Select Your Language

Notifications

webdunia
webdunia
webdunia
webdunia

ಮೋದಿ ಬಗ್ಗೆ ಹಾಸ್ಯ ವಿಡಿಯೋ ಶೇರ್ ಮಾಡಿದ ಸೋನು ನಿಗಮ್..ಬೇಸರಿಸಿಕೊಂಡ ಅಭಿಮಾನಿಗಳು

ಮೋದಿ ಬಗ್ಗೆ ಹಾಸ್ಯ ವಿಡಿಯೋ ಶೇರ್ ಮಾಡಿದ ಸೋನು ನಿಗಮ್..ಬೇಸರಿಸಿಕೊಂಡ ಅಭಿಮಾನಿಗಳು
ದೆಹಲಿ , ಶನಿವಾರ, 30 ಜುಲೈ 2016 (15:46 IST)
ಖ್ಯಾತ ಗಾಯಕ ಸೋನು ನಿಗಮ್ ಭಾರತದ ಪ್ರಧಾನಿ ಮೋದಿ ಕುರಿತು ವಿಡಿಯೋ ಶೇರ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.. ಈ ವಿಡಿಯೋದಲ್ಲಿ ಪ್ರಧಾನಿ ಮಂತ್ರಿ ಮೋದಿಯ ಕೆಲ ಭಾಷಣದ ದೃಶ್ಯಗಳನ್ನು ತೆಗೆದುಕೊಂಡು ಅಪಹಾಸ್ಯ ಮಾಡಲಾಗಿದೆ. 







ಮೋದಿ ಮಾತನಾಡಿರುವ ಭಾಷಣದ ಕೆಲ ಲೈನ್ ಗಳನ್ನು ಆಯ್ಕೆ ಮಾಡಿಕೊಂಡು ಪಿಕೆ ಚಿತ್ರದ ಹಾಡು ಲವ್ ಈಸ ಎ ವೆಸ್ಟ್ ಆಫ್ ಟೈಮ್ ಎಂಬ ಹಾಡನ್ನು ಬಳಸಿಕೊಂಡು ತಮಾಷೆ ಮಾಡಲಾಗಿದೆ. ಈ ರೀತಿ ವಿಡಿಯೋ ಶೇರ್ ಮಾಡಿರುವುದಕ್ಕೆ ಸೋನು ನಿಗಮ್‌ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ. ಈ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡಿರುವುದು ಕಂಡು ಬಂದಿದೆ, 
 
ಸೋನು ನಿಗಮ್ ನಾನು ನಿಮ್ಮ ಅಭಿಮಾನಿಯಾಗಿದ್ದು, ನಾನು ನಿಮನ್ನ ಇನ್ಮೇಲೆ ಫಾಲೋ ಮಾಡುವುದಿಲ್ಲ, ನೀವು ಪ್ರಧಾನಿ ಮೋದಿಯವರನ್ನು ಈ ರೀತಿ ಅಪಹಾಸ್ಯ ಮಾಡಿರುವುದು ಸರಿಯಲ್ಲ. ನಾನು ನಿಮಗೆ ಬೆಂಬಲ ನೀಡುವುದಿಲ್ಲ ಎಂದು ಅಭಿಮಾನಿಯೊಬ್ಬರು ಗರಂ ಆಗಿ ತಿಳಿಸಿದ್ದಾರೆ. 
 
ಮತ್ತೊಬ್ಬ ಅಭಿಮಾನಿಯೊಬ್ಬರು ಈ ರೀತಿಯಾಗಿ ಟೀಕೆ ವ್ಯಕ್ತಪಡಿಸಿದ್ದಾರೆ. ಸೋನು ನಿಗಮ್ ಜೀ ನಾನು ನಿಮ್ಮ ಅಭಿಮಾನಿ.. ಪ್ರಧಾನಿ ನರೇಂದ್ರ ಮೇದಿ ಅವರೊಬ್ಬ ಭಾರತವನ್ನು ಪ್ರತಿನಿಧಿಸುವ ನಾಯಕ, ಅಂಥ ವ್ಯಕ್ತಿತ್ವದವರನ್ನು ತಮಾಷೆ ಮಾಡುವುದು ಎಷ್ಟು ಸರಿ. ಮೊದಲು ವಿಡಿಯೋವನ್ನು ತೆಗೆದು ಹಾಕಿ ಎಂದು ಅಭಿಮಾನಿಯೊಬ್ಬರು ಖಾರವಾಗಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿರುವ ಮಾಡಿ ಕ್ರಿಕೆಟಿಗ ಬ್ರೆಟ್ ಲೀ