕರು ಭಾರತೀಯ ಸಿನಿಮಾಗಳನ್ನು ನೋಡುತ್ತಿಲ್ಲ- ಇರ್ಫಾನ್ ಖಾನ್